ನೆಲಮಂಗಲ/ತಿರುವನಂತಪುರ: ಕೇರಳದ (Kerala) ಕಣ್ಣೂರು ಕಡಲಲ್ಲಿ ನೆಲಮಂಗಲದ (Nelamangala) ಯುವಕ ಮುಳುಗಿ ಸಾವನ್ನಪ್ಪಿದ್ದಾನೆ.
ಬ್ಯಾಡರಹಳ್ಳಿ ನಿವಾಸಿ ಸಂತೋಷ್ (21) ಮೃತ ಯುವಕ. ಈತ ಇಬ್ಬರು ಸ್ನೇಹಿತರ ಜೊತೆ ಕೊಟ್ಟಿಯೂರ್ (Kottiyoor) ದೇವಸ್ಥಾನಕ್ಕೆ ತೆರಳಿ, ದೇವರ ದರ್ಶನ ಪಡೆದು ಅಲ್ಲಿಂದ ಕಣ್ಣೂರು ಕಡಲನ್ನು ನೋಡಲು ತೆರಳಿದ್ದ. ಈ ವೇಳೆ ಯುವಕರು ಸಮುದ್ರಕ್ಕೆ ಇಳಿದಿದ್ದರು. ಅಲೆಯ ಹೊಡೆತಕ್ಕೆ ಸಂತೋಷ್ ನೀರಿನಲ್ಲಿ ಮುಳುಗಿದ್ದಾನೆ.
ಯುವಕ ನೀರಿನಲ್ಲಿ ಮುಳುಗುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಸಂತೋಷ್ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಕೇರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
