ಶಿಮ್ಲಾ(ಹಿಮಾಚಲ ಪ್ರದೇಶ): ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಹಿಮಾಚಲ ಪ್ರದೇಶದ ಮಂಡಿಯಲ್ಲಿಂದು `ಮಿಷನ್ ಹಿಮಾಚಲ್’ ರೋಡ್ ಶೋ ನಡೆಸಿದರು.
ಈಚೆಗಷ್ಟೇ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಆಮ್ ಆದ್ಮಿ ಪಕ್ಷವು ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ಬಯಸುತ್ತಿದ್ದು, ಹಿಮಾಚಲ ಪ್ರದೇಶದತ್ತ ಚಿತ್ತ ಹಾಯಿಸಿದೆ. ಇದನ್ನೂ ಓದಿ: ತರಗತಿಯಲ್ಲಿ ಹಿಂದೂ ಪುರಾಣಗಳಲ್ಲಿನ ʼಅತ್ಯಾಚಾರʼ ಉಲ್ಲೇಖಿಸಿ ಪಾಠ- ಮುಸ್ಲಿಂ ವಿವಿಯಿಂದ ಪ್ರಾಧ್ಯಾಪಕ ಸಸ್ಪೆಂಡ್
Advertisement
Advertisement
ರೋಡ್‌ಶೋ ವೇಳೆ ಮಾತನಾಡಿದ ಕೇಜ್ರಿವಾಲ್, ಮೊದಲು ನಾವು ದೆಹಲಿಯಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಿದೆವು. ನಂತರ ಪಂಜಾಬ್‌ನಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದೆವು. ಇದೀಗ ಹಿಮಾಚಲ ಪ್ರದೇಶದಿಂದ ಭ್ರಷ್ಟಾಚಾರ ಕಿತ್ತೊಗೆಯುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
Advertisement
ಈ ವರ್ಷಾಂತ್ಯದಲ್ಲಿ ಹಿಮಾಚಲ ಪ್ರದೇಶ ಮತ್ತು ಗುಜರಾತ್ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಎಎಪಿ 92 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇಲ್ಲಿಯೂ ಗೆದ್ದು ಹಿಮಾಚಲ ಪ್ರದೇಶದಿಂದ ಭ್ರಷ್ಟಾಚಾರವನ್ನು ಬೇರುಸಹಿತ ಕಿತ್ತುಹಾಕುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಜನಕಲ್ಯಾಣ ಯೋಜನೆ ರೂಪಿಸುವಾಗ ಬಜೆಟ್ ಮಿತಿಯಿರಲಿ: ಸುಪ್ರೀಂಕೋರ್ಟ್
Advertisement
Himachal Pradesh | AAP national convenor & Delhi CM Arvind Kejriwal along with Punjab CM Bhagwant Mann hold a roadshow in Mandi
First, we eradicated corruption in Delhi & then in Punjab, now it's time to uproot corruption from Himachal Pradesh: Arvind Kejriwal pic.twitter.com/UprzNyOeoo
— ANI (@ANI) April 6, 2022
ನಾವು ಸಾಮಾನ್ಯ ಜನರು, ನಮಗೆ ರಾಜಕೀಯ ಮಾಡುವುದು ಗೊತ್ತಿಲ್ಲ. ಬದಲಾಗಿ, ಜನರಿಗಾಗಿ ಕೆಲಸ ಮಾಡುವುದು, ಶಾಲೆಗಳನ್ನು ನಿರ್ಮಿಸುವುದು ಮತ್ತು ಭ್ರಷ್ಟಾಚಾರ ಕೊನೆಗೊಳಿಸುವುದು ಹೇಗೆ? ಎಂಬುದು ಗೊತ್ತಿದೆ. ಭಗವಂತ್ ಮಾನ್ ಮುಖ್ಯಮಂತ್ರಿಯಾದ ನಂತರ ನಾವು ಪಂಜಾಬ್‌ನಲ್ಲಿ ಕೇವಲ 20 ದಿನಗಳಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸಿದ್ದೇವೆ. ಈಗ ಹಿಮಾಚಲ ಪ್ರದೇಶದಲ್ಲೂ ಕ್ರಾಂತಿ ನಡೆಯಬೇಕು ಎಂದು ಕರೆ ನೀಡಿದರು.