BelgaumCrimeLatestMain Post

ಅನೈತಿಕ ಸಂಬಂಧ ಶಂಕೆ: ಕಬ್ಬಿಣದ ರಾಡ್‌ನಿಂದ ಹೊಡೆದು ಯುವಕನ ಕೊಲೆ

ಬೆಳಗಾವಿ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಕಬ್ಬಿಣದ ರಾಡ್‌ನಿಂದ ಯುವಕನ ತಲೆಗೆ ಹೊಡೆದು ಕೊಲೆ ಮಾಡಿ ನಾಲೆಗೆ ಎಸೆದಿರುವ ಘಟನೆ ಬೆಂಡವಾಡ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬೆಂಡವಾಡ ಗ್ರಾಮದ ಅರ್ಜುನ ಮಾರುತಿ ನಗಾಡೆ (30) ಕೊಲೆಯಾದವ. ಈತ ಕಳೆದ ನಾಲ್ಕೈದು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಹೀಗಾಗಿ ರಾಯಬಾಗ ಪೊಲೀಸ್ ಠಾಣೆಯಲ್ಲಿ ಯುವಕನ ಕುಟುಂಬಸ್ಥರು ದೂರು ನೀಡಿದ್ದರು. ಆದರೆ ಇಂದು ಬೆಳಗಿನಜಾವ ಕೊಲೆಯಾದ ಮಾರುತಿ ನಗಾಡೆ ಎಂಬವರ ಶವ ಗೋಕಾಕ ತಾಲೂಕಿನ ಕಾಲುವೆಯೊಂದರಲ್ಲಿ ಸಿಕ್ಕಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ದಂಗೆಕೋರರು ಎಂದು ಭಾವಿಸಿ ಗುಂಡಿನ ದಾಳಿ-13 ಮಂದಿ ದುರ್ಮರಣ

POLICE JEEP

ಮಾರುತಿ ನಗಾಡೆ ಅದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಸಹಿಸದ ಭೀಮಪ್ಪ ತಟ್ಟಿಮನಿ (34) ಎಂಬಾತ ಕೊಲೆ ಮಾಡಿ ಕಾಲುವೆಗೆ ಎಸೆದು ಹೋಗಿದ್ದಾನೆ ಎಂಬುದು ಪೊಲೀಸರಿಗೆ ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಿದ್ದಾರೆ. ಈ ಸಂಬಂಧ ರಾಯಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ವಂಚಕನಿಂದಲೇ ಜಾಕ್ವೆಲಿನ್‌ಗೆ ಸಿಕ್ತು 10 ಕೋಟಿ ರೂ. ಬೆಲೆಯ ಗಿಫ್ಟ್

Leave a Reply

Your email address will not be published.

Back to top button