ಆನೇಕಲ್: ಸುಂದರ ಸಂಸಾರವದು. ಗಂಡನಿಗೆ ಸಾಫ್ಟ್‌ವೇರ್ ಕೆಲಸ… ಕೈ ತುಂಬ ಸಂಬಳ… ಹೆಂಡ್ತಿ ಕೂಡ ಡಿಗ್ರಿ ಮುಗಿಸಿ ಕೆಲಸಕ್ಕಾಗಿ ಹುಡುಕ್ತಿದ್ದರು ಸ್ಫುರದ್ರೂಪಿ ಅವಳು. ಹೀಗಿದ್ದಾಗ ಹೆಂಡ್ತಿಯನ್ನ ಕೊಲೆ ಮಾಡಿ ಸೂಟ್ ಕೇಸ್‌ಗೆ ತುಂಬಿ ಪುಣೆಯಲ್ಲಿ ಅರೆಸ್ಟ್ ಆಗಿರೋ ಗಂಡನ ಕ್ರೈಂ ಸ್ಟೋರಿ ನೋಡಿದ್ರೆ ಬೆಚ್ಚಿಬೀಳೋದಂತೂ ಗ್ಯಾರಂಟಿ.
ಗೌರಿ ಅನಿಲ್ ಸಾಂಬೇಕರ್ ಕೊಲೆಯಾದ ಮಹಿಳೆ. ಮಾಸ್ ಕಮ್ಯುನಿಕೇಷನ್‌ನಲ್ಲಿ ಡಿಗ್ರಿ ಮುಗಿಸಿದ್ರು, ಎರಡು ವರ್ಷದ ಹಿಂದೆ ರಾಕೇಶ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಸಾಫ್ಟ್ ವೇರ್ ಕಂಪನಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದ ರಾಕೇಶ್ ವರ್ಕ್ ಫ್ರಂ ಹೋಮ್‌ನಲ್ಲೇ ಕೆಲಸ ನಿರ್ವಹಿಸ್ತಿದ್ದ. ಇಬ್ಬರೂ ಕೂಡ ಮಹಾರಾಷ್ಟ್ರ ಮೂಲದವರು. ಕಳೆದ ಒಂದು ತಿಂಗಳ ಹಿಂದೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ಬಾಡಿಗೆಗೆ ಬಂದಿದ್ರು ಈ ದಂಪತಿ. ಇದನ್ನೂ ಓದಿ: ಆನೇಕಲ್| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ
ಸೂಟ್‌ಕೇಸ್‌ಗಳನ್ನು ಟಾಯ್ಲೆಟ್‌ನಲ್ಲಿಟ್ಟಿದ್ದ ಪತಿ ರಾಕೇಶ್:
ಇನ್ನು ನಿನ್ನೆ ಸಂಜೆ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿಗೆ ಕರೆ ಮಾಡಿ ಹೆಂಡ್ತಿಯನ್ನು ಕೊಲೆ ಮಾಡಿ ಸೂಟ್‌ಕೇಸ್‌ನಲ್ಲಿಟ್ಟಿರೋದಾಗಿ ಹೇಳಿದ್ದ. ಕೆಳಗಿನ ಮನೆಯ ಬಾಡಿಗೆದಾರ ಕೂಡಲೇ ಮಾಲೀಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ರು. ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂ, ಸೋಕೊ ಟೀಂ ಜೊತೆ ಎಂಟ್ರಿ ಕೊಟ್ಟ ಹುಳಿಮಾವು ಪೊಲೀಸರಿಗೆ ಕೊಲೆಯಾಗಿರೋದು ಕನ್ಫರ್ಮ್ ಆಗಿತ್ತು. ಹೆಂಡತಿಯ ದೇಹವನ್ನು ಅರ್ಧ ಕತ್ತರಿಸಿ, ಹೊಟ್ಟೆಭಾಗ ಕೊಯ್ದು ಸೂಟ್‌ಕೇಸ್‌ನಲ್ಲಿ ತುರುಕಿ, ಟಾಯ್ಲೆಟ್ ರೂಂನಲ್ಲಿಟ್ಟು ಪತಿರಾಯ ಎಸ್ಕೇಪ್ ಆಗಿದ್ದ. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ತಟ್ಟಿದ ಬರ – 20 ಗ್ರಾಮಗಳಲ್ಲಿ ಒಂದು ತೊಟ್ಟು ನೀರಿಲ್ಲ, ಬತ್ತಿದ ಬಾವಿಗಳ ಅಂತರ್ಜಲ
ಮೊನ್ನೆ ರಾತ್ರಿ ಊಟದ ಸಮಯಕ್ಕೆ ಗಂಡ ಹೆಂಡ್ತಿ ನಡುವೆ ಗಲಾಟೆಯಾಗಿದೆ. ಈ ವೇಳೆ ಹೆಂಡ್ತಿಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಆರೋಪಿಯ ಸಿಡಿಆರ್ ಜಾಡು ಹಿಡಿದ ಪೊಲೀಸರು ಪುಣೆಯ ಶಿರವಾಲ್ ಪೊಲೀಸರು ಬಂಧಿಸಿದ್ದಾರೆ. ಹುಳಿಮಾವು ಪೊಲೀಸ್ರು ಪುಣೆ ರೀಚ್ ಆಗಿದ್ದು, ಆರೋಪಿಯನ್ನ ಕರೆತರ್ತಿದ್ದಾರೆ. ಇನ್ನು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಕಳಿಸಿದ್ದು, ಗೌರಿ ಪೋಷಕರಿಗೆ ವಿಚಾರ ಮುಟ್ಟಿಸಿದ್ದಾರೆ.
ಗಂಡ ಹೆಂಡ್ತಿ ಅಂದ್ ಮೇಲೆ ನೂರು ವಿಚಾರ ಬರುತ್ತೆ ಹೋಗುತ್ತೆ. ಅಷ್ಟಕ್ಕೆ ಹೆಂಡ್ತಿ ಕೊಲೆ ಮಾಡಿ ಸೂಟ್ ಕೇಸ್‌ಗೆ ತುಂಬ್ತಾನಂದ್ರೆ ಟೆಕ್ಕಿ ಎಂಥಾ ಕಟುಕನಿರಬೇಡ. ಸದ್ಯ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ದುರಂತ – ಕೆಳಹಂತದ 4 ಅಧಿಕಾರಿಗಳು ಅಮಾನತು