ನವದೆಹಲಿ: 530 ದಿನಗಳ ಬಳಿಕ ಎಎಪಿ (AAP) ನಾಯಕ ಮನೀಶ್ ಸಿಸೋಡಿಯಾ (Manish Sisodia) ಶುಕ್ರವಾರ ಸಂಜೆ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಹೊಸ ಮದ್ಯ ನೀತಿ ಹಗರಣದ ಆರೋಪ ಎದುರಿಸುತ್ತಿದ್ದ ಮಾಜಿ ಡಿಸಿಎಂಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿತು. ಜೈಲಿನಿಂದ ಹೊರಬಂದ ಸಿಸೋಡಿಯಾರನ್ನು ಎಎಪಿ ಬೆಂಬಲಿಗರು ಸಂಭ್ರಮದಿಂದ ಬರಮಾಡಿಕೊಂಡರು. ಇದನ್ನೂ ಓದಿ: ಜಾಮೀನು ನಿರಾಕರಿಸುವ ಮೂಲಕ ಕೆಳ ಹಂತದ ನ್ಯಾಯಲಯಗಳು ಸುರಕ್ಷಿತ ಆಟವಾಡುತ್ತಿವೆ: ಸುಪ್ರೀಂ ಆಕ್ರೋಶ
Advertisement
Advertisement
ನಿಮ್ಮ ಪ್ರೀತಿ, ದೇವರ ಆಶೀರ್ವಾದ ಮತ್ತು ಸತ್ಯದ ಶಕ್ತಿಯಿಂದ, ಎಲ್ಲಕ್ಕಿಂತ ಮುಖ್ಯವಾಗಿ ಬಾಬಾಸಾಹೇಬರ ಕನಸಿನಿಂದಾಗಿ ನಾನು ಜೈಲಿನಿಂದ ಹೊರಬಂದಿದ್ದೇನೆ. ಯಾವುದೇ ಸರ್ವಾಧಿಕಾರಿ ಸರ್ಕಾರ ಅಧಿಕಾರಕ್ಕೆ ಬಂದರೆ ಮತ್ತು ಸರ್ವಾಧಿಕಾರದ ಕಾನೂನುಗಳನ್ನು ರಚಿಸಿ ವಿರೋಧ ಪಕ್ಷದ ನಾಯಕರನ್ನು ಕಂಬಿ ಹಿಂದೆ ಹಾಕಿದರೆ, ಆಗ ದೇಶದ ಸಂವಿಧಾನವು ಅವರನ್ನು ರಕ್ಷಿಸುತ್ತದೆ ಎಂದು ಸಿಸೋಡಿಯಾ ಭರವಸೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಂವಿಧಾನದ ಈ ಶಕ್ತಿಯೊಂದಿಗೆ ಅರವಿಂದ್ ಕೇಜ್ರಿವಾಲ್ ಅವರು ಜೈಲಿನಿಂದ ಹೊರಬರುತ್ತಾರೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಸಿಸೋಡಿಯಾ ಅವರ ಎಂಟನೇ ಮೇಲ್ಮನವಿ ಬಳಿಕ ಜಾಮೀನು ನೀಡಲಾಯಿತು. ಈ ನಡುವೆ, ಕಳೆದ ವರ್ಷ ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗಿತ್ತು. ಇದನ್ನೂ ಓದಿ: Bangladesh Violence | 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ವಾಪಸ್