– ಮಹಿಳೆಯ ಜನನ ಪ್ರಮಾಣ ಪತ್ರವೇ ಇದೆ 2 ಅಡಿ ಉದ್ದ
– ಸುಮಾರು 1,019 ಅಕ್ಷರಗಳಿರುವ ಹೆಸರು
ಹೂಸ್ಟನ್: ಹೆತ್ತವರು ತಮ್ಮ ಮಕ್ಕಳಿಗೆ ಹೆಸರಿಡುವಾಗ ನಾನಾ ರೀತಿಯಲ್ಲಿ ಯೋಚಿಸುತ್ತಾರೆ. ಮಗುವಿನ ರೂಪ ಲಾವಣ್ಯ, ಹುಟ್ಟಿದ ಸಂದರ್ಭಕ್ಕೆ ತಕ್ಕಂತೆ ಹೆಸರಿಡುವವರಿದ್ದಾರೆ. ಎಷ್ಟೋ ಮಂದಿ ತಮ್ಮ ಇಷ್ಟದ ವ್ಯಕ್ತಿ, ನಟ, ನಟಿ ಹೆಸರೋ ಅಥವಾ ಕುಟುಂಬದ ಸದಸ್ಯರ ನೆನಪಿನಾರ್ಥ ಅವರ ಹೆಸರನ್ನೇ ಇಡುವವರಿದ್ದಾರೆ. ಇನ್ನೂ ಕೆಲವರು ಶಾಸ್ತ್ರ, ಸಂಪ್ರದಾಯಕ್ಕೆ ತಕ್ಕಂತೆ ಮಕ್ಕಳಿಗೆ ಹೆಸರಿಡುತ್ತಾರೆ.
Advertisement
ಆದರೆ ಇಲ್ಲೊಬ್ಬರು ತಮ್ಮ ಮಗಳಿಗೆ ಕೇಳುಗರು ಅಚ್ಚರಿ ಪಡುವಂತ ಹೆಸರಿಟ್ಟಿದ್ದಾರೆ. ಆ ಹೆಸರು ಈಗ ಇಡೀ ವಿಶ್ವದಾದ್ಯಂತ ಸುದ್ದಿಯಾಗುತ್ತಿದ್ದು, ರೆಕಾರ್ಡ್ ಕೂಡ ಮಾಡಿದೆ. ಜಗತ್ತಿನ ಅತೀ ಉದ್ದದ ಹೆಸರು ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಆ ಹೆಸರು ಕೇಳಿದರೆ ಖಂಡಿತ ನಿಮಗೂ ಅಚ್ಚರಿಯಾಗಬಹುದು. ಇದನ್ನೂ ಓದಿ: ಪಾಕ್ ಪ್ರಧಾನಿ, ಮಾಜಿ ಪತ್ನಿಯ ಕಾರಿನ ಮೇಲೆ ಗುಂಡಿನ ದಾಳಿ
Advertisement
Advertisement
ಹೌದು, ಉತ್ತರ ಅಮೆರಿಕದ ಟೆಕ್ಸಾಸ್ ರಾಜ್ಯದ ಹೂಸ್ಟನ್‍ನ ಜೇಮ್ಸ್ ವಿಲಿಯಮ್ಸ್ ಮತ್ತು ಸಾಂಡ್ರಾ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ವಿಶಿಷ್ಟವಾದ ಹೆಸರನ್ನು ಇಟ್ಟಿದ್ದಾರೆ. ಆ ಹೆಸರಿನ ಜನನ ಪ್ರಮಾಣ ಪತ್ರವೇ 2 ಅಡಿ ಉದ್ದ ಇದೆ. ಸುಮಾರು 1,019 ಅಕ್ಷರಗಳಿರುವ ಹೆಸರನ್ನು ಆ ಮಹಿಳೆ ತನ್ನ ಮಗಳಿಗೆ ನಾಮಕರಣ ಮಾಡಿದ್ದಾರೆ.
Advertisement
ಹೆಸರೇನು ಗೊತ್ತೆ?
Rhoshandiatellyneshiaunneveshenkescianneshaimondrischlyndasaccarnaerenquellenendrasamecashaunettethalemeicoleshiwhalhinive’onchellecaundenesheaalausondrilynnejeanetrimyranaekuesaundrilynnezekeriakenvaunetradevonneyavondalatarneskcaevontaepreonkeinesceellaviavelzadawnefriendsettajessicannelesciajoyvaelloydietteyvettesparklenesceaundrieaquenttaekatilyaevea’shauwneoraliaevaekizzieshiyjuanewandalecciannereneitheliapreciousnesceverroneccaloveliatyronevekacarrionnehenriettaescecleonpatrarutheliacharsalynnmeokcamonaeloiesalynnecsiannemerciadellesciaustillaparissalondonveshadenequamonecaalexetiozetiaquaniaenglaundneshiafrancethosharomeshaunnehawaineakowethauandavernellchishankcarlinaaddoneillesciachristondrafawndrealaotrelleoctavionnemiariasarahtashabnequckagailenaxeteshiataharadaponsadeloriakoentescacraigneckadellanierstellavonnemyiatangoneshiadianacorvettinagodtawndrashirlenescekilokoneyasharrontannamyantoniaaquinettesequioadaurilessiaquatandamerceddiamaebellecescajamesauwnneltomecapolotyoajohnyaetheodoradilcyana
ವರ್ಲ್ಡ್ ರೆಕಾರ್ಡ್
ತನ್ನ ಮಗಳಿಗೆ ಈ ಹೆಸರಿಡಲು ಸಾಂಡ್ರಾ ವಿಲಿಯಮ್ಸ್ ಅವರು ಸತತ ಒಂದು ವರ್ಷ ಯೋಚನೆ ಮಾಡಿದ್ದರು. ಉದ್ದದ ಹೆಸರು ಪಡೆದಿರುವ ಮಹಿಳೆ 1984ರಲ್ಲಿ ಜನಿಸಿದರು. ಈಗ ಆಕೆಯ ಹೆಸರು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದೆ. ಇದನ್ನೂ ಓದಿ: ಬಸ್ ಅಪಘಾತದಲ್ಲಿ 22 ಮಂದಿ ಸಾವಿಗೆ ಕಾರಣನಾದ ಚಾಲಕನಿಗೆ 190 ವರ್ಷ ಜೈಲು ಶಿಕ್ಷೆ
The longest name to appear on a birth certificate is Rhoshandiatellyneshiaunneveshenk Koyaanisquatsiuth Williams.#OTD in 1984, her father looked to extend her first name to 1,019 letters and her middle name to 36 letters. pic.twitter.com/XG6iUMi237
— Guinness World Records (@GWR) October 5, 2020
1 ವರ್ಷ ಯೋಚಿಸಿದ್ದ ತಾಯಿ
ಈಕೆ ಹೆಸರು ಉದ್ದ ಎಂಬ ಕಾರಣಕ್ಕೆ Jameshauwnnel ಅಥವಾ Jamie’ ಅಂತ ಎರಡು ಅಡ್ಡ ಹೆಸರುಗಳಿಂದ ಸ್ನೇಹಿತರು ಕರೆಯುತ್ತಾರೆ. ಸಂಬಂಧಿಕರು, ಹಲವು ದೇಶಗಳು ಮತ್ತು ನಗರಗಳು, ಸ್ನೇಹಿತರು, ಪ್ರೀತಿ ಪಾತ್ರರ ಹೆಸರುಗಳನ್ನು ಸೇರಿಸಿ ವಿಲಿಯಮ್ಸ್ ದಂಪತಿ ತಮ್ಮ ಮಗಳಿಗೆ ಹೆಸರಿಟ್ಟಿದ್ದಾರೆ.
ರಿಜಿಸ್ಟ್ರಾರ್‌ಗೆ ಕಿರಿಕಿರಿ
ಈ ಹೆಸರನ್ನು ನೋಂದಣಿ ಮಾಡುವಾಗ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿತ್ತು. ಇಷ್ಟು ದೊಡ್ಡದಾದ ಹೆಸರನ್ನು ಹೇಗೆ ನೋಂದಣಿ ಮಾಡುವುದು ಎಂಬುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಈಕೆ ಹೆಸರಿನ ನಂತರ ರಾಜ್ಯ ರಿಜಿಸ್ಟ್ರಾರ್ ಡಬ್ಲ್ಯೂ.ಡಿ.ಕ್ಯಾರೊಲ್ ಅವರು, 51/8 ಇಂಚಿನ ಜಾಗದಲ್ಲಿ ಎರಡು ಟೈಪ್‍ರೈಟ್ ಲೈನ್‍ಗಳಿಗೆ ಹೊಂದಿಕೆಯಾಗದ ಯಾವುದೇ ಹೆಸರನ್ನು ಕಚೇರಿ ಸ್ವೀಕರಿಸುವುದಿಲ್ಲ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದ್ದರು.
ಇಷ್ಟದ ಹೆಸರಿಡಲು ಕೋರ್ಟ್ ಅನುಮತಿ
ಪಾಲಕರು ತಮ್ಮ ಮಕ್ಕಳಿಗೆ ಏನು ಬೇಕಾದರೂ ಹೆಸರಿಡಬಹುದು ಎಂದು ರಾಜ್ಯದಲ್ಲಿ ಮೂರು ನ್ಯಾಯಾಲಯಗಳು ತೀರ್ಪು ನೀಡಿವೆ. ಆದರೆ ಕ್ಯಾರೊಲ್ ಅವರ ಆದೇಶ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾಗಿದೆ. ಈ ಬಗ್ಗೆ ರಾಜ್ಯ ರಿಜಿಸ್ಟ್ರಾರ್ ಕಚೇರಿಯ ಸಹಾಯಕ ಅಧಿಕಾರಿಯನ್ನು ಕೇಳಿದರೆ, ಕ್ಯಾರೊಲ್ ಅವರ ಆದೇಶವನ್ನು ಟೆಕ್ಸಾಸ್‍ನಲ್ಲಿ ಇನ್ನೂ ಯಾರೂ ಪ್ರಶ್ನಿಸಿಲ್ಲ ಎಂದು ಹೇಳಿದ್ದಾರೆ.