ಪಿಜಿ ಯುವತಿಯರ ನಗ್ನ ದೃಶ್ಯ ಸೆರೆ ಹಿಡಿದು ಟಾರ್ಚರ್ – ಸೆಕ್ಸ್ ಆಫರ್‌ ಕೊಟ್ಟು ಖೆಡ್ಡಾಕ್ಕೆ ಬೀಳಿಸಿದ ಖಾಕಿ

Public TV
3 Min Read
Bengaluru Crime

ಬೆಂಗಳೂರು: ನಗರದ ಮಹಿಳಾ ಪಿಜಿಯೊಂದರ (Ladies PG) ಯುವತಿಯರ ನಗ್ನ ದೃಶ್ಯಗಳನ್ನು ಸೆರೆ ಹಿಡಿದು ಬ್ಲ್ಯಾಕ್‌ಮೇಲ್ ಮಾಡಿ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದ ಕಾಮುಕನೊಬ್ಬನನ್ನ ಬೆಂಗಳೂರು (Bengaluru) ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು (Police) ಬಂಧಿಸಿದ್ದಾರೆ.

ಪಾಂಡಿಚೇರಿ ಮೂಲದ ನಿರಂಜನ್ ಬಂಧಿತನಾಗಿದ್ದು, ಇತ್ತೀಚೆಗೆ ತಾನು ನೆಲೆಸಿದ್ದ ಪಿಜಿಯಲ್ಲಿ ಯುವತಿಯರು ಸ್ನಾನಕ್ಕೆ ಹೋದಾಗ ಅಲ್ಲಿ ಮೊಬೈಲ್ ಇಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಮೊಬೈಲ್‌ಗೆ ಅನಾಮಧೇಯ ಸಂದೇಶ ಕಳುಹಿಸಿ ಸೆಕ್ಸ್ಗೆ ಒತ್ತಾಯಿಸಿದ್ದ. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ತನಿಖೆ ಕೈಗೊಂಡಿದ್ದ ಇನ್‌ಸ್ಪೆಕ್ಟರ್ ಎಸ್.ಟಿ ಯೋಗೇಶ್ ನೇತೃತ್ವದ ತಂಡವು, ಯುವತಿ ಹೆಸರಿನಲ್ಲಿ ತಾವೇ ಯುವಕನಿಗೆ ಚಾಟಿಂಗ್ ಮಾಡಿದ್ದಾರೆ. ಬಳಿಕ ಸೆಕ್ಸ್ಗೆ ಒಪ್ಪಿಕೊಂಡಿರುವುದಾಗಿ ಆಫರ್ ಕೊಟ್ಟು ಕಾಮುಕನನ್ನ ಖೆಡ್ಡಕ್ಕೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ಬೆಂಗ್ಳೂರು ವಾಹನ ಸವಾರರೇ ಎಚ್ಚರ – ವಾಹನಗಳ ಮೇಲೆ ದಂಡ ಬಾಕಿಯಿದ್ರೆ ಸಿಗಲ್ಲ ಇನ್ಶೂರೆನ್ಸ್

Mobile

10ನೇ ತರಗತಿ ವರೆಗೆ ಓದಿಕೊಂಡಿದ್ದ ಪಾಂಡಿಚೇರಿ (Pondicherry) ಮೂಲದ ನಿರಂಜನ್ ನಂತರ ಓದಿಗೆ ಫುಲ್‌ಸ್ಟಾಪ್ ಹಾಕಿದ್ದ. ಕಳೆದ 4 ವರ್ಷಗಳಿಂದ ಬೊಮ್ಮನಹಳ್ಳಿಯ ಪಿಜಿಯಲ್ಲೇ ನೆಲೆಸಿದ್ದ ಆತ, ಆ ಪಿಜಿ ಮಾಲೀಕನೊಂದಿಗೆ ಆತ್ಮೀಯ ಒಡನಾಟ ಬೆಳೆಸಿಕೊಂಡಿದ್ದ. ಆ ಪಿಜಿ ಕಟ್ಟಡಕ್ಕೆ ಹೊಂದಿಕೊಂಡೇ ಮಹಿಳೆಯರ ಪಿಜಿ ಇದ್ದು, ಎರಡು ಪಿಜಿಗಳಿಗೆ ಒಬ್ಬನೇ ಮಾಲೀಕ. ಹೀಗಾಗಿ ಮಹಿಳೆಯರ ಪಿಜಿಯಲ್ಲಿ ಏನಾದರೂ ಕೆಲಸಗಳಿದ್ರೆ, ತಾನೇ ಮುಂದೆ ನಿಂತು ಮಾಡಿಸುತ್ತಿದ್ದ. ಇದರಿಂದ ಲೇಡಿಸ್ ಪಿಜಿಯಲ್ಲಿ ಕೂಡಾ ನಿರಾಂತಕವಾಗಿ ಆರೋಪಿ ಓಡಾಡಲು ಮಾಲೀಕನೇ ಅವಕಾಶ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

crime

ಮಾಲೀಕರ ಸಲುಗೆ ದುರ್ಬಳಕೆ ಮಾಡಿಕೊಂಡ ನಿರಂಜನ್, ಮಹಿಳೆಯರಿಲ್ಲದ ಹೊತ್ತಿನಲ್ಲಿ ಪಿಜಿಗೆ ತೆರಳಿ ಸ್ನಾನ ಗೃಹ, ಬೆಡ್ ರೂಂ ಹಾಗೂ ಇತರೆ ಸ್ಥಳಗಳನ್ನು ಪರಿಶೀಲಿಸಿದ್ದ. ಬಳಿಕ ಯುವತಿಯರು ಸ್ನಾನ ಮಾಡುವಾಗ ಎಲ್ಲಿಂದ ವಿಡಿಯೋ ರೆಕಾರ್ಡ್ ಮಾಡಿದ್ರೆ ಯಾರಿಗೂ ತಿಳಿಯುವುದಿಲ್ಲವೆಂದು ಸಂಚು ರೂಪಿಸಿ ತಾನು ವಾಸವಿದ್ದ ಪಿಜಿಯ ಟೆರೇಸ್ ಮೇಲಿಂದ ಪಕ್ಕದ ಲೇಡಿಸ್ ಪಿಜಿಯಲ್ಲಿದ್ದ ಯುವತಿಯರ ಚಲನವಲನದ ಮೇಲೆ ಕಣ್ಣಿಟ್ಟಿದ್ದ. ಇದನ್ನೂ ಓದಿ: ಕಾಂಗ್ರೆಸ್‌- ಬಿಜೆಪಿ ನಡುವಿನ ಮತದ ಅಂತರ ಕೇವಲ ಶೇ.0.9 – ಇಲ್ಲಿದೆ ಹಿಮಾಚಲದ ವೋಟ್‌ ಲೆಕ್ಕ

crime

ಆಗ ಯಾರಾದರೂ ಯುವತಿ ಸ್ನಾನ ಮಾಡಲು ಪಿಜಿಯ ಹೊರಗೆ ಒಣ ಹಾಕಿದ್ದ ಟವಲನ್ನು ತೆಗೆದುಕೊಂಡ ಕೂಡಲೇ ಆರೋಪಿ ಜಾಗೃತನಾಗುತ್ತಿದ್ದ. ಕೂಡಲೇ ತನ್ನ ಪಿಜಿಯ ಮಹಡಿಯಿಂದ ಲೇಡಿಸ್ ಪಿಜಿಯ ಮಹಡಿಗೆ ಜಿಗಿದು ನೀರಿನ ಪೈಪನ್ನು ಹಿಡಿದುಕೊಂಡು ಸ್ನಾನ ಗೃಹದ ಕಿಟಕಿಯ 1.5 ಅಡಿ ಎತ್ತರದ ಸಜ್ಜಾ ಮೇಲೆ ಕುಳಿತುಕೊಳ್ಳುತ್ತಿದ್ದ. ಅಲ್ಲಿಂದ ಮೊಬೈಲನ್ನು ತೂಗು ಬಿಟ್ಟು ಕಿಟಕಿ ಮೂಲಕ ಸ್ನಾನ ಮಾಡುತ್ತಿದ್ದ ಯುವತಿಯರ ನಗ್ನ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ. ಅಲ್ಲದೆ ಆಕೆಯ ಫೋಟೋ ಸಹ ತೆಗೆದು ಬಳಿಕ ಲೇಡಿಸ್ ಪಿಜಿ ರಿಜಿಸ್ಟರ್ ನಲ್ಲಿ ಆ ಯುವತಿಯರ ಮೊಬೈಲ್ ನಂಬರ್ ತೆಗೆದುಕೊಳ್ಳುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

DATING APP 2
ಸಾಂದರ್ಭಿಕ ಚಿತ್ರ

ವಿದೇಶಿ ನಂಬರ್‌ನಲ್ಲಿ ಸಂದೇಶ:
ತನ್ನ ಬಗ್ಗೆ ಯಾರಿಗೂ ತಿಳಿಯಬಾರದೆಂದು ತನ್ನ ಮೊಬೈಲ್‌ನಲ್ಲಿ ಓಇಘಿಖಿ PಐUS ಎಂಬ ಆ್ಯಪನ್ನು ಇನ್‌ಸ್ಟಾಲ್ ಮಾಡಿಕೊಂಡು ಆ್ಯಪ್‌ಗೆ ತನ್ನ ಇಮೇಲ್ ಐಡಿ ಮೂಲಕ ನೋಂದಾಯಿಸಿಕೊಂಡಿದ್ದ. ಆಗ ಸ್ಥಳೀಯ ಮೊಬೈಲ್ ಸಂಖ್ಯೆಯನ್ನು ವಿದೇಶಿ ಸಂಖ್ಯೆಯಾಗಿ ಪರಿವರ್ತಿಸಿ +1(747)222-8960 ಎಂಬ ನಂಬರನ್ನು ಪಡೆದು ಆ ನಂಬರ್‌ನಿಂದ ಯುವತಿಯರನ್ನು ಸಂಪರ್ಕಿಸುತ್ತಿದ್ದ. ತಾನು ಸೆರೆ ಹಿಡಿದ ನಗ್ನ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುವುದಾಗಿ ಯುವತಿಯರಿಗೆ ಬೆದರಿಕೆ ಹಾಕುತ್ತಿದ್ದ. ಇದಕ್ಕೆ ಬೆದರಿದ ಯುವತಿಯರನ್ನು ಲಾಡ್ಜ್ ಅಥವಾ ಇತರೆ ಸ್ಥಳಗಳಿಗೆ ಕರೆಸಿ ಲೈಂಗಿಕವಾಗಿ ಬಳಕೆ ಮಾಡಿಕೊಡಿರುವುದು ತನಿಖೆಯಿಂದ ದೃಢಪಟ್ಟಿದೆ.

crime

ಸೆಕ್ಸ್ ಆಫರ್ ಕೊಟ್ಟು ಅರೆಸ್ಟ್:
ಕಳೆದ ನ.28ರಂದು ರಾತ್ರಿ ಸುಮಾರು 10.30ಕ್ಕೆ ಸಂತ್ರಸ್ತೆಯ ಮೊಬೈಲ್‌ಗೆ ಪಿಜಿಯಲ್ಲಿ ಸ್ನಾನ ಮಾಡುವ ಫೋಟೋವನ್ನು ಆರೋಪಿ ಕಳುಹಿಸಿದ್ದ. ಬಳಿಕ `ನನ್ನ ಬಳಿ ನೀನು ಸ್ನಾನ ಮಾಡುತ್ತಿದ್ದಾಗ ಸೆರೆ ಹಿಡಿದ ವಿಡಿಯೋ ಇದೆ. ಆ ವಿಡಿಯೋವನ್ನು ಬೇರೆ ವ್ಯಕ್ತಿಗಳಿಗೆ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಹಾಕಬಾರದು ಎಂದರೆ ಲೈಂಗಿಕವಾಗಿ ನನ್ನೊಂದಿಗೆ ಸಹಕರಿಸಬೇಕು. ಆಮೇಲೆ ವೀಡಿಯೋ ಡಿಲೀಟ್ ಮಾಡ್ತೀನಿ ಅಂದಿದ್ದಾನೆ. ಕೂಡಲೇ ಸಂತ್ರಸ್ತೆ ಸಿಇಎನ್ ಠಾಣೆಗೆ ಸಂತ್ರಸ್ತೆ ದೂರು ನೀಡಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಇನ್‌ಸ್ಪೆಕ್ಟರ್ ಯೋಗೇಶ್ ತಂಡವು, ಯುವತಿ ಹೆಸರಿನಲ್ಲಿ ಪೊಲೀಸರೇ ಚಾಟಿಂಗ್ ನಡೆಸಿ ಲೈಂಗಿಕ ಕ್ರಿಯೆಗೆ ಒಪ್ಪಿರುವುದಾಗಿ ನಂಬಿಸಿ ಹೋಟೆಲ್‌ಗೆ ಕರೆಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತಾಯಿ ದುಡ್ಡಲ್ಲಿ ದರ್ಬಾರ್:
10ನೇ ತರಗತಿ ಓದಿದ್ದ ಆರೋಪಿ, ಯಾವುದೇ ಕೆಲಸಕ್ಕೆ ಹೋಗದೆ ಅಲೆಯುತ್ತಿದ್ದ. ಪ್ರತಿ ತಿಂಗಳು ಆತನಿಗೆ ಮನೆಗೆಲಸ ಮಾಡಿ ತಾಯಿ ಹಣ ಕಳುಹಿಸುತ್ತಿದ್ದರು. ಈ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ. ಅಲ್ಲದೆ ತನ್ನನ್ನು ವಾಸ್ತು ಶಿಲ್ಪಿ ಎಂದೂ ಹೇಳಿಕೊಳ್ಳುತ್ತಿದ್ದ. ಮಾದಕ ವಸ್ತು ವ್ಯಸನಿ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article