ಪಾಟ್ನಾ: ಸುಮಾರು 185 ಮಂದಿ ಪ್ರಯಾಣಿಕರಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪಾಟ್ನಾ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶಗೊಂಡ ಘಟನೆ ಇಂದು ನಡೆದಿದೆ.
ವಿಮಾನ ದೆಹಲಿಗೆ ಹೊರಟಿತ್ತು. ಆದರೆ ಟೇಕಾಫ್ ಆಗುತ್ತಿದ್ದಂತೆಯೇ ಎಡ ಬದಿಯ ಎಂಜಿನ್‍ಗೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Cockpit crew of Patna-Delhi SpiceJet flight after take-off during rotation suspected bird hit on engine no. 1. As a precautionary measure, flight captain shut down affected engine & returned to Patna. Post flight inspection shows bird hit with 3 fan blades damaged: SpiceJet Spox
— ANI (@ANI) June 19, 2022
Advertisement
ವಿಮಾನ ಟೇಕಾಫ್ ಆಗುತ್ತಿರುವುದನ್ನು ಸ್ಥಲೀಯರು ವೀಡಿಯೋ ಮಾಡಿದ್ದರು. ಈ ವೇಳೆ ಬೆಂಕಿ ಕಾಣಿಸಿರುವುದು ಬೆಳಕಿಗೆ ಬಂದಿದೆ. ಕೂಡಲೆ ವಿಮಾನವು ನಿಲ್ದಾಣಕ್ಕೆ ಹಿಂದಿರುಗಿದ್ದು, ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಟೇಕ್-ಆಫ್ ಸಮಯದಲ್ಲಿ ಹಕ್ಕಿಗೆ ಪೆಟ್ಟಾಗಿದೆ ಎಂದು ಪೈಲಟ್‍ಗಳು ಶಂಕಿಸಿದ್ದಾರೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ಮೂಲಗಳು ತಿಳಿಸಿವೆ.
Advertisement
#WATCH Patna-Delhi SpiceJet flight safely lands at Patna airport after catching fire mid-air, all 185 passengers safe#Bihar pic.twitter.com/vpnoXXxv3m
— ANI (@ANI) June 19, 2022
Advertisement
ಘಟನೆ ಬಗ್ಗೆ ಪ್ರಯಾಣಿಕರು ಪ್ರತಿಕ್ರಿಯಿಸಿ, ವಿಮಾನ ಟೇಕ್-ಆಫ್ ಆದ ಕೂಡಲೇ ಅದರೊಳಗಿದ್ದ ನಮಗೆ ಭಯ ಆರಂಭವಾಯಿತು. ಅಲ್ಲದೆ ಲೈಟ್ ಗಳು ಆಫ್ ಆಗುತ್ತಿದ್ದಂತೆಯೇ ಆದ ಭಯ ಅಷ್ಟಿಷ್ಟಲ್ಲ ಎಂದು ಹೇಳಿದರು.
Pilots handled the situation well. Only single engine was functioning when plane landed back. Engineers inspected the aircraft, it was confirmed that fan blade & engine were damaged as a bird hit it. DGCA will probe further: Gurcharan Arora, Chief of flight operations, SpiceJet pic.twitter.com/Yv7WbywxQB
— ANI (@ANI) June 19, 2022
ಈ ಸಂಬಂಧ ಪಾಟ್ನಾ ಡಿಎಂ ಚಂದ್ರಶೇಖರ್ ಸಿಂಗ್ ಮಾತನಾಡಿ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಸ್ಥಳೀಯರು ಮೊದಲು ಗಮನಿಸಿದ್ದಾರೆ. ನಂತರ ಅವರು ಜಿಲ್ಲಾ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ದೆಹಲಿಗೆ ಹೊರಟಿದ್ದ ವಿಮಾನವು ಪಾಟ್ನಾ ವಿಮಾನ ನಿಲ್ದಾಣಕ್ಕೆ ಮರಳಿತು. ಎಲ್ಲಾ 185 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ ಎಂದು ಮಾಹಿತಿ ನಿಡಿದರು.
#WATCH Delhi bound SpiceJet flight returns to Patna airport after reporting technical glitch which prompted fire in the aircraft; All passengers safely rescued pic.twitter.com/Vvsvq5yeVJ
— ANI (@ANI) June 19, 2022
ಸ್ಪೈಸ್ ಜೆಟ್ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಮಾಡಿದೆ ಎಂದು ಪಾಟ್ನಾ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ. ಯಾವ ಪ್ರಯಾಣಿಕರಿಗೆ ಹಾನಿಯಾಗಿಲ್ಲ. ದೆಹಲಿಗೆ ಅವರ ಪ್ರಯಾಣವನ್ನು ಪರ್ಯಾಯ ವಿಮಾನದ ಮೂಲಕ ವ್ಯವಸ್ಥೆಗೊಳಿಸಲಾಗುತ್ತಿದೆ. ಬೆಂಕಿಗೆ ಕಾರಣವೇನು ಎಂಬುದು ತನಿಖೆಯ ವಿಷಯವಾಗಿದೆ ಎಂದು ಅವರು ಹೇಳಿದರು.