ಯಾದಗಿರಿ: ವಿಧಾನಸಭೆ ಚುನಾವಣೆ (Election) ಸಮೀಪಿಸುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ (BJP) ಪಕ್ಷಾಂತರದ ಪರ್ವ ತಲೆಬಿಸಿ ಉಂಟುಮಾಡಿದೆ. ಕಳೆದ ವಾರವಷ್ಟೇ ಎಂಎಲ್ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ್ದ ಬಾಬುರಾವ್ ಚಿಂಚನಸೂರ್ (Baburao Chinchanasur) ಬಿಜೆಪಿಗೆ ಶಾಕ್ ನೀಡಿದ್ದರು. ಆದರೆ ಈಗ ಮತ್ತೊಬ್ಬ ಪ್ರಭಾವಿ ನಾಯಕ, ಮಾಜಿ ಸಚಿವ ಎ.ಬಿ.ಮಾಲಕರೆಡ್ಡಿಯೂ (A.B.Malaka Reddy) ಬಿಜೆಪಿ ಬಿಟ್ಟು ಕಾಂಗ್ರೆಸ್ (Congress) ಸೇರುವುದಕ್ಕೆ ಮುಂದಾಗಿದ್ದಾರೆ.
ಯಾದಗಿರಿ (Yadgiri) ಮತಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡುವ ತವಕದಲ್ಲಿರುವ ಹಿರಿಯ ರಾಜಕಾರಣಿ, ಮಾಜಿ ಸಚಿವ ಡಾ.ಎ.ಬಿ.ಮಾಲಕರೆಡ್ಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರನ್ನು ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸೇರುವ ಆಸೆಯಿಂದ ಡಿಕೆಶಿಯವರನ್ನು ಭೇಟಿಯಾಗಿ, ಈಗಾಗಲೇ ಒಂದು ಸುತ್ತಿನ ಮಾತುಕತೆಯನ್ನೂ ಆಡಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲಿ ಮಾಲಕರೆಡ್ಡಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತೇ ‘ಕೈ’ ಹಿಡಿದಿದ್ದರಿಂದ ಮಾಲಕರೆಡ್ಡಿಯೂ ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೂ ಓದಿ: ನನ್ನ ತಂದೆ ಯಾವತ್ತೂ ರಾಜಕೀಯ ಪಾಠ ಹೇಳಿಕೊಡಲಿಲ್ಲ – ಸಾರ್ವಜನಿಕ ವೇದಿಕೆಯಲ್ಲಿ ದರ್ಶನ್ ಧ್ರುವನಾರಾಯಣ ಮೊದಲ ಭಾಷಣ
Advertisement
Advertisement
ಕಳೆದ ಎರಡು ತಿಂಗಳ ಹಿಂದೆಯೇ ಮಾಲಕರೆಡ್ಡಿ ಕಾಂಗ್ರೆಸ್ ಸೇರಲು ಪ್ರಯತ್ನ ನಡೆಸಿದ್ದರು. ಆದರೆ ಹೈಕಮಾಂಡ್ ಕೇರ್ ಮಾಡಿರಲಿಲ್ಲ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೈ ತೊರೆದಿದ್ದ ನಾಯಕರೆಲ್ಲರೂ ಘರ್ ವಾಪ್ಸಿ ಆಗುತ್ತಾರೆ ಎನ್ನಲಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಎರಡು ದಿನಗಳ ಹಿಂದೆ ಬಾಬುರಾವ್ ಚಿಂಚನಸೂರ್ ಈ ವಿಚಾರ ಪ್ರಸ್ತಾಪ ಮಾಡಿದ್ದರು. ಕಲ್ಯಾಣ ಕರ್ನಾಟಕ ಭಾಗದ ಪ್ರಭಾವಿ ನಾಯಕರು ಮತ್ತೆ ಕಾಂಗ್ರೆಸ್‌ಗೆ ವಾಪಾಸ್ ಬರುತ್ತಾರೆ ಎಂದಿದ್ದರು. ಅದರಂತೆ ಈಗ ಎ.ಬಿ.ಮಾಲಕರೆಡ್ಡಿ ʼಕೈʼ ಹಿಡಿಯುವುದು ಪಕ್ಕಾ ಆಗಿದೆ. ಇದರಿಂದಾಗಿ ಒಂದು ವಾರದ ಅಂತರದಲ್ಲಿ ಕಲ್ಯಾಣ ಕರ್ನಾಟಕದ ಬಿಜೆಪಿಯ ಎರಡನೇ ವಿಕೆಟ್ ಪತನ ಆಗೋದು ಗ್ಯಾರಂಟಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಭಾವಿ ಆಗಿರುವ ಮಾಲಕರೆಡ್ಡಿ ಬಿಜೆಪಿ ಬಿಡೋದ್ರಿಂದ ಇಡೀ ಕಲ್ಯಾಣ ಭಾಗದಲ್ಲಿ ಬಿಜೆಪಿಗೆ ಬಹುದೊಡ್ಡ ಹಿನ್ನೆಡೆಯಾಗುತ್ತದೆ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಇದನ್ನೂ ಓದಿ: ನನ್ನ ಕೊನೆ ಚುನಾವಣೆ ಹುಟ್ಟೂರಿನಲ್ಲಿ ಆಗಬೇಕೆಂಬ ಆಸೆ: ಸಿದ್ದರಾಮಯ್ಯ
Advertisement
ಸದ್ಯ ವಯಸ್ಸಿನ ಕಾರಣದಿಂದ ಬಿಜೆಪಿಯಲ್ಲಿ ಮಾಲಕರೆಡ್ಡಿಗೆ ಟಿಕೆಟ್ ಸಿಗುವುದು ಅನುಮಾನ ಇರುವುದರಿಂದ ಹಲವು ತಿಂಗಳಿನಿಂದ ಅವರು ಪಕ್ಷದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ. ಇನ್ನೂ ಯಾದಗಿರಿ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ದಾಳ್‌ಗೆ ಟಕ್ಕರ್ ಕೊಡಬಲ್ಲ ಏಕೈಕ ವ್ಯಕ್ತಿ ಮಾಲಕರೆಡ್ಡಿ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ. ಹೀಗಾಗಿ ಕಾಂಗ್ರೆಸ್‌ನಿಂದ ತಾವು ನಿಲ್ಲಬೇಕು ಅಥವಾ ಪುತ್ರಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ಪ್ಯಾನ್ – ಆಧಾರ್ ಕಾರ್ಡ್ ಲಿಂಕ್; ಜೂನ್ 30 ರವರೆಗೆ ಅವಧಿ ವಿಸ್ತರಣೆ
Advertisement
ಕಾಂಗ್ರೆಸ್ ಮೂರು ದಿನಗಳ ಹಿಂದಷ್ಟೇ ರಾಜ್ಯದ 124 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದ್ದು, ಇದರಲ್ಲಿ ಜಿಲ್ಲೆಯ ಶಹಾಪುರಕ್ಕೆ ಹಾಲಿ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ, ಸುರಪುರಕ್ಕೆ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ಹೆಸರು ಫೈನಲ್ ಮಾಡಿದೆ. ಆದರೆ ಗುರುಮಿಠಕಲ್ ಮತ್ತು ಯಾದಗಿರಿ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಸಸ್ಪೆನ್ಸ್‌ನಲ್ಲಿ ಇಟ್ಟಿದ್ದು, ಟಿಕೆಟ್‌ಗಾಗಿ ಟವೆಲ್ (ದಸ್ತಿ) ಹಾಕಿದ ಆಕಾಂಕ್ಷಿಗಳಲ್ಲಿ ಎದೆಬಡಿತ ಜೋರಾಗಿದೆ. ಇದನ್ನೂ ಓದಿ: ಮೀಸಲಾತಿ ವಿಚಾರಕ್ಕೆ ಜೈಲಿಗೋದರೂ ಚಿಂತೆಯಿಲ್ಲ ; SDPI ಎಚ್ಚರಿಕೆ