ಬೆಂಗಳೂರು: ಬಾರ್‌ವೊಂದರಲ್ಲಿ ಮಾತನಾಡಬೇಡಿ ಎಂದಿದ್ದಕ್ಕೆ ಯುವಕನ ಹತ್ಯೆ ಮಾಡಿದ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಶುಕ್ರವಾರ ರಾತ್ರಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಶ್ಯಾನುಬೋಗನಹಳ್ಳಿ ತರಂಗಿಣಿ ಬಾರ್‌ನಲ್ಲಿ ಜೋರಾಗಿ ಮಾತನಾಡಬೇಡಿ ಎಂದಿದ್ದ ಕೆಂಚಗಯ್ಯನದೊಡ್ಡಿ ಸುರೇಶ್‌ನನ್ನು ಕೊಂದಿದ್ದ ಆರೋಪಿಗಳನ್ನು ಬನ್ನೇರುಘಟ್ಟ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್ ವಿಡಿಯೋಗ್ರಾಫರ್ ಎನ್‌ಐಎಗೆ ಪ್ರಮುಖ ಸಾಕ್ಷಿ
ಕೆಂಚಗಯ್ಯನದೊಡ್ಡಿ ದೊಡ್ಡಿ ನಿವಾಸಿಗಳಾದ ಕಾಂತಿಕುಮಾರ್, ಕಿರಣ್ ಕುಮಾರ್ ಮತ್ತು ಗೋಪಾಲ್ ಜೊತೆ ಓರ್ವ ಬಾಲಾಪರಾಧಿ ಕೂಡ ಅರೆಸ್ಟ್ ಆಗಿದ್ದಾನೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿ ವಿನೋದ್ ಕುಮಾರ್ ಇನ್ನೂ ಪತ್ತೆಯಾಗಿಲ್ಲ.
ಶ್ಯಾನುಬೋಗನಹಳ್ಳಿ ತರಂಗಿಣಿ ಬಾರ್‌ನಲ್ಲಿ ಕುಡಿದ ನಶೆಯಲ್ಲಿದ್ದ ಕಾಂತಿಕುಮಾರ್ ಗ್ಯಾಂಗ್‌ಗೆ ಸುರೇಶ್ ಕುಡಿದ ನಶೆಯಲ್ಲಿ ಆವಾಜ್ ಹಾಕಿದ್ದ. ಜೋರಾಗಿ ಕಿರುಚಾಡಬೇಡಿ ಎಂದು ಆವಾಜ್ ಹಾಕಿದ್ದಾನೆ. ಅಷ್ಟಕ್ಕೆ ರೊಚ್ಚಿಗೆದ್ದಿದ್ದ ಆರೋಪಿ ಕಾಂತಿಕುಮಾರ್, ‘ನಾನು ಯಾರೂ ಗೊತ್ತಾ? ಕಾಂತ….! ನನ್ನ ಮುಂದೆ ತಲೆಯೆತ್ತಿ ಪ್ರಶ್ನೆ ಮಾಡ್ತಿಯಾ? ನಿನ್ನ ತಲೆ ಎತ್ತಿಬಿಡ್ತೀನಿ’ ಎಂದು ಅವಾಜ್ ಹಾಕಿದ್ದಾನೆ. ರಾತ್ರಿ 10 ಗಂಟೆ ಸುಮಾರಿಗೆ ಕೊಂದು ಮುಗಿಸಿ ಎಸ್ಕೇಪ್ ಕೂಡ ಆಗಿದ್ದರು. ಈಗ ಪೊಲೀಸರ ಅತಿಥಿಯಾಗಿದ್ದಾರೆ. ಇದನ್ನೂ ಓದಿ: Anytime, Anywhere – ಬ್ರಹ್ಮೋಸ್ ಹಾರಿಸಿ ಎಲ್ಲದ್ದಕ್ಕೂ ಸಿದ್ಧ ಎಂದ ನೌಕಾಸೇನೆ