ಹಿಂದೂ ಸಂಪ್ರದಾಯದಂತೆ ಕಳಶ ಪೂಜೆ ಮಾಡಿದ ಆಮೀರ್ ಖಾನ್: ಮಾಜಿ ಪತ್ನಿ ಸಾಥ್

Public TV
2 Min Read
aamir khan

ಬಾಲಿವುಡ್ (Bollywood) ನಟ ಆಮೀರ್ ಖಾನ್ (Aamir Khan) ಮತ್ತೆ ಸುದ್ದಿಯಲ್ಲಿದ್ದಾರೆ. ನಾನು ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದು ಆಮೀರ್ ಹೇಳಿದ್ದರು. ಇದೀಗ ಆಮೀರ್ ಖಾನ್ ಪ್ರೊಡಕ್ಷನ್ಸ್ (Aamir Khan Productions) ಕಚೇರಿಯಲ್ಲಿ ಕಳಶ ಪೂಜೆ ಮಾಡುತ್ತಿರುವ ಫೋಟೋ ನೆಟ್ಟಿಗರಿಗೆ ಅಚ್ಚರಿ ಮೂಡಿಸಿದೆ. ಮತ್ತೆ ಹಲವು ಟೀಕೆಗೆ ನಟ ಗುರಿಯಾಗಿದ್ದಾರೆ.

aamir khan 3

ಆಮೀರ್ ಖಾನ್ ಅವರು ಹಿಂದಿ ಸಿನಿಮಾರಂಗದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂದೇ ಗುರುತಿಸಿಕೊಂಡಿರುವವರು. ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇತ್ತೀಚೆಗೆ ಬಿಡುಗಡೆಯಾದ ‘ಲಾಲ್ ಸಿಂಗ್ ಛಡ್ಡಾ’ (Lal Singh Chaddha) ಚಿತ್ರ ಮಾತ್ರ ಸಕ್ಸಸ್ ಕಾಣಲಿಲ್ಲ. ಈ ಚಿತ್ರದ ಸೋಲಿಗೆ ನಟ ಆಮೀರ್ ಖಾನ್ ಅವರು ಸಾಮಾಜಿಕವಾಗಿ ನೀಡಿದ ಕೆಲ ವಿವಾದಾತ್ಮಕ ಹೇಳಿಕೆಗಳು ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಪದೇ ಪದೇ ಹಿಂದೂ ವಿರೋಧಿ ಎಂದು ಕೂಡ ಆಮೀರ್ ಖಾನ್ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಸದ್ಯ ಹಿಂದೂ ಸಂಪ್ರದಾಯದಂತೆ (Hindhu Culture) ಆಮಿರ್ ಖಾನ್ ಮತ್ತು ಮಾಜಿ ಪತ್ನಿ ಕಿರಣ್ ರಾವ್ (Kiran Rao) ಪೂಜೆ ಮಾಡಿರುವ ಫೋಟೋಗಳು ವೈರಲ್ ಆಗಿವೆ.

ಆಮೀರ್ ಖಾನ್ ಇತ್ತೀಚೆಗೆ ತಮ್ಮ ಪ್ರೊಡಕ್ಷನ್ ಸಂಸ್ಥೆಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಮಾಡಿದ್ದಾರೆ. ಆಮಿರ್ ಖಾನ್ ಪೂಜೆ ಮಾಡುತ್ತಿರುವ ಫೋಟೋಗಳನ್ನು `ಲಾಲ್ ಸಿಂಗ್ ಛಡ್ಡಾ’ ನಿರ್ದೇಶಕ ಅದ್ವೈತ್ ಚಂದನ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಗುರುವಾರ (ಡಿ.7) ಹಂಚಿಕೊಂಡಿದ್ದಾರೆ. ಆಮಿರ್ ಖಾನ್ ಅವರು ಹಣೆಗೆ ತಿಲಕ, ತಲೆಗೆ ಬಿಳಿ ಬಣ್ಣದ ಟೋಪಿ ಧರಿಸಿದ್ದು, ಕಳಶಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾಜಿ ಪತ್ನಿ ಕಿರಣ್ ರಾವ್ ಅವರು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ: ಹನ್ಸಿಕಾ ಟ್ರೋಲ್‌: ಮದುವೆಗೆ ಎಲ್ಲಾ ಹೊಸದು, ಗಂಡ ಯಾಕೆ ಸೆಕೆಂಡ್ ಹ್ಯಾಂಡ್ ಎಂದ ನೆಟ್ಟಿಗರು

ಈ ಎಲ್ಲಾ ಫೋಟೋ ಮತ್ತು ಬೆಳವಣಿಗೆ ನೋಡಿರುವ ಅಭಿಮಾನಿಗಳು, ಆಮೀರ್ ಖಾನ್‌ ನಡೆಗೆ ಕೆಲ ನೆಟ್ಟಿಗರು ಟೀಕೆ ಮಾಡಿದ್ದಾರೆ. ಬಗೆ ಬಗೆಯ ಕಾಮೆಂಟ್ ಮೂಲಕ ನಟನ ಕಾಲೆಳೆಯುತ್ತಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article