ದಾವಣಗೆರೆ: ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ದಾವಣಗೆರೆಯ (Davanagere) ಜಯನಗರದಲ್ಲಿ ನಡೆದಿದೆ.
ಉದ್ಯಮಿ ರೇಖಾ ಮುರ್ಗೇಶ್ ಪುತ್ರ ಅಕ್ಷಯ್ (22) ಹೃದಯಘಾತಕ್ಕೆ ಮೃತಪಟ್ಟಿದ್ದಾನೆ. ಅಕ್ಷಯ್ ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದ. ಇದನ್ನೂ ಓದಿ: ಪತಿ ಜೊತೆ ಜಗಳವಾಡಿ ಕೆರೆಗೆ ಹಾರಿ ಬದುಕಿಸುವಂತೆ ಆಂಜನೇಯನನ್ನ ಬೇಡುತ್ತಿದ್ದ ಮಹಿಳೆಯ ರಕ್ಷಣೆ
ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸಿದ ಕೆಲ ಕ್ಷಣಗಳಲ್ಲಿ ಅಕ್ಷಯ್ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಮಂಡ್ಯ | ಮಾನಸಿಕ ಖಿನ್ನತೆಯಿಂದ ಕಾವೇರಿ ನದಿಗೆ ಹಾರಿದ MCA ಪದವೀಧರೆ
ಕಳೆದು ಮೂರು ತಿಂಗಳಲ್ಲಿ ಕೇವಲ ದಾವಣಗೆರೆ ಜಿಲ್ಲಾ ಆಸ್ಪತ್ರೆ ಒಂದರಲ್ಲಿಯೇ 75 ಕ್ಕೂ ಹೆಚ್ಚು ಜನ ಹೃದಯಾಘಾತದಿಂದ ಮೃತಪಟ್ಟ ವಿಚಾರ ಬೆಳಕಿಗೆ ಬಂದಿದೆ.