ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿ ಪ್ರಾಬ್ಲಂ ಒಂದು ಬಗೆಹರಿಯದ ಸಮಸ್ಯೆಯಾಗಿದೆ. ರಸ್ತೆಗುಂಡಿಗಳು ನಿರಂತರವಾಗಿ ಸವಾರರ ಜೀವ ಹಿಂಡುತ್ತಿದ್ದು, ಮುಖ್ಯ ರಸ್ತೆಯಲ್ಲೇ ರಸ್ತೆಗುಂಡಿಗಳಿಂದ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಇದೀಗ ಗುಂಡಿ ತಪ್ಪಿಸಲು ಹೋಗಿ ಮಹಿಳೆಯೊಬ್ಬಳು ಸ್ಕಿಡ್ ಆಗಿ ಬಿದ್ದ ಪ್ರಸಂಗ ನಡೆದಿದೆ.
Advertisement
ಕಸ್ತೂರಿ ನಗರದ ಫ್ಲೈಓವರ್ ಮೇಲೆ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಸ್ವಲ್ಪ ಯಾಮಾರಿದ್ರೂ ಹಿಂದಿನ ಗಾಡಿಯಿಂದ ಅಪಘಾತವಾಗುತ್ತಿತ್ತು. ಬೈಕ್ ಹಿಂದೆ ಬರುತ್ತಿದ್ದ ಕಾರು ಚಾಲಕನ ಸಮಯಪ್ರಜ್ಞೆಯಿಂದ ಮಹಿಳೆ ಬಚಾವಾಗಿದ್ದಾರೆ. ಮಹಿಳೆ ಸ್ಕಿಡ್ ಆಗಿ ಬೀಳ್ತಿರೋದನ್ನ ಕಾರು ಚಾಲಕ ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಬಳಿಕ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಅಭಿನಯದ ‘ಮಾಫಿಯಾ’ ಚಿತ್ರಕ್ಕೆ ಹೈದರಾಬಾದ್ ನಲ್ಲಿ ನಡೀತು ಭರ್ಜರಿ ಫೈಟ್
Advertisement
Advertisement
ಬೆಂಗಳೂರಿನಲ್ಲಿ ಗುಂಡಿ ಲೆಕ್ಕಾಚಾರ: 4 ತಿಂಗಳಲ್ಲಿ ಗುಂಡಿ ಮುಚ್ಚಲು 8 ಕೋಟಿ ವೆಚ್ಚವಾಗಿದ್ದು, 2.5 ಅಡಿ ವಿಸ್ತೀರ್ಣದ ಗುಂಡಿಗೆ 800 ರೂ. ಖರ್ಚು ಮಾಡಲಾಗಿದೆ. ಇದುವರೆಗೆ 16,000 ಗುಂಡಿ ಮುಚ್ಚಲಾಗಿದೆ. 1,000 ಗುಂಡಿ ಇನ್ನೂ ಮುಚ್ಚಲು ಬಾಕಿ ಇದೆ. ಈ ವರ್ಷ ರಸ್ತೆ ಗುಂಡಿಯಿಂದಾಗಿ ಅಪಘಾತಕ್ಕೀಡಾಗಿ 656 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಳಪೆ ರಸ್ತೆ, ಗುಂಡಿಗೆ ಶೇ.17ರಷ್ಟು ಮಂದಿ ಮೃತಪಟ್ಟಿದ್ದಾರೆ. ವರ್ಷಕ್ಕೆ ಗುಂಡಿಯಿಂದಲೇ 30 ಮಂದಿ ತಮ್ಮ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ.
Advertisement
Caught in my dashcam. This happened day before yesterday on kasturi nagar orr flyover. The biker skidded due to a pothole. Luckily the women escaped with minor injuries. Hope BBMP takes some action in filling up the potholes.@BBMPCOMM @BBMPAdmn @blrcitytraffic pic.twitter.com/00Yg1PDoza
— rijesh (@rijesh_kp) August 19, 2022
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ನಿರಂತರವಾಗಿ ಮಳೆಯಿಂದಾಗಿ ಗುಂಡಿಮುಚ್ಚೋಕೆ ಹಿನ್ನಡೆಯಾಗ್ತಿದೆ. ಮೇ ತಿಂಗಳಿನಿಂದ ಈವರೆಗೆ 20 ಸಾವಿರ ಗುಂಡಿಯನ್ನ ಮುಚ್ಚಲಾಗಿದೆ. ಈಗಲೂ ಪ್ರತಿನಿತ್ಯ ಗುಂಡಿ ಗುರುತಿಸಿ ಮುಚ್ಚೋ ಕೆಲಸ ಮಾಡಲಾಗುತ್ತಿದೆ. ಬ್ಯಾಚ್ ಮಿಕ್ಸ್ ಪ್ಲಾಂಟ್‍ನಲ್ಲಿ ಮಳೆಯಿಂದಾಗಿ ತೊಂದರೆ ಆಗುತ್ತಿದೆ. ಬದಲಾಗಿ ಕೋಲ್ಡ್ ಮಿಕ್ಸ್ ಅಳವಡಿಕೆಗೆ ಮುಂದಾಗುತ್ತಿದ್ದೀವಿ. ಇಂದು ನಾಳೆ 40 ಲೋಡ್ ಡಾಂಬರ್ ಮಿಕ್ಸ್ ವ್ಯವಸ್ಥೆ ಆಗುತ್ತಿದೆ ಎಂದು ಹೇಳಿದರು.