LatestMain PostNational

ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರ – ಮಾಜಿ ಲೆಫ್ಟಿನೆಂಟ್ ಗವರ್ನರ್ ಮೇಲೆ ಎಎಪಿ ಆರೋಪ

Advertisements

ನವದೆಹಲಿ: ರಾಷ್ಟ್ರ ರಾಜಧಾನಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು ಹೊಸ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೆಹಲಿ ಸರ್ಕಾರ ಶನಿವಾರ ಆರೋಪಿಸಿದೆ.

ಹೊಸ ಅಬಕಾರಿ ನೀತಿಯಿಂದ ರಾಜ್ಯಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಅದರ ಅನುಷ್ಠಾನದ ಬಗ್ಗೆ ಸಿಬಿಐ ತನಿಖೆ ನಡೆಸಿದ ಬಳಿಕ ಅದನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅನಿಲ್ ಬೈಜಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯದ ಮುಖ್ಯಮಂತ್ರಿ ಸುಳ್ಳು ಹೇಳಲ್ಲ ಎಂದು ಅಂದುಕೊಂಡಿದ್ದೇವೆ: ಯು.ಟಿ ಖಾದರ್

ಹೊಸ ಅಬಕಾರಿ ನೀತಿಯಿಂದಾಗಿ ಕೆಲವು ಬಾರ್ ಮಾಲೀಕರು ಸಾವಿರಾರು ಕೋಟಿ ರೂ. ಲಾಭ ಪಡೆದಿದ್ದಾರೆ. ಇದರಿಂದ ಸರ್ಕಾರ ಸಾವಿರಾರು ಕೋಟಿ ರೂ. ಕಳೆದುಕೊಂಡಿದೆ. ದೆಹಲಿ ಸರ್ಕಾರ 2021-22 ರ ಹೊಸ ಅಬಕಾರಿ ನೀತಿಯನ್ನು ಅನುಮತಿಸದ ಕಾರಣ ಕೆಲವು ಜನರಿಗೆ ಪ್ರಯೋಜನವಾಗಿದೆ ಎಂದರು. ಇದನ್ನೂ ಓದಿ: ರಾಜ್ಯಕ್ಕೆ ಭೇಟಿ ನೀಡಿದ್ದ ಅಮಿತ್‌ ಶಾ ಬಳಿ ನೆರೆ ಪರಿಹಾರ ಕೇಳಲಿಲ್ಲವೇಕೆ – BJP ಸರ್ಕಾರಕ್ಕೆ ಕಾಂಗ್ರೆಸ್‌ ಪ್ರಶ್ನೆ

ಅನಿಲ್ ಬೈಜಾಲ್ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿದ್ದಾಗ ಅರವಿಂದ್ ಕೇಜ್ರಿವಾಲ್ ಸರ್ಕಾರ 2021ರ ನವೆಂಬರ್ 17 ರಂದು ಹೊಸ ಅಬಕಾರಿ ನೀತಿಯನ್ನು ಸಿದ್ಧಪಡಿಸಿತ್ತು. 2021ರಲ್ಲಿ ಅಂಗೀಕರಿಸಿದ ಹೊಸ ಅಬಕಾರಿ ನೀತಿಯಲ್ಲಿ ಪ್ರತೀ ಪ್ರದೇಶಗಳಲ್ಲೂ ಸಮಾನ ಸಂಖ್ಯೆಯ ಮದ್ಯದ ಅಂಗಡಿಗಳು ಇರಬೇಕೆಂದು ನಿರ್ಧರಿಸಲಾಗಿದೆ. ಆದರೆ ಈ ಹಿಂದೆ ಒಂದೇ ಸ್ಥಳದಲ್ಲಿ 20 ಬಾರ್‌ಗಳಿದ್ದರೆ, ಇನ್ನೂ ಕೆಲವೆಡೆ ಒಂದೂ ಇರುತ್ತಿರಲಿಲ್ಲ ಎಂದು ತಿಳಿಸಿದರು.

Live Tv

Leave a Reply

Your email address will not be published.

Back to top button