ಇಲಿ ಕೊಲ್ಲಲೆಂದು ವಿಷ ಸವರಿ ಇಟ್ಟ ಹಣ್ಣು ತಿಂದು ಯುವತಿ ಸಾವು!

Public TV
1 Min Read
DAVANAGERE GIRL

ದಾವಣಗೆರೆ: ಇಲಿ (Rat) ಸಾಯಿಸಲು ಇಟ್ಟ ಹಣ್ಣು (Poisoned Fruit) ತಿಂದು ಯುವತಿಯೊಬ್ಬಳು ಮೃತಪಟ್ಟ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ನಿವಾಸಿ ಐಶ್ವರ್ಯಾ (21) (Aishwarya) ಸಾವನ್ನಪ್ಪಿದ ಯುವತಿ. ಈಕೆ ನ್ಯಾಮತಿಯ ಸರ್ಕಾರಿ ಕಾಲೇಜ್ ನಲ್ಲಿ ಬಿಎ ಓದುತ್ತಿದ್ದಳು.

ಮನೆಯಲ್ಲಿ ಓಡಾಡಿ ಉಪಟಳ ಕೊಡುವ ಇಲಿಯನ್ನು ಸಾಯಿಸಲೆಂದು ಕುಟುಂಬಸ್ಥರು ಹಣ್ಣಿಗೆ ವಿಷ ಸವರಿ ಇಟ್ಟಿದ್ದರು. ಆದರೆ ಇದನ್ನು ಗಮನಿಸದೇ ಯುವತಿ ಕಾಲೇಜು ಮುಗಿಸಿ ಮನೆಗೆ ಬಂದಾಗ ನೆಲದ ಮೇಲೆ ಬಿದ್ದಿದ್ದ ಹಣ್ಣನ್ನು ತಿಂದಿದ್ದಳು. ಇದನ್ನೂ ಓದಿ: ತಲೆ ನೋವು ನಿವಾರಕದ ಡಬ್ಬಿ ನುಂಗಿ 9 ತಿಂಗಳ ಮಗು ಸಾವು

NYAMATHI POLICE STATION DAVANAGERE

ಹಣ್ಣು ತಿಂದ ಯುವತಿಯ ಆರೋಗ್ಯದಲಲಿ ಏರುಪೇರಾಗುತ್ತಿದ್ದಂತೆಯೇ ಕುಟುಂಬಸ್ಥರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾದರೆ ಯುವತಿ ಸಾವನ್ನಪ್ಪಿದ್ದಾಳೆ.

ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article