ಜೈಪುರ: ಹೆಣ್ಣುಮಕ್ಕಳು ಹಿಜಬ್‌ನ್ನು(Hijab) ತಲೆಗೆ ಧರಿಸುತ್ತಾರೆ, ಮನಸ್ಸಿಗಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ(Asaduddin Owaisi) ಹೇಳಿದ್ದಾರೆ.
ಹಿಜಬ್ ಕುರಿತು ಕರ್ನಾಟಕ(Karnataka) ಹೈಕೋರ್ಟ್(High Court) ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್(Supreme Court) ವಿಚಾರಣೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಓವೈಸಿ, ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಆಚರಣೆಯಾಗಿದೆ. ಇದು ನಮ್ಮ ಸಾಂಸ್ಕೃತಿಕ ಹಕ್ಕು ಎಂದು ಪ್ರತಿಪಾದಿಸಿದ್ದಾರೆ. ಇದನ್ನೂ ಓದಿ: ಕೊಡವರ ಶಸ್ತ್ರಾಸ್ತ್ರ ಹಕ್ಕು ಉಲ್ಲೇಖ, ವಿಶ್ವಾದ್ಯಂತ ಮಾನ್ಯತೆ ಇರೋ ಹಿಜಬ್‌ಗೆ ಕರ್ನಾಟಕದಲ್ಲಿ ಅನುಮತಿ ಯಾಕಿಲ್ಲ: ಸುಪ್ರೀಂನಲ್ಲಿ ವಕೀಲರ ಪ್ರಶ್ನೆ
ಸರ್ಕಾರಿ ಶಾಲೆಗಳು ಇತರ ಧಾರ್ಮಿಕ ಚಿಹ್ನೆಗಳನ್ನು ಅನುಮತಿಸಿದರೆ, ಹಿಜಬ್‌ಗೆ ಏಕೆ ಅವಕಾಶ ಕೊಡಬಾರದು? ಇದು ಮಹಿಳೆಯರ ಹಕ್ಕು ಕೂಡ ಎಂದು ತಿಳಿಸಿದ್ದಾರೆ.
ಜ್ಞಾನವಾಪಿ ಮಸೀದಿ ತೀರ್ಪು ಕುರಿತು ಮಾತನಾಡಿದ ಅವರು, ಆರಾಧನಾ ಸ್ಥಳಗಳ ಕಾಯಿದೆ, 1991 ರ ವಿರುದ್ಧವಾಗಿದೆ. ವ್ಯವಸ್ಥೆಯೊಂದನ್ನು ಅಸ್ಥಿರಗೊಳಿಸುವ ಪ್ರಯತ್ನ ಇದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಪ್ರಕರಣ: ಶಾಲಾ ವಿದ್ಯಾರ್ಥಿಗಳನ್ನು ಹೈಕೋರ್ಟ್ ಕೈದಿಗಳಿಗೆ ಹೋಲಿಸಿದೆ – ಸುಪ್ರೀಂಕೋರ್ಟ್‌ನಲ್ಲಿ 2 ಗಂಟೆ ಮಹತ್ವದ ವಿಚಾರಣೆ
ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದಕ್ಕಾಗಿಯೇ ನಾವು ಇಲ್ಲಿದ್ದೇವೆ. ನಾವು ರಾಜ್ಯದಲ್ಲಿ ನಮ್ಮ ಪಕ್ಷದ ಕೆಲಸವನ್ನು ಮೌಲ್ಯಮಾಪನ ಮಾಡುತ್ತೇವೆ. ರಾಜಸ್ಥಾನ(Rajasthan) ಚುನಾವಣೆಗಳಿಗೆ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇವೆ. ಮಹಿಳಾ ಅಭ್ಯರ್ಥಿಗಳಿಗೆ ಸಮಾನ ಪ್ರಾತಿನಿಧ್ಯ ನೀಡಲಾಗುವುದು ಎಂದು ತಿಳಿಸಿದ್ದಾರೆ.