ರಾಯಚೂರು: ಕಾಂಗ್ರೆಸ್ (Congress) ಪಕ್ಷದ 200 ಯೂನಿಟ್ ಉಚಿತ ವಿದ್ಯುತ್ ಭರವಸೆ ಹಿನ್ನಲೆ ವಿದ್ಯುತ್ ಬಿಲ್ ನೀಡಲು ಬಂದ ಜೆಸ್ಕಾಂ (GESCOM) ಸಿಬ್ಬಂದಿಗೆ ಗೃಹಿಣಿಯೊಬ್ಬರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ನಡೆದಿದೆ.
ಮಸ್ಕಿ ಶಾಸಕ ಬಸನಗೌಡ ತುರುವಿಹಾಳ ಕರೆಂಟ್ ಬಿಲ್ ಕಟ್ಟಬೇಡ ಎಂದಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬಂದಾಗ ಗ್ಯಾರೆಂಟಿ ಕಾರ್ಡ್ ಕೊಟ್ಟು ಹೇಳಿದ್ದಾರೆ. ಗೆಲ್ಲೋವರೆಗೂ ಒಂದು, ಗೆದ್ದ ಮೇಲೆ ಇನ್ನೊಂದಾ? ನಾವು ಬಿಲ್ ಕಟ್ಟೋದಿಲ್ಲ ಎಂದು ಸಿಬ್ಬಂದಿ ವಿರುದ್ಧ ಗೃಹಿಣಿ ಗರಂ ಆಗಿದ್ದಾರೆ. ಇದನ್ನೂ ಓದಿ: ನಿಮಗೂ ಫ್ರೀ, ನಮಗೂ ಫ್ರೀ – ವಿದ್ಯುತ್ ಬಿಲ್ ಕಟ್ಟದೇ ಚೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದ ಗ್ರಾಮಸ್ಥರು
Advertisement
Advertisement
ಜೆಸ್ಕಾಂ ಸಿಬ್ಬಂದಿಯನ್ನು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ಬಸ್‌ಗಳಲ್ಲೂ ಫ್ರೀ ಓಡಾಡಬೇಕು. ಕಾಂಗ್ರೆಸ್ ಸರ್ಕಾರ ಬಂದಿದೆ ಅಂತ ಮಹಿಳೆ ದಬಾಯಿಸಿದ್ದಾಳೆ. ಮಹಿಳೆ ಆವಾಜ್‌ಗೆ ಜೆಸ್ಕಾಂ ಸಿಬ್ಬಂದಿ ಅಲ್ಲಿಂದ ವಾಪಸ್ ಹೋಗಿದ್ದಾರೆ.
Advertisement
Advertisement
ಚುನಾವಣೆ ಸಂದರ್ಭದಲ್ಲಿ ಜನತೆಗೆ ಕಾಂಗ್ರೆಸ್ 5 ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಲ್ಲಿ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಭರವಸೆ ನೀಡಿತ್ತು. ಈಗ ಕಾಂಗ್ರೆಸ್ 136 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ನನ್ನ ಬೆನ್ನಿಗೆ ಚೂರಿ ಹಾಕ್ತೀರಿ, ಎಷ್ಟು ಕಿರುಕುಳ ಕೊಡ್ತೀರಿ: ಖೂಬಾ ವಿರುದ್ಧ ಪ್ರಭು ಚವ್ಹಾಣ್ ಕೆಂಡಾಮಂಡಲ