ಗದಗ: ಜಿನೋಮ್ ಸೀಕ್ವೆನ್ಸಿಂಗ್‌ಗೆ ಮಾದರಿಯನ್ನು ಕಳುಹಿಸಿದರೆ 22 ದಿನದ ನಂತರ ಓಮಿಕ್ರಾನ್ ಟೆಸ್ಟ್ ವರದಿ ಬಂದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಓಮಿಕ್ರಾನ್ ವರದಿ ಬರುವ ಮುನ್ನವೇ ಸೋಂಕಿತ ಯುವತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
Advertisement
ಪ್ರಕರಣ ಏನು?
ಡಿಸೆಂಬರ್ 30 ರಂದು ಮುಂಬೈ ಮೂಲದ ಯುವತಿ ಗದಗ ಮಾರ್ಗವಾಗಿ ಹಂಪಿ ಪ್ರವಾಸಕ್ಕೆ ಹೊರಟಿದ್ದರು. ಗದಗ ರೈಲ್ವೆ ನಿಲ್ದಾಣದಲ್ಲಿ ಇಳಿದುಕೊಂಡಾಗ ಆರೋಗ್ಯ ಇಲಾಖೆ ಸಿಬ್ಬಂದಿ ಪರೀಕ್ಷೆ ಮಾಡಿದ್ದರು. ಆಗ ಯುವತಿಗೆ ಕೊರೊನಾ ದೃಢವಾಗಿತ್ತು. ನಂತರ ಆಕೆಯನ್ನು ಗದಗ ಜೀಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವತಿ ಸಂಪರ್ಕದಲ್ಲಿದ್ದ ಇತರೆ 10 ಜನರಿಗೆ ನೆಗೆಟಿವ್ ಬಂದಿದೆ. ಸೋಂಕಿತೆಯನ್ನು ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು. ಜಿನೋಮ್ ಸೀಕ್ವೆನ್ಸಿಂಗ್‌ಗೆ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಆದರೆ ವರದಿ ಬರಲು ತಡವಾಗಿದೆ. ಅಷ್ಟರಲ್ಲಾಗಲೇ ಸೋಂಕಿತೆಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆ ಮಾಡಿದಾಗ ನೆಗೆಟಿವ್ ವರದಿ ಬಂದಿದೆ. ನಂತರ ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇದನ್ನೂ ಓದಿ: ಬೂಸ್ಟರ್ ಡೋಸ್ ಪಡೆದ ಬಳಿಕ ಅಜ್ಜನ ಭರ್ಜರಿ ಬ್ಯಾಟಿಂಗ್ – ವೀಡಿಯೋ ವೈರಲ್
Advertisement
ಯುವತಿ ಡಿಸ್ಚಾರ್ಜ್ ಆದ 10 ದಿನಗಳ ನಂತರ ಓಮಿಕ್ರಾನ್ ದೃಢ ಎಂದು ವರದಿ ಬಂದಿದೆ. ಕೋವಿಡ್ ದೃಢವಾಗಿ ಚಿಕಿತ್ಸೆ ಪಡೆದ ಯುವತಿ ಗುಣಮುಖಳಾಗಿ ಡಿಸ್ಚಾರ್ಜ್ ಆಗಿದ್ದಾಳೆ. ವರದಿ ಬರಲು ತಡವಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಜಗದೀಶ್ ನುಚ್ಚಿನ್ ಪ್ರತಿಕ್ರಿಯಿಸಿದ್ದಾರೆ.
Advertisement
Advertisement
ಜಿನೋಮ್ ಸೀಕ್ವೆನ್ಸಿಂಗ್‌ಗೆ ಮಾದರಿ ಕಳುಹಿಸಿ 22 ದಿನಗಳ ನಂತರ ವರದಿ ಬಂದಿರುವುದು ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಇದನ್ನೂ ಓದಿ: ಜನರಿಗೆ ಸಹಾಯವಾಗುವ ನಿರ್ಧಾರ ನಾಳೆ ಪ್ರಕಟ : ಅಶೋಕ್