ಗಾಂಧಿನಗರ: ಪ್ರಧಾನಿ ನರೇಂದ್ರ ಮೋದಿ ತಾಯಿಯ 100ನೇ ವರ್ಷದ ಹುಟ್ಟು ಹಬ್ಬದ ವೇಳೆ ಬರೆದುಕೊಂಡಿದ್ದ ಬ್ಲಾಗ್ ಒಂದರಲ್ಲಿ ತಮ್ಮ ಬಾಲ್ಯ ಸ್ನೇಹಿತ ಅಬ್ಬಾಸ್ ಕುರಿತಾಗಿ ಹೇಳಿಕೊಂಡಿದ್ದಾರೆ.
Advertisement
ಬ್ಲಾಗ್‍ನಲ್ಲಿ ತಮ್ಮ ತಾಯಿ ಬಾಲ್ಯದಲ್ಲಿ ಹಾಗೂ ಮದುವೆಯಾದ ಬಳಿಕ ಅನುಭವಿಸಿದ ಕಷ್ಟಗಳು ಮತ್ತು ಸವಾಲುಗಳ ಬಗ್ಗೆ ವರ್ಣಿಸಿದ್ದರು. ಜೊತೆಗೆ ಅನೇಕ ಸ್ಥಳಗಳು, ವ್ಯಕ್ತಿಗಳನ್ನು ಸ್ಮರಿಸಿಕೊಂಡಿದ್ದರು. ಅವರಲ್ಲಿ ತಮ್ಮ ತಂದೆಯ ಗೆಳೆಯನ ಮಗ ಅಬ್ಬಾಸ್‍ರನ್ನು ನೆನಪಿಸಿಕೊಂಡಿದ್ದರು. ಆ ಬಳಿಕ ಅಬ್ಬಾಸ್ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿತ್ತು. ಇದನ್ನೂ ಓದಿ: ಹಕ್ಕಿ ಡಿಕ್ಕಿಯಾಗಿ 185 ಮಂದಿ ಪ್ರಯಾಣಿಕರಿದ್ದ ವಿಮಾನದಲ್ಲಿ ಬೆಂಕಿ!
Advertisement
This is #Abbas Bhai, whom PM @narendramodi mentioned in his blog today. Abbasbhai has retired from Gujarat govt s food and civil supplies department and lives in #Sidney #Australia with his family. PM Modi recalled him in his blog that he wrote on his mother's 100th birthday. pic.twitter.com/ur60eiphkw
— Deepal.Trivedi #Vo! (@DeepalTrevedie) June 18, 2022
Advertisement
ಮೋದಿ ಬರೆದುಕೊಂಡಂತೆ. ನನ್ನ ತಂದೆಯ ಆಪ್ತ ಸ್ನೇಹಿತ ಪಕ್ಕದ ಗ್ರಾಮದಲ್ಲಿ ವಾಸಿಸುತ್ತಿದ್ದರು. ಅವರ ಅಕಾಲಿಕ ಮರಣದ ನಂತರ, ನನ್ನ ತಂದೆ ತಮ್ಮ ಗೆಳೆಯನ ಮಗ ಅಬ್ಬಾಸ್‍ನನ್ನು ನಮ್ಮ ಮನೆಗೆ ಕರೆದುಕೊಂಡು ಬಂದರು. ಆತ ನಮ್ಮ ಜೊತೆ ಇದ್ದು ಶಿಕ್ಷಣ ಪೂರೈಸಿದರು ಎಂದು ಬರೆದುಕೊಂಡಿದ್ದರು. ಈ ಬಗ್ಗೆ ಮೋದಿ ಅವರ ಅಣ್ಣ ಮಾಧ್ಯಮವೊಂದಕ್ಕೆ ಮಾಹಿತಿ ಹಂಚಿಕೊಂಡಿದ್ದು, ಅಬ್ಬಾಸ್ ಇದೀಗ ಆಸ್ಟ್ರೇಲಿಯಾದಲ್ಲಿದ್ದಾರೆ. ಈ ಹಿಂದೆ ಗುಜರಾತ್‍ನಲ್ಲಿ ಸರ್ಕಾರಿ ಉದ್ಯೋಗಿಯಾಗಿದ್ದರು. ಆ ಬಳಿಕ ನಿವೃತ್ತಿಹೊಂದಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸುರಂಗ ಮಾರ್ಗದಲ್ಲಿ ಬಿದ್ದಿದ್ದ ಕಸವನ್ನು ಬರಿಗೈಯಲ್ಲೇ ತೆಗೆದ ಮೋದಿ
Advertisement
This is Abbas, whom PM Modi mentioned in his blog today. Abbas bhai has retired from Gujarat govt's food and civil supplies department and lives in Sydney Australia with his family. PM Modi recalled him in his blog that he wrote on his mother's 100th birthday pic.twitter.com/IrEZf1c7Uc
— Ashish K???????? (@KpNationalist) June 18, 2022
ಅಬ್ಬಾಸ್ ಅವರಿಗೆ ಇಬ್ಬರೂ ಮಕ್ಕಳು ಹಿರಿಯ ಮಗ ಗುಜರಾತ್‍ನಲ್ಲಿ ನೆಲೆಸಿದ್ದು, ಕಿರಿಯ ಮಗ ಆಸ್ಟ್ರೇಲಿಯಾದಲ್ಲಿ ನೆಲೆಸಿರುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತ ನೆಟ್ಟಿಗರು ಅಬ್ಬಾಸ್ ಕುರಿತಾಗಿ ಮೋದಿ ಬರೆದುಕೊಂಡ ಬಳಿಕ ವಿವಿಧ ರೀತಿಯ ಕಾಮೆಂಟ್ ಹರಿದಾಡುತ್ತಿದೆ.