ಕೇಪ್ ಟೌನ್: ದಕ್ಷಿಣ ಆಫ್ರಿಕಾದ (South Africa) ಕೇಪ್ ಟೌನ್‌ನಲ್ಲಿ (Cape Town) 8 ವರ್ಷದ ಭಾರತೀಯ ಮೂಲದ ಬಾಲಕಿಯ (Girl) ಅಪಹರಣ (Abduction) ಪ್ರಕರಣದ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿರುವುದಕ್ಕೆ ನಗರದ ನಿವಾಸಿಗಳು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ನಗರದ ರೈಲ್ಯಾಂಡ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಬಿರಾ ದೇಖ್ತಾ (8) ನವೆಂಬರ್ 4 ರಂದು ಬೆಳಗ್ಗೆ ಇನ್ನೊಬ್ಬ ವಿದ್ಯಾರ್ಥಿನಿಗಾಗಿ ಕಾಯುತ್ತಿದ್ದಾಗ ಕೆಲವು ಅಪರಿಚಿತ ವ್ಯಕ್ತಿಗಳು ಅಲ್ಲಿಗೆ ಬಂದು, ಆಕೆಯ ಶಾಲಾ ವಾಹನದಿಂದ ಅಪಹರಿಸಿದ್ದರು.
Advertisement
Advertisement
ಬಾಲಕಿಯ ಪೋಷಕರು ಕೆಲವು ವರ್ಷಗಳ ಹಿಂದೆ ಭಾರತದಿಂದ ಕೇಪ್ ಟೌನ್‌ನಲ್ಲಿ ನೆಲೆಸಿದ್ದರು. ಆಕೆಯ ತಂದೆ ನಗರದಲ್ಲಿ ಮೊಬೈಲ್ ಫೋನ್ ಅಂಗಡಿ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸದ್ಯಕ್ಕಿಲ್ಲ ಹಾಲು, ಮೊಸರು ದರ ಏರಿಕೆ- KMF ದರ ಏರಿಕೆಗೆ ಸಿಎಂ ತಡೆ
Advertisement
ಬಾಲಕಿಯ ಅಪಹರಣ ನಡೆದು 10 ದಿನ ಕಳೆದಿದ್ದರೂ ಅಲ್ಲಿ ಅಧಿಕಾರಿಗಳು ಪ್ರಕರಣದ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳದ ಕಾರಣ ಕೇಪ್ ಟೌನ್‌ನ ಭಾರತೀಯ ಮೂಲದ ಜನರೇ ಹೆಚ್ಚಿರುವ ನಗರವಾದ ಗೇಟ್ಸ್‌ವಿಲ್ಲೆ ನಿವಾಸಿಗಳು ಸರಿಯಾದ ರೀತಿಯಲ್ಲಿ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
Advertisement
ಗೇಟ್ಸ್‌ವಿಲ್ಲೆ ನಿವಾಸಿಗಳು ತನಿಖೆಯ ನಿರ್ಲಕ್ಷ್ಯದ ಹಿನ್ನೆಲೆ ಅಂಥ್ಲೋನ್‌ನಲ್ಲಿರುವ ಪೊಲೀಸ್ ಠಾಣೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ. ಬಾಲಕಿ ಅಬಿರಾಳನ್ನು ಹುಡುಕಿ, ಪೋಷಕರಿಗೆ ಮರಳಿಸುವಂತೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ರೈಲ್ಯಾಂಡ್ಸ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೂಡಾ ಶಾಲಾ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಫಲಕಗಳನ್ನು ಹಿಡಿದು, ‘ಅಬಿರಾಳನ್ನು ಮರಳಿ ತನ್ನಿ’ ಮತ್ತು ‘ನಮ್ಮ ಸ್ನೇಹಿತೆಯನ್ನು ಹಿಂದಿರುಗಿಸಿ’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಇದನ್ನೂ ಓದಿ: ಕಲ್ಲು ಕ್ವಾರಿ ಕುಸಿತ – 8ಕ್ಕೇರಿದ ಸಾವಿನ ಸಂಖ್ಯೆ, ನಾಲ್ವರಿಗಾಗಿ ಹುಡುಕಾಟ