ಗಾಂಧೀನಗರ: ಗುಜರಾತ್‍ನ ಪಾಟಿದಾರ್ ನಾಯಕ ಮಹೇಶ್ ಸವಾನಿ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹೇಶ್ ಸವಾನಿ ಸೂರತ್‍ನ ಉದ್ಯಮಿಯಾಗಿದ್ದು, ಕಳೆದ ವರ್ಷ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದರು. ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮಹೇಶ್ ಸವಾನಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ್ದರು. ಆದರೆ ಇದೀಗ ಶೀಘ್ರದಲ್ಲಿಯೇ ಮಹೇಶ್ ಸವಾನಿ ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ.
Advertisement
Advertisement
ಮಹೇಶ್ ಸವಾನಿ ಅವರು ಸಮಾಜ ಸೇವೆ ಮಾಡಲು ಬಯಸಿದ್ದು, ಯಾವುದೇ ರಾಜಕೀಯ ಪಕ್ಷದ ಜೊತೆ ಇರಲು ಬಯಸುವುದಿಲ್ಲ. ಜೊತೆಗೆ ಆರೋಗ್ಯದ ಕಾರಣದಿಂದ ಈ ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ತಿಳಿದ್ದಾರೆ. ಇದನ್ನೂ ಓದಿ: ರಜನಿಕಾಂತ್ ಪುತ್ರಿಗೆ ಡಿವೋರ್ಸ್ ನೀಡಿದ ಧನುಷ್
Advertisement
ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷಕ್ಕೆ ಸೇರಿದಾಗಿನಿಂದ ಅವರು ಸೌರಾಷ್ಟ್ರದಲ್ಲಿ ಎಎಪಿ ಪರ ಪ್ರಚಾರ ಮಾಡುತ್ತಿದ್ದಾರೆ. ಪೇಪರ್ ಸೋರಿಕೆ ವಿಚಾರವಾಗಿ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಿದರು. ಉಪವಾಸದ ಅಂತ್ಯದ ಬಳಿಕ ಎಎಪಿಗೆ ಸೇರ್ಪಡೆಯಾದ ನಂತರ ನನ್ನ ಆರೋಗ್ಯ ಹದಗೆಟ್ಟಿದೆ.
Advertisement
ಉಪವಾಸದಿಂದಾಗಿ ನನ್ನ ಶುಗರ್ ಲೆವೆಲ್‍ನಲ್ಲಿ ಏರುಪೇರಾಗುತ್ತಿದೆ ಮತ್ತು ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತಿಲ್ಲ. ನನ್ನ ಸಂಬಂಧಿಕರು ಮತ್ತು ಕುಟುಂಬದ ಸದಸ್ಯರು ಯವಾಗಲೂ ರಾಜಕೀಯವನ್ನು ತೊರೆಯುವಂತೆ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ನಾನು ಸಕ್ರಿಯವಾಗಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ನಾನು ಕುಟುಂಬ ಮತ್ತು ಸಾಮಾಜಿಕ ಕಾರ್ಯಗಳತ್ತ ಗಮನ ಹರಿಸಬೇಕಾಗಿದೆ. ಜೊತೆಗೆ ನಾನು ಶಾಲೆಗಳು ಮತ್ತು ಖಾಸಗಿ ವಿಶ್ವವಿದ್ಯಾಲಯವನ್ನು ಸಹ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಟ್ಟದಾಗಿ ಮುಟ್ಟಿದ್ದಕ್ಕಾಗಿ ಛೀಮಾರಿ ಹಾಕಿದ ಮಹಿಳೆಯನ್ನೇ ಕೊಲ್ಲಲು ಮುಂದಾದ ವ್ಯಕ್ತಿ ಅರೆಸ್ಟ್
ಆಮ್ ಆದ್ಮಿ ಪಕ್ಷದ ಗುಜರಾತ್ ಅಧ್ಯಕ್ಷ ಗೋಪಾಲ್ ಇಟಾಲಿಯಾ ಮತ್ತು ನಾಯಕ ಮನೋಜ್ ಸೊರಾಥಿಯಾ ವಿರುದ್ಧ ಹಲವು ನಾಯಕರು ಆಕ್ರೋಶಗೊಂಡಿದ್ದಾರೆ. ಉಸ್ತುವಾರಿ ಗುಲಾಬ್ ಸಿಂಗ್ ಯಾದವ್ ವಿರುದ್ಧ ಪಕ್ಷದ ಮುಖಂಡರು ಕೂಡ ಸಿಟ್ಟಾಗಿದ್ದಾರೆ.