ನವದೆಹಲಿ: ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗರ್ಬಾ ನೃತ್ಯಕ್ಕೆ ಪ್ರವೇಶಿಸಲು ಆಧಾರ್ ಕಾರ್ಡ್‌ನ್ನು (Aadhar Card) ಕಡ್ಡಾಯಗೊಳಿಸಲಾಗಿದೆ.
ದೇಶಾದ್ಯಂತ ನವರಾತ್ರಿ ಸಂಭ್ರಮ ಆರಂಭಗೊಂಡಿದೆ. ಉತ್ತರ ಭಾರತದಲ್ಲಿ ನವರಾತ್ರಿ ಹಬ್ಬ ವೇಳೆ 9 ದಿನ ಗರ್ಬಾ ನೃತ್ಯ ಮಾಡ್ತಾರೆ. ಈ ಹಿನ್ನೆಲೆ ಗರ್ಬಾ ಸಂಭ್ರಮದಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ವಿಶ್ವ ಹಿಂದೂ ಪರಿಷತ್, ಹಿಂದೂಗಳು ಹಣೆಗೆ ತಿಲಕ ಧರಿಸಬೇಕು, ಆಧಾರ್ ಕಾರ್ಡ್ ಪರಿಶೀಲನೆ ನಡೆಸಲು ಮಾರ್ಗಸೂಚಿ ಪ್ರಕಟಿಸಿತ್ತು. ಇದಕ್ಕೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ, ಗರ್ಬಾ ಕಾರ್ಯಕ್ರಮ ಲವ್ ಜಿಹಾದ್‌ನ ಕೇಂದ್ರಗಳಾಗುತ್ತಿವೆ. ಗರ್ಬಾ ಆಯೋಜಕರು ಭಾಗವಹಿಸುವವರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಬೇಕೆಂದು ವಿಎಚ್‌ಪಿ ನೀಡಿರೋ ಕರೆ ಸರಿಯಾಗಿದೆ ಅಂದಿದ್ದಾರೆ. ಇದೀಗ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಗರ್ಬಾ ಪೆಂಡಾಲ್‌ಗಳಲ್ಲಿ ಹಿಂದೂಯೇತರರಿಗೆ ಎಂಟ್ರಿ ನಿರ್ಬಂಧಿಸಲಾಗಿದೆ. ಅಲ್ಲದೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.ಇದನ್ನೂ ಓದಿ: ಮಲಯಾಳಂ ನಟ ಮೋಹನ್‌ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ
ಭೋಪಾಲ್‌ನಲ್ಲಿ ಅ.2ರವರೆಗೆ ಮೊಟ್ಟೆ, ಮಾಂಸ ಮಾರಾಟ ನಿಷೇಧಿಸಲಾಗಿದೆ. ಇನ್ನು ದೆಹಲಿಯಲ್ಲಿ ರಾಮಲೀಲಾ, ದುರ್ಗಾ ಪೂಜೆ ಮತ್ತು ಇತರ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳನ್ನು ಮಧ್ಯರಾತ್ರಿ 12 ಗಂಟೆವರೆಗೆ ನಡೆಸಲು ಸಿಎಂ ರೇಖಾಗುಪ್ತಾ ಅವಕಾಶ ಮಾಡಿಕೊಂಡಿದ್ದಾರೆ. ಅಲ್ಲದೆ, ವಸತಿ ಪ್ರದೇಶಗಳಲ್ಲಿ ಧ್ವನಿವರ್ಧಕದಿಂದ ಹೊರಹೊಮ್ಮುವ ಶಬ್ಧವು 45 ಡೆಸಿಬಲ್ ಮೀರುವಂತಿಲ್ಲ ಅಂತ ಸರ್ಕಾರ ಆದೇಶ ನೀಡಿದೆ. ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರೋ ಸಿಎಂ ರೇಖಾಗುಪ್ತಾ, ಯಾವ ರಾಮಲೀಲಾ ಕಾರ್ಯಕ್ರಮ ರಾತ್ರಿ 10ಕ್ಕೆ ಕೊನೆಗೊಳ್ಳುತ್ತದೆ? ಹಿಂದೂಗಳ ಹಬ್ಬಗಳೇಕೆ ಸದಾ ಸಂಕಷ್ಟಕ್ಕೆ ಸಿಲುಕುತ್ತವೆ? ದೆಹಲಿಯಲ್ಲಿ ರಾಮರಾಜ್ಯ ಸ್ಥಾಪನೆಯಾಗಬೇಕು. ಅದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕು ಎಂದಿದ್ದಾರೆ.
ಇನ್ನು ಗುಜರಾತ್‌ನಲ್ಲೂ ದಾಂಡಿಯಾ ನೃತ್ಯಕ್ಕಾಗಿ ಮಧ್ಯರಾತ್ರಿವರೆಗೂ ಲೌಡ್ ಸ್ಪೀಕರ್‌ಗೆ ಅನುಮತಿ ನೀಡಲಾಗಿದೆ.ಇದನ್ನೂ ಓದಿ: ಫಸ್ಟ್‌ನೈಟ್‌ನಲ್ಲಿ ಸೆಕ್ಸ್‌ಗೆ ಗಂಡ ನಿರಾಕರಿಸಿದ್ದಕ್ಕೆ ಪತ್ನಿಯಿಂದ 2 ಕೋಟಿ ಹಣಕ್ಕೆ ಡಿಮ್ಯಾಂಡ್ ಆರೋಪ
 


 
		 
		 
		 
		 
		
 
		 
		 
		 
		