ಮೈಸೂರು: ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು (Contaminated Water) ಕುಡಿದು ಓರ್ವ ಯುವಕ ಮೃತಪಟ್ಟಿದ್ದಾನೆ. ಅಲ್ಲದೇ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಒಟ್ಟು 48 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರು (Mysuru) ನಗರಕ್ಕೆ ಹೊಂದಿಕೊಂಡಂತೆ ಇರುವ ಕೆ. ಸಾಲುಂಡಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಗ್ರಾಮಸ್ಥರಲ್ಲಿ ವಾಂತಿ-ಬೇಧಿ ಶುರುವಾಗಿತ್ತು. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುವ ಲೈನ್‌ಗೆ ಡ್ರೈನೇಜ್ ನೀರು ಸೇರಿದ ಪರಿಣಾಮ ಗ್ರಾಮಸ್ಥರು ಸಾಲು ಸಾಲಾಗಿ ಅಸ್ವಸ್ಥರಾಗಲು ಶುರುವಾಯಿತು. ಇದರ ಗಂಭೀರತೆ ಅರಿತ ಮೈಸೂರು ಜಿಲ್ಲಾಡಳಿತ ಗ್ರಾಮದಲ್ಲೇ ತಾತ್ಕಾಲಿಕ ವೈದ್ಯಕೀಯ ಕ್ಯಾಂಪ್ ಆರಂಭಿಸಿತ್ತು. ಈ ನಡುವೆ ಒಟ್ಟು 48 ಜನರು ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಾದರು. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿತ್ತು. ಈ ನಾಲ್ವರಲ್ಲಿ ಓರ್ವ ಯುವಕ ಇಂದು ಮೃತಪಟ್ಟಿದ್ದಾರೆ. 20 ವರ್ಷದ ಕನಕರಾಜ್ ಮೃತ ಯುವಕ. ನಿನ್ನೆ ತೀವ್ರ ವಾಂತಿ-ಬೇಧಿಯಿಂದ ನಗರದ ಖಾಸಗಿ ಆಸ್ಪತ್ರೆಗೆ ಕನಕರಾಜ್ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸ್ಫೋಟಕ ತಿರುವು- ವೈದ್ಯರಿಬ್ಬರು ಭಾಗಿಯಾಗಿರೋ ಶಂಕೆ
Advertisement
Advertisement
ಈ ಬಗ್ಗೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗಳು ಪ್ರತಿಕ್ರಿಯಿಸಿದ್ದು, ಕಲುಷಿತ ನೀರಿನಿಂದಲೇ ಈ ಪ್ರಕರಣ ಆಗಿದೆ ಎಂಬುದು ಖಚಿತವಾಗಿಲ್ಲ. ನೀರನ್ನು ಪ್ರಯೋಗಾಲಕ್ಕೆ ಕಳುಹಿಸಲಾಗಿದೆ. ವರದಿ ಬರಬೇಕಿದೆ. ಸದ್ಯಕ್ಕೆ ಗ್ರಾಮದಲ್ಲೇ ತುರ್ತು ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
Advertisement
Advertisement
ಆಸ್ಪತ್ರೆಗೆ ಭೇಟಿ ನೀಡಿದ್ದ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ, ಈ ಪ್ರಕರಣಕ್ಕೆ ಅಧಿಕಾರಿಗಳೇ ನೇರ ಹೊಣೆ. ಕಲುಷಿತ ನೀರಿನಿಂದಲೇ ಈ ಘಟನೆ ನಡೆದಿದೆ. ಅಧಿಕಾರಿಗಳ ಬೇಜಾವಾಬ್ದಾರಿತನದಿಂದಲೇ ಈ ಘಟನೆ ನಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ತಣ್ಣಗಾಗದ ಧ್ವಜ ದಂಗಲ್- ಹೊಸ ಧ್ವಜ ಹಾರಿಸಿದ್ರೂ ಕೆರಗೋಡು ಗ್ರಾಮಸ್ಥರ ಅಸಮಾಧಾನ