ನವದೆಹಲಿ: ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ ಮುದ್ರಿಸಿರುವ ಸಂಗತಿ ಹರಿದ್ವಾರದ ಗೈಂದಿ ಖಾತಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ಸುಮಾರು 800 ಗ್ರಾಮಸ್ಥರ ಆಧಾರ್ ಕಾರ್ಡ್‍ನಲ್ಲೂ ಜನ್ಮ ದಿನಾಂಕವನ್ನ ಜನವರಿ 1 ಎಂದು ನಮೂದಿಸಲಾಗಿದೆ. ಯುನೀಕ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾದ(ಯುಐಡಿಎಐ) ಅಧಿಕಾರಿಗಳು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅರ್ಜಿದಾರರಿಗೆ ತಮ್ಮ ನಿರ್ದಿಷ್ಟ ಜನ್ಮ ದಿನಾಂಕ ತಿಳಿಯದಿದ್ದರೆ ಅಥವಾ ಅದಕ್ಕೆ ಪೂರಕ ದಾಖಲೆಗಳನ್ನು ಹೊಂದಿರದಿದ್ದರೆ ಡೀಫಾಲ್ಟ್ ಆಗಿ ಆ ವರ್ಷದ ಜನವರಿ 1 ಅವರ ಜನ್ಮ ದಿನಾಂಕವೆಂದು ಪರಿಗಣಿಸಲಾಗುತ್ತದೆ ಎಂದಿದ್ದಾರೆ.
Advertisement
ನಮಗೆ ವಿಶಿಷ್ಟ ಗುರುತಿನ ನಂಬರ್ ಸಿಗುತ್ತದೆ ಎಂದು ಹೇಳಿದ್ರು. ಆದ್ರೆ ಇದ್ರಲ್ಲಿ ವಿಶಿಷ್ಟತೆ ಏನಿದೆ? ನಮ್ಮ ಜನ್ಮ ದಿನಾಂಕಗಳೆಲ್ಲವೂ ಈಗ ಒಂದೇ ಆಗಿದೆ ಎಂದು ಗ್ರಾಮದ ನಿವಾಸಿಯಾದ ವಾಜೀರ್ ಅಲಿ ಹೇಳಿದ್ದಾರೆ.
Advertisement
ಹರಿದ್ವಾರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮನೀಶ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಮಾಧ್ಯಮಗಳ ವರದಿ ಮೂಲಕ ನಮಗೆ ಈ ವಿಚಾರ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿದ್ದಾರೆ.
Advertisement
ಯುಐಡಿಎಐ ನಿಯಮಗಳ ಪ್ರಕಾರ ಜನ್ಮ ದಿನಾಂಕವನ್ನು ದಾಖಲಿಸಿಕೊಳ್ಳಲು ಮೂರು ವಿಧಾನಗಳಿವೆ. ಮೊದಲು ಆಧಾರ್ ಕಾರ್ಡ್ ಪಡೆಯುವ ವ್ಯಕ್ತಿ ತನ್ನ ಜನ್ಮ ದಿನಾಂಕವನ್ನ ಹೇಳಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಬೇಕು. ಅಥವಾ ಈಗಾಗಲೇ ಪರಿಶೀಲಿಸಲಾಗಿರುವ ಜನ್ಮ ದಿನಾಂಕವನ್ನು ಯಾವುದೇ ಪೂರಕ ದಾಖಲೆಗಳಿಲ್ಲದಿದ್ರೂ ನೀಡಬಹುದು. ಒಂದು ವೇಳೆ ಅರ್ಜಿದಾರರಿಗೆ ತಮ್ಮ ವಯಸ್ಸು ಮಾತ್ರ ಗೊತ್ತಿದ್ದು, ಜನ್ಮ ದಿನಾಂಕ ತಿಳಿಯದಿದ್ದರೆ ಅವರು ಹೇಳಿದ ವಯಸ್ಸಿಗೆ ಅನುಗುಣವಾಗಿ ಆ ವರ್ಷದ ಜನವರಿ 1 ಅವರ ಜನ್ಮದಿನಾಂಕವೆಂದು ಪರಿಗಣಿಸಲ್ಪಡುತ್ತದೆ.
Advertisement
ಆದರೂ ನಂತರದ ಸಮಯದಲ್ಲಿ ಜನ್ಮದಿನಾಂಕವನ್ನು ಸರಿಪಡಿಸುವ ಅವಕಾಶವಿದೆ ಎಂದು ಯುಐಡಿಎಐ ಹೇಳಿದೆ. ಅರ್ಜಿದಾರರು ಆಧಾರ್ ಸೆಂಟರ್‍ಗೆ ಭೇಟಿ ನೀಡಿ ಅಥವಾ ಆನ್‍ಲೈನ್ ಮೂಲಕ ಸೂಕ್ತ ದಾಖಲೆಗಳನ್ನು ನೀಡಿ ಜನ್ಮ ದಿನಾಂಕವನ್ನು ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.
ಈ ಹಿಂದೆಯೂ ರಾಜಸ್ಥಾನದ ಜೈಸಲ್ಮರ್‍ನಲ್ಲಿ 250 ಗ್ರಾಮಸ್ಥರ ಆಧಾರ್ ಕಾರ್ಡ್‍ನಲ್ಲಿ ಜನವರಿ 1 ಜನ್ಮ ದಿನಾಂಕವಾಗಿ ನಮೂದಿಸಲಾಗಿತ್ತು.
https://twitter.com/ANI/status/924101272722014208?
https://twitter.com/ANI/status/924101857701543936