ಯಶ್ ನಟನೆಯ ಕೆಜಿಎಫ್ (KGF) ಸಿನಿಮಾದಲ್ಲಿ ಪತ್ರಕರ್ತೆ ದೀಪಾ ಹೆಗಡೆ ಪಾತ್ರ ಮಾಡಿದ್ದ ಮಾಳವಿಕಾ ಅವಿನಾಶ್ (Malavika Avinash) ಅವರಿಗೆ ಆಧಾರ್ ಕಾರ್ಡ್ (Aadhaar Card) ಹೆಸರಿನಲ್ಲಿ ದೋಖಾ ಆಗಿರುವ ವಿಷಯ ಬಹಿರಂಗವಾಗಿದೆ. ಈ ಮಾಹಿತಿಯನ್ನು ಸ್ವತಃ ಮಾಳವಿಕಾ ಅವರೇ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಆಧಾರ್ ಕಾರ್ಡ್ ದುರ್ಬಳಕೆ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ.
Advertisement
ಮಾಳವಿಕಾ ಅವಿನಾಶ್ ಹೆಸರಿನಲ್ಲಿ ಮುಂಬೈನ (Mumbai) ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಕೆಯಾಗಿತ್ತು. ಹಾಗಾಗಿ ಮಾಳವಿಕಾ ಅವರಿಗೆ ಮುಂಬೈ ಪೊಲೀಸರು ಕರೆ ಮಾಡಿ, ವಿಚಾರಿಸಿದ್ದರು. ಮುಂಬೈ ಪೊಲೀಸರು ತಿಳಿಸಿರುವ ಮಾಹಿತಿ ಮಾಳವಿಕಾರ ಅಚ್ಚರಿಗೆ ಕಾರಣವಾಗಿತ್ತು. ಸೈಬರ್ ವಂಚಕರು ಮಾಳವಿಕಾ ಆಧಾರ ಕಾರ್ಡ್ ಬಳಸಿ ಸಿಮ್ ಖರೀದಿ ಮಾಡಿದ್ದಾರೆ. ಆ ನಂಬರ್ ನಲ್ಲಿ ಅನೇಕರಿಗೆ ಬೆದರಿಸೋದು, ಅಶ್ಲೀಲ ಮಸೇಜ್ ಕಳುಹಿಸಿದ್ದಾರೆ. ಕಿರುಕುಳಕ್ಕೆ ಒಳಗಾದವರು ದೂರು ಸಲ್ಲಿಸಿದ್ದಾರೆ.
Advertisement
Advertisement
ಮುಂಬೈನಿಂದ ಕರೆ ಮಾಡಿದ್ದ ಪೊಲೀಸ್ (Police) ಅಧಿಕಾರಿಗಳು ಮಾಳವಿಕಾ ಅವಿನಾಶ್ ಅವರ ಬಂಧನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಸ್ವತಃ ಮಾಳವಿಕಾ ಅವರೇ ಪೊಲೀಸರಿಗೆ ಕರೆ ಮಾಡಿ, ತಮ್ಮ ಆಧಾರ್ ಕಾರ್ಡ್ ಅನ್ನು ಸೈಬರ್ ವಂಚಕರು ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
Advertisement
ಮುಂಬೈ ಪೊಲೀಸರಿಗೆ ಮಾಳವಿಕಾ ವಿಡಿಯೋ ಕಾಲ್ ಮಾಡಿದಾಗ, ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ನೀವು ಕೆಜಿಎಫ್ ನಟಿ ಅಲ್ಲವಾ ಮೇಡಂ ಎಂದು ಗುರುತು ಹಿಡಿದಿದ್ದಾರೆ. ನಂತರ ಈ ಬಗ್ಗೆ ದೂರು ದಾಖಲಿಸುವಂತೆ ಪೊಲೀಸರು ಸೂಚಿಸಿದ್ದಾರಂತೆ. ಈ ಎಲ್ಲ ಮಾಹಿತಿಯನ್ನೂ ಸೋಷಿಯಲ್ ಮೀಡಿಯಾ ಮೂಲಕ ಮಾಳವಿಕಾ ಹಂಚಿಕೊಂಡಿದ್ದಾರೆ. ಆಧಾರ್ ಕಾರ್ಡ್ ಹೇಗೆ ದುರುಪಯೋಗ ಆಯಿತು ಎಂದು ತಲೆ ಕೆಡಿಸಿಕೊಂಡಿದ್ದಾರೆ.
Web Stories