ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ತನ್ನ ಪುತ್ರಿ ಇರಾ ಜೊತೆ ಇರುವ ಒಂದು ಫೋಟೋವನ್ನು ನೆಟ್ಟಿಗರು ಪೋರ್ನ್ ಸಿನಿಮಾಗೆ ಹೋಲಿಸಿ ಕಮೆಂಟ್ ಮಾಡಿದ್ದಾರೆ.
ಬುಧವಾರ ಅಮೀರ್ ಖಾನ್ ತಮಿಳುನಾಡಿನ ಕುನೂರ್ ಗೆ ತನ್ನ ಕುಟುಂಬದವರ ಜೊತೆ ಹೋಗಿದ್ದರು. ಅಲ್ಲಿ ತಮ್ಮ ಸಹೋದರ ಸಂಬಂಧಿ ಹಾಗೂ ನಿರ್ದೇಶಕರಾಗಿರುವ ಮನ್ಸೂರ್ ಖಾನ್ ಅವರ 60ನೇ ಹುಟ್ಟುಹಬ್ಬವನ್ನು ಆಚರಿಸಿದ್ದರು.
ಆಗ ಅಮೀರ್ ಖಾನ್ ತನ್ನ ಮಗಳ ಜೊತೆ ಫೋಟೋವನ್ನು ತೆಗೆದುಕೊಂಡರು. ನಂತರ ಮಗಳ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ಈಗ ಟ್ರೋಲರ್ಸ್ ಆ ಫೋಟೋವನ್ನು ಪೋರ್ನ್ ಗೆ ಹೋಲಿಸಿ ಟ್ರೋಲ್ ಮಾಡುತ್ತಿದ್ದಾರೆ.
ಅಮೀರ್ ತನ್ನ ಮಗಳ ಜೊತೆಯಿರುವ ಫೋಟೋಗೆ ಒಬ್ಬರು, “ನೀವು ನಿಮ್ಮ ಕೆಲಸ ಕಡೆ ತೋರುವ ಪರಿಶ್ರಮದ ಬಗ್ಗೆ ನಮಗೆ ಹೆಮ್ಮೆ ಇದೆ. ಅದನ್ನು ನಾವು ಗೌರವಿಸುತ್ತೇವೆ. ಆದರೆ ಈ ಫೋಟೋ ನಮಗೆ ಸರಿ ಕಾಣುತ್ತಿಲ್ಲ” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಕೆಲವರು ಈ ಫೋಟೋ ನೋಡಿ ಈಗ ನೀವು ನಿಮ್ಮ ಮಗಳ ಜೊತೆ ಪೋರ್ನ್ ಸಿನಿಮಾ ಮಾಡುತ್ತಿದ್ದೀರಾ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ರಂಜಾನ್ ತಿಂಗಳಲ್ಲಿ ಈ ರೀತಿ ಪೋಸ್ ಕೊಟ್ಟು ಫೋಟೋ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಅಮೀರ್ ತನ್ನ ಮಗಳ ಜೊತೆಯಿರುವ ಫೋಟೋಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಫೋಟೋಗೆ ಧರ್ಮವನ್ನು ಮಧ್ಯ ತರಬೇಡಿ. ಈ ಫೋಟೋ ತುಂಬಾ ಸುಂದರವಾಗಿದೆ. ತಂದೆ- ಮಗಳ ಪ್ರೀತಿ ತುಂಬಾ ಅಮೂಲ್ಯವಾದದ್ದು ಎಂದು ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸದ್ಯ ಅಮೀರ್ ಖಾನ್ ‘ಥಗ್ಸ್ ಆಫ್ ಹಿಂದೋಸ್ಥಾನ್’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಬಿಗ್ ಬಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದು, ಅಮೀರ್ ಗೆ ನಾಯಕಿಯರಾಗಿ ಕತ್ರಿನಾ ಕೈಫ್ ಹಾಗೂ ಫಾತಿಮಾ ಸನಾ ಶೇಖ್ ಕಾಣಿಸಿಕೊಳ್ಳುತ್ತಿದ್ದಾರೆ.