ಅಮರಾವತಿ: ಸೀನಿಯರ್ಸ್ ಮಹಿಳಾ ಟಿ20 (Womens T20) ಲೀಗ್ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವಿದ್ದ (Womens Cricket Team) ಬಸ್ ಟ್ರಕ್ಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾದ ಘಟನೆ ಆಂಧ್ರಪ್ರದೇಶದ (Andhra Pradesh) ವಿಶಾಖಪಟ್ಟಣಂನ ಜ್ಞಾನಪುರಂನಲ್ಲಿ ನಡೆದಿದೆ.
ಬಸ್ನಲ್ಲಿದ್ದ ನಾಲ್ವರು ಆಟಗಾರರು ಹಾಗೂ ಕೋಚ್ ಗಾಯಗೊಂಡಿದ್ದು, ಎಲ್ಲರನ್ನೂ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಲಾಯಿತು. ಚಿಕಿತ್ಸೆ ಪಡೆದ ನಂತರ ಅವರು ಬರೋಡಕ್ಕೆ ಹಿಂದಿರುಗಿದ್ದಾರೆ. ಇದನ್ನೂ ಓದಿ: ಚಿತ್ರದುರ್ಗ-ಆಲಮಟ್ಟಿಗೆ ಹೊಸ ರೈಲು ಮಾರ್ಗ- 8,431 ಕೋಟಿ ಅನುದಾನಕ್ಕೆ ಬೇಡಿಕೆ
Advertisement
Advertisement
ಆಂಧ್ರಪ್ರದೇಶದಲ್ಲಿ ಸೀನಿಯರ್ ಮಹಿಳಾ ಟಿ20 ಲೀಗ್ ಮುಗಿಸಿ ಹಿಂದಿರುಗುತ್ತಿದ್ದ ಸಂದರ್ಭದಲ್ಲಿ ಘಟನೆ ಸಂಭವಿಸಿದೆ. ಟ್ರಕ್ ಚಾಲಕ ಹಠಾತ್ ಬ್ರೇಕ್ ಹಾಕಿದ್ದರಿಂದ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಖಚಿತ ಮಾಹಿತಿ ಪಡೆದ ಸ್ಥಳೀಯ ಪೊಲೀಸರು (Police) ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದನ್ನೂ ಓದಿ: ರಿಲಯನ್ಸ್ ರೀಟೇಲ್ನ ಜಿಯೋಮಾರ್ಟ್ ಜೊತೆಗೆ ಆನ್ಲೈನ್ಗೆ ಸ್ಥಳೀಯ ಕುಶಲಕರ್ಮಿಗಳು ಪ್ರವೇಶ
Advertisement
Advertisement
ಸೀನಿಯರ್ ಮಹಿಳಾ ಟಿ20 ಟ್ರೋಫಿಗೆ ತೆರಳಿದ್ದ ಬರೋಡಾದ ಮಹಿಳಾ ಕ್ರಿಕೆಟ್ ತಂಡವು ಅ.20 ರಂದು ಡಾ.ಪಿವಿಜಿ ರಾಜು ಎಸಿಎ ಕ್ರೀಡಾಂಗಣದಲ್ಲಿ ಸೌರಾಷ್ಟ್ರಗಳೊಂದಿಗೆ ನಡೆದ ಪಂದ್ಯದಲ್ಲಿ ಬರೋಡಾ 7 ವಿಕೆಟ್ಗಳಿಂದ ಗೆದ್ದಿತ್ತು. ಯಾಶಿಕಾ ಭಾಟಿಯಾ 60 ಎಸೆತಗಳಲ್ಲಿ 64 ರನ್ ಮತ್ತು ಅಮೃತಾ ಜೋಸೆಫ್ 24 ರನ್ ಗಳಿಸಿದರು. ಯಾಶಿಕಾ ಭಾಟಿಯಾ ಅವರ ನಿರ್ಣಾಯಕ ಹೊಡೆತವು ಬರೋಡಾ ತಂಡಕ್ಕೆ ಪಂದ್ಯವನ್ನು ಗೆಲ್ಲಲು ನೆರವಾಯಿತು.
Andhra Pradesh | A women's cricket team bus met with an accident as it collided with a truck in Gnanapuram, Visakhapatnam earlier today. 4 players & coach were injured; all were admitted to a pvt hospital. After treatment, they went to Vadodara today evening: Visakhapatnam Police pic.twitter.com/VBCboHaQN3
— ANI (@ANI) October 21, 2022
ಸೀನಿಯರ್ ಮಹಿಳಾ ಟಿ20 ಲೀಗ್ನ 14ನೇ ಆವೃತ್ತಿ ಅಕ್ಟೋಬರ್ 11ರಿಂದ ಆರಂಭವಾಯಿತು. ಅಕ್ಟೋಬರ್ 30 ರಂದು ಕ್ವಾಲಿಫೈರ್ ಪಂದ್ಯಗಳು ಆರಂಭವಾಗಲಿದ್ದು, ನವೆಂಬರ್ 5ರಂದು ಫೈನಲ್ ಪಂದ್ಯ ನಡೆಯಲಿದೆ.