– ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ
ನವದೆಹಲಿ: ದೆಹಲಿ ವಿಧಾನಸಭೆಯಲ್ಲಿ (Delhi Vidhan Sabha) ಮತ್ತೊಮ್ಮೆ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಯಶಸ್ವಿಯಾಗಿದ್ದಾರೆ. ಆಪ್ ಶಾಸಕರನ್ನು ಆಮಿಷವೊಡ್ಡಿ ಸೆಳೆಯಲು ಬಿಜೆಪಿ (BJP) ಪ್ರಯತ್ನಿಸುತ್ತಿದೆ ಎನ್ನುವ ಆರೋಪದ ಬೆನ್ನಲ್ಲೇ ಅವರು ಈ ಅವಧಿಯಲ್ಲಿ ಮೂರನೇ ಬಾರಿಗೆ ವಿಶ್ವಾಸಮತ ಸಾಬೀತುಪಡಿಸುವ ಕಾರ್ಯ ಮಾಡಿದರು.
Advertisement
ಸದನವು ನಂತರ ಧ್ವನಿ ಮತದ ಮೂಲಕ ವಿಶ್ವಾಸದ ನಿರ್ಣಯವನ್ನು ಅಂಗೀಕರಿಸಿತು, ಮತದಾನದ ಸಮಯದಲ್ಲಿ ಆಪ್‌ನ 62 ಶಾಸಕರ ಪೈಕಿ 54 ಮಂದಿ ಉಪಸ್ಥಿತರಿದ್ದರು. ಆಪ್‌ನ ಯಾವ ಶಾಸಕರು ಪಕ್ಷಾಂತರ ಮಾಡಿಲ್ಲ, ಇಬ್ಬರು ಶಾಸಕರು ಜೈಲಿನಲ್ಲಿದ್ದಾರೆ, ಕೆಲವರು ಅಸ್ವಸ್ಥರಾಗಿದ್ದಾರೆ ಇನ್ನು ಕೆಲವರು ನಗರದಿಂದ ಹೊರಗಿದ್ದರು. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿಗೆ ಚಪ್ಪಲಿ ಎಸೆತ
Advertisement
Advertisement
ವಿಶ್ವಾಸಮತ ಸಾಬೀತುಪಡಿಸಿದ ಬಳಿಕ ಮಾತನಾಡಿದ ಅವರು, ಆಮ್ ಅದ್ಮಿ ಪಕ್ಷವೂ ಬಿಜೆಪಿಗೆ ಪ್ರಬಲ ಪೈಪೋಟಿಯಾಗಿದೆ. ಈ ಕಾರಣಕ್ಕೆ ನಮಗೆ ಕಿರುಕುಳ ಕೊಡಲಾಗುತ್ತಿದೆ. 2029ರ ಚುನಾವಣೆಯಲ್ಲಿ ದೇಶವನ್ನು ಬಿಜೆಪಿಯಿಂದ ಆಪ್ ಮುಕ್ತಗೊಳಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಸಿದರು. ಇದನ್ನೂ ಓದಿ: 21 ವರ್ಷಗಳಿಂದ ಭೂಗತನಾಗಿದ್ದ ಮೋಸ್ಟ್ ವಾಂಟೆಡ್ ನಕ್ಸಲ್‌ನನ್ನ ಹಿಡಿದುಕೊಟ್ಟ ಕಾಡಾನೆ!
Advertisement
ನಮಗೆ ಸದನದಲ್ಲಿ ಬಹುಮತವಿದೆ ಆದರೆ ಬಿಜೆಪಿ ಎಎಪಿ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಕಾರಣ ಈ ವಿಶ್ವಾಸ ನಿರ್ಣಯದ ಅಗತ್ಯವಿತ್ತು. ಬಿಜೆಪಿ ʼರಾಮ ಭಕ್ತ’ ಎಂದು ಹೇಳಿಕೊಳ್ಳುತ್ತದೆ ಆದರೆ ಅವರು ನಮ್ಮ ಆಸ್ಪತ್ರೆಗಳಲ್ಲಿ ಬಡವರ ಔಷಧಿಗಳ ಪೂರೈಕೆ ನಿಲ್ಲಿಸಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದರು.
ನಾವು ಸರ್ಕಾರವನ್ನು ನಡೆಸುತ್ತಿದ್ದರೂ ಅವರು ಇಲಾಖೆಗಳು ಮತ್ತು ಅಧಿಕಾರಶಾಹಿಯ ಮೇಲೆ ನಿಯಂತ್ರಣದ ಮೂಲಕ ನಮ್ಮ ಕೆಲಸವನ್ನು ನಿಲ್ಲಿಸುತ್ತಿದ್ದಾರೆ. ನಮ್ಮ ನಾಯಕರನ್ನು ಬಂಧಿಸುವ ಮೂಲಕ ಆಪ್ ಅನ್ನು ಕೊನೆಗೊಳಿಸಬಹುದು ಎಂದು ಬಿಜೆಪಿ ಭಾವಿಸಿದೆ. ನೀವು ನನ್ನನ್ನೂ ಬಂಧಿಸಬಹುದು ಆದರೆ ನನ್ನ ಮತ್ತು ಅವರ ಆಲೋಚನೆಗಳನ್ನು ಹೇಗೆ ಮುಗಿಸುತ್ತೀರಿ ಎಂದು ಪ್ರಶ್ನಿಸಿದರು.
70 ಸದಸ್ಯರ ಸದನದಲ್ಲಿ 62 ಶಾಸಕರನ್ನು ಅಪ್ ಹೊಂದಿದ್ದು ಪ್ರತಿಪಕ್ಷ ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಅವರಲ್ಲಿ ಏಳು ಮಂದಿ ಸದನದಿಂದ ಅಮಾನತುಗೊಂಡಿದ್ದಾರೆ.