ನವದೆಹಲಿ: ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಲಿಂಕ್ ಮಾಡಲು ಸರ್ಕಾರಿ ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶುಕ್ರವಾರ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ನಡೆದ ಪ್ರತ್ಯೇಕ ಪ್ರಶ್ನೋತ್ತರ ಅವಧಿಯಲ್ಲಿ ಕಿರಣ್ ರಿಜಿಜು ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ಜೋಡಣೆ ಬಗ್ಗೆ ಇದ್ದ ಗೊಂದಲಕ್ಕೆ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಿಜಬ್‍ನಿಂದ ವಿದ್ಯಾರ್ಥಿನಿಯ ಶಿಕ್ಷಣ ಭವಿಷ್ಯ ಕಸಿದುಕೊಳ್ಳುತ್ತಿದ್ದೇವೆ: ರಾಹುಲ್ ಗಾಂಧಿ
ಆಧಾರ್ ಬಳಸಿಕೊಂಡು ಪೌರತ್ವ ದೃಢೀಕರಿಸಲು ಸರ್ಕಾರ ಪ್ರೊಟೋಕಾಲ್ ರಚಿಸಿದೆಯೇ? ಎಂಬ ಲಿಖಿತ ಪ್ರಶ್ನೆಗೆ ಸಂಸತ್ತಿನಲ್ಲಿ ಪ್ರತಿಕ್ರಿಯಿಸಿದ ಕಿರಣ್ ರಿಜಿಜು, ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳ ನಡುವೆ ಯಾವುದೇ ರೀತಿಯ ಜೋಡಣೆ ನಡೆಸಲಾಗುವುದಿಲ್ಲ. ಆಧಾರ್ ಪೌರತ್ವದ ಪುರಾವೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಇಬ್ಬರು ಉಗ್ರರ ಸಾವು
ಆಧಾರ್ ಅನ್ನು ಕಾನೂನುಬದ್ಧ ಸಾಧನವಾಗಿ ಬಳಸುವ ವಿಚಾರವಾಗಿ ಉತ್ತರಿಸಿದ ಕಿರಣ್ ರಿಜಿಜು, ಆಧಾರ್ ಪೌರತ್ವದ ಪುರಾವೆಯಲ್ಲ. ಹೀಗಾಗಿ ಅದನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸುವ ಬಗ್ಗೆ ಗೊಂದಲ ಬೇಡ ಎಂದಿದ್ದಾರೆ.