ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ಯುವತಿಗೆ ಉದ್ಯೋಗ ಭಾಗ್ಯ

Public TV
1 Min Read
job fair in mandya h.d.kumaraswamy

– ಯುವತಿಗೆ ನೇಮಕಾತಿ ಪತ್ರ ನೀಡಿದ ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯ: ಕಾರವಾರದ ಶಿರೂರು ಗುಡ್ಡ ಕುಸಿತದಲ್ಲಿ (Shiruru Landslide) ಹೆತ್ತವರನ್ನು ಕಳೆದುಕೊಂಡು ಅನಾಥಳಾಗಿದ್ದ ಯುವತಿಗೆ ಮಂಡ್ಯದ ಉದ್ಯೋಗ ಮೇಳದಲ್ಲಿ ಉದ್ಯೋಗ ಭಾಗ್ಯ ಲಭಿಸಿದೆ. ಯುವತಿಗೆ ನೇಮಕಾತಿ ಪತ್ರ ನೀಡಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಅಭಿನಂದಿಸಿದ್ದಾರೆ.

ಮಂಡ್ಯ ಟೂ ಇಂಡಿಯಾ (Mandya To India) ಘೋಷದೊಂದಿದೆ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಮಂಡ್ಯದಲ್ಲಿ ನಡೆಯಿತು. ಎರಡನೇ ದಿನವೂ ಉದ್ಯೋಗ ಮೇಳಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತು. ಇದನ್ನೂ ಓದಿ: 2028ರ ವರೆಗೆ ಈ ಸರ್ಕಾರ ನಡೆಯಲ್ಲ, ಮತ್ತೆ ನಾನೇ ಸಿಎಂ: ಹೆಚ್‌ಡಿಕೆ

shiruru landslide 1

ಶಿರೂರು ಗುಡ್ಡ ಕುಸಿತ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡ ಯುವತಿಯೂ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಮೃತ ಹೋಟಲ್ ಮಾಲೀಕನ ಪುತ್ರಿ ಕೃತಿಗೆ ಬಿಹೆಚ್‌ಇಎಲ್‌ನಲ್ಲಿ ಉದ್ಯೋಗ ಲಭಿಸಿತು. ಆಕೆಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ನೇಮಕಾತಿ ಪತ್ರ ನೀಡಿದರು.

ಉದ್ಯೋಗ ಮೇಳದಲ್ಲಿ ನವ್ಯ ಹಾಗೂ ನಂದಿತ ಎಂಬ ಅವಳಿ ಸಹೋದರಿಯರಿಗೂ ಉದ್ಯೋಗ ಸಿಕ್ಕಿತು. ಟಾಟಾ ಮೋಟಾರ್ಸ್ನಲ್ಲಿ ಸಹೋದರಿಯರು ಉದ್ಯೋಗಕ್ಕೆ ನೇಮಕಗೊಂಡರು. ಇದನ್ನೂ ಓದಿ: ʻಮಂಡ್ಯ To ಇಂಡಿಯಾʼ – ಮಂಡ್ಯದಲ್ಲಿ ಇಂದಿನಿಂದ 2 ದಿನ ಬೃಹತ್ ಉದ್ಯೋಗ ಮೇಳ

ಸಾವಿರಾರು ಮಂದಿ ಯುವಕ-ಯುವತಿಯರು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದರು. ಉದ್ಯೋಗಕ್ಕೆ ಆಯ್ಕೆ ಆದವರಿಗೆ ಕುಮಾರಸ್ವಾಮಿ ಅವರು ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.

Share This Article