– ಬಾಗಲಕೋಟೆ ಚಿಣ್ಣರಿಂದ ಪವರ್ ಪ್ಲಾಂಟ್ ಪ್ರಸೆಂಟ್
ಬೆಳಗಾವಿ\ಬಾಗಲಕೋಟೆ: ಹಲವು ವಿಶ್ವ ದಾಖಲೆಗಳನ್ನು ಮಾಡಿರೋ ಗಡಿನಾಡಿನ ಖ್ಯಾತ ಸ್ಕೇಟಿಂಗ್ ಪಟು ಮಾಸ್ಟರ್ ಅಭಿಷೇಕ್ ನಾವಲೆ ಇದೀಗ ಮತ್ತೊಂದು ವಿಶ್ವ ದಾಖಲೆ ಮಾಡಿದ್ದಾರೆ. ಈ ಮೂಲಕ ಹಿಂದೆ ಇದ್ದ ಎಲ್ಲಾ ದಾಖಲೆ ಮುರಿದಿದ್ದಾರೆ. ಅತ್ತ ಬಾಗಲಕೋಟೆಯಲ್ಲಿ ಚಿಣ್ಣರ ಕೈಯಲ್ಲಿ ಅರಳಿದ ಬಗೆ ಬಗೆಯ ವಿಜ್ಞಾನ ಮಾದರಿ, ವಸ್ತುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಹೀಗೆ ಈತ ಕಾಲಿಗೆ ಚಕ್ರ ಕಟ್ಕೊಂಡು ಓಡೋಕೆ ಶುರು ಮಾಡಿದರೆ ಎಲ್ಲಾ ರೆಕಾರ್ಡ್ ಗಳು ಬ್ರೇಕ್. ಅಂದು ಕೊಂಡಿದ್ದನ್ನು ಸಾಧಿಸಿಯೇ ಬಿಡುವ ಛಲವಂತ. ಬೆಳಗಾವಿಯ ಮಾಸ್ಟರ್ ಅಭಿಷೇಕ್ ನಾವಲೆ, ಖಾನಾಪುರ ರಸ್ತೆ ಹಾಗೂ ಕೆಎಲ್‍ಇ ಸಂಸ್ಥೆಯ ಸ್ಕೇಟಿಂಗ್ ರಿಂಗ್ ನಲ್ಲಿ 100 ಮೀಟರ್ ಗುರಿಯನ್ನು ಕೇವಲ 12 ಸೆಕೆಂಡ್ ನಲ್ಲಿ ಮುಟ್ಟಿ ಸಾಧನೆ ಮಾಡಿದ್ದಾರೆ. ಈ ಮೂಲಕ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ವಿಶ್ವದಾಖಲೆಗೆ ಯತ್ನಿಸಿದ್ದಾರೆ. ಈ ದಾಖಲೆಯನ್ನು ರೆಕಾರ್ಡ್ ಮಾಡಿಕೊಂಡಿರುವ ಕೋಚ್ ಹಾಗೂ ಇತರರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಗೆ ಕಳುಹಿಸಿದ್ದಾರೆ.
Advertisement
Advertisement
ಇನ್ನು ಇತ್ತ ಬಾಗಲಕೋಟೆಯ ಬಸವೇಶ್ವರ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ನಡೆದ ಪುಟ್ಟ ಮಕ್ಕಳ ಟ್ಯಾಲೆಂಟ್ ಎಕ್ಸ್ ಪೋ ಎಲ್ಲರ ಹುಬ್ಬೇರಿಸುವಂತೆ ಮಾಡಿತ್ತು. ಆಟ ಪಾಠ ಎಂದು ಹಾಯಾಗಿ ದಿನಗಳನ್ನು ಕಲಿತಿದ್ದ ಮಕ್ಕಳು ಹೈಡ್ರೋ ಎಲೆಕ್ಟ್ರೀಕ್ ಪವರ್ ಪ್ಲಾಂಟ್, ಮ್ಯಾನ್ ಆಂಡ್ ರೋಬೋಟ್, ಅಗ್ರೀಕಲ್ಚರ್ ಎಲಿಮೆಂಟ್ಸ್ ಹಲವು ವಿಜ್ಞಾನಕ್ಕೆ ಸಂಬಂಧಿಸಿದ ವಸ್ತುಗಳನ್ನು ತಯಾರು ಮಾಡಿ ಪ್ರದರ್ಶನಕ್ಕಿಟ್ಟಿದ್ದರು. ಮಕ್ಕಳ ಟ್ಯಾಲೆಂಟ್ ನೋಡಿದ ಜನರು ಬೇಷ್ ಎಂದು ಹೇಳಿದ್ದಾರೆ.
Advertisement
ಒಟ್ಟಿನಲ್ಲಿ ಛಲ ಮಾಡೋ ಹುಮ್ಮಸ್ಸಿದ್ದರೆ ಏನನ್ನೂ ಬೇಕಾದರೂ ಸಾಧಿಸಿ ತೋರಿಸಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ.