ಇಸ್ಲಾಮಾನಾದ್: ಖ್ಯಾತ ರಾಜಕಾರಣಿ ಹಾಗೂ ನಟ ಡಾ.ಆಮೀರ್ ಲಿಯಾಖತ್ ಹುಸೈನ್, ತನ್ನ ಮಗಳ ವಯಸ್ಸಿನ ಯುವತಿಯೊಂದಿಗೆ ವಿವಾಹವಾಗಿ ಸುದ್ದಿಯಾಗಿದ್ದಾರೆ.
ಅಮೀರ್ ಲಿಯಾಖತ್ ಎರಡನೇ ಪತ್ನಿಯಿಂದ 15 ತಿಂಗಳ ಹಿಂದೆಯೇ ದೂರವಾಗಿದ್ದಾರೆ. ಇಬ್ಬರೂ ಬೇರ್ಪಡುವ ನಿರ್ಧಾರ ಮಾಡಿದ್ದರು. ಎರಡು ದಿನಗಳ ಹಿಂದಷ್ಟೇ ಅಂದರೆ ಬುಧವಾರದಂದು ಅಮೀರ್ ತಮ್ಮ ಎರಡನೇ ಹೆಂಡತಿಗೆ ವಿಚ್ಚೇದನ ನೀಡಿದ್ದಾರೆ. ಅಂದು ರಾತ್ರಿಯೇ 18 ವರ್ಷದ ಸಯೀದಾಳ ಜೊತೆ ಸಪ್ತಪದಿ ತುಳಿದಿದ್ದಾರೆ.
View this post on Instagram
ಅಮೀರ್ ಲಿಯಾಖತ್ ಹುಸೈನ್ ಮತ್ತು ಸಯೀದಾ ಡೇನಿಯಾ ಶಾ ಬುಧವಾರದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಬಗ್ಗೆ ಅಮೀರ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಇಬ್ಬರ ಮದುವೆ ಫೋಟೋ ಹಂಚಿಕೊಂಡು ವಿವಾಹದ ಸುದ್ದಿ ಬಹಿರಂಗಪಡಿಸಿದ್ದಾರೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿಶ್ ಮಾಡಿದ್ದಾರೆ. ಇದು ಈಗ ಪಾಕಿಸ್ತಾನದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮಗಳ ವಯಸ್ಸಿನ ಯುವತಿ ಜೊತೆ ಮದುವೆಯಾದ ಸಂಸದನ ವಿರುದ್ಧ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ನೀಡಿರೋ ನೋಟಿಸ್ ಹಿಂತೆಗೆದುಕೊಳ್ಳಿ – ಯುಪಿ ಸರ್ಕಾರಕ್ಕೆ ಸುಪ್ರೀಂ ಸೂಚನೆ
#AamirLiaquat new interview after marriage with #SyedaDaniaShah at #NadirAli podcast ????????#amirliaquat pic.twitter.com/vk9HvE6zUH
— Malik Shoujaat ???????? (@Malok_Shoujaat) February 11, 2022
ಅಮೀರ್ ಲಿಯಾಖತ್ ಹುಸೈನ್ ವಯಸ್ಸು 49 ಆಗಿದ್ದು, ಪಾಕಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತೆಹ್ರಿಕ್ ಇ ಇನ್ಸಾಫ್ ಪಕ್ಷದ ಸಂಸದ. ಅಲ್ಲದೇ ಅಮೀರ್ ಪ್ರಸಿದ್ಧ ಟಿವಿ ವಾಹಿನಿಯೊಂದರ ನಿರೂಪಕನೂ ಆಗಿದ್ದಾರೆ. ಲಿಯಾಖತ್ ಹುಸೈನ್, 18 ವರ್ಷದ ಸಯೀದಾ ಡೇನಿಯಾ ಶಾ ಜೊತೆ ನಿಕಾ(ವಿವಾಹ) ಆಗಿದ್ದಾನೆ. ಇದು 3 ನೇ ಮದುವೆ ಎಂಬುದು ವಿಶೇಷವಾಗಿದೆ.