ನವದೆಹಲಿ: ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಜೈಲಿನಲ್ಲಿ ಬಿಜೆಪಿ (BJP) ಹತ್ಯೆಯ ಸಂಚು ರೂಪಿಸಿದೆ ಎಂದು ಆಪ್‍ನ (AAP) ಸಚಿವೆ ಅತಿಶಿ (Atishi) ಗಂಭೀರ ಆರೋಪ ಮಾಡಿದ್ದಾರೆ.
ನ್ಯಾಯಾಲಯದ ಮುಂದೆ ಇಡಿ ಅಧಿಕಾರಿಗಳು ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಸಕ್ಕರೆ ಪ್ರಮಾಣವನ್ನು (Sugar Level) ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ ಬಳಿಕ ಅತಿಶಿ ಈ ಆರೋಪ ಮಾಡಿದ್ದಾರೆ. ಕೇಜ್ರಿವಾಲ್ ಟೈಪ್ 2 ಡಯಾಬಿಟಿಸ್ ರೋಗಿಯಾಗಿದ್ದಾರೆ. ಪದೇ ಪದೇ ಮನವಿ ಮಾಡಿದರೂ ಅವರಿಗೆ ಇನ್ಸುಲಿನ್ ನೀಡುತ್ತಿಲ್ಲ. ವೈದ್ಯರೊಂದಿಗೆ ವಿಡಿಯೋ ಸಮಾಲೋಚನೆಗೆ ಮಾಡಲಾದ ವಿನಂತಿಯನ್ನು ತಿರಸ್ಕರಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮಾವಿನಹಣ್ಣು, ಸಿಹಿತಿಂಡಿ ಸೇವಿಸಿ ಕೇಜ್ರಿವಾಲ್ ಸಕ್ಕರೆ ಪ್ರಮಾಣ ಹೆಚ್ಚಿಸಿಕೊಳ್ತಿದ್ದಾರೆ- ಇಡಿ ಆರೋಪ
Advertisement
Advertisement
ಚುನಾವಣೆಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಅವರನ್ನು ಜೈಲಿನಲ್ಲಿಟ್ಟು ಕೊಲ್ಲಲು ಯೋಜನೆ ರೂಪಿಸಲಾಗುತ್ತಿದೆ. ಕೇಜ್ರಿವಾಲ್ ಅವರು ತೀವ್ರ ಮಧುಮೇಹದಿಂದ ಬಳಲುತ್ತಿದ್ದಾರೆ ಎಂದು ಎಲ್ಲರಿಗೂ ತಿಳಿದಿದೆ. ಅವರು ಕಳೆದ 30 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಅವರು ಪ್ರತಿದಿನ 54 ಯೂನಿಟ್ ಇನ್ಸುಲಿನ್ ತೆಗೆದುಕೊಳ್ಳುತ್ತಾರೆ ಎಂದರು.
Advertisement
Advertisement
ಯಾವುದೇ ವೈದ್ಯರಲ್ಲಿ ಕೇಳಿ, ಅಂತಹ ತೀವ್ರ ಮಧುಮೇಹ ಇರುವವರು ಮಾತ್ರ ಇಷ್ಟು ಇನ್ಸುಲಿನ್ ತೆಗೆದುಕೊಳ್ಳುತ್ತಾರೆ. ಅದಕ್ಕಾಗಿಯೇ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರಿಗೆ ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ವೈದ್ಯರು ಹೇಳಿದ ಆಹಾರವನ್ನು ತಿನ್ನಲು ಸೂಚಿಸಿದೆ ಎಂದರು.
ಇಂದು ಭಾರತೀಯ ಜನತಾ ಪಕ್ಷವು ತನ್ನ ಅಂಗಸಂಸ್ಥೆ ಇಡಿ ಮೂಲಕ ಕೇಜ್ರಿವಾಲ್ ಆರೋಗ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಇಂದು ಇಡಿ ಪದೇ ಪದೇ ಸುಳ್ಳು ಹೇಳುತ್ತಿದೆ ಎಂದು ಇಡಿಯ ವಾದಗಳಿಗೆ ಅವರು ತಿರುಗೇಟು ನೀಡಿದರು. ಇದನ್ನೂ ಓದಿ: ಅಣಕು ಮತ ಎಣಿಕೆ ವೇಳೆ ಬಿಜೆಪಿಗೆ ಹೆಚ್ಚುವರಿ ಮತ – ವರದಿ ಸುಳ್ಳೆಂದ ಚುನಾವಣಾ ಆಯೋಗ