ಬೆಂಗಳೂರು: ಸಾರ್ವಜನಿಕರು ಸಂಚಾರ ನಿಯಮ (Traffic Rules) ಉಲ್ಲಂಘಿಸಿದರೆ ಬುದ್ದಿಮಾತು ಹೇಳಿ ಜಾಗೃತಿ ಮೂಡಿಸಬೇಕಾದ ಪೊಲೀಸ್ ಇಲಾಖೆಯವರೇ ತಪ್ಪು ಮಾಡಿ ಟೀಕೆಗೆ ಗುರಿಯಾಗಿರುವ ಘಟನೆ ರಾಜಧಾನಿಯಲ್ಲಿ ನಡೆದಿದೆ. ಸ್ಕೂಟಿಯಲ್ಲಿ ಹೆಲ್ಮೆಟ್ ಕೂಡ ಇಲ್ಲದೇ ತ್ರಿಬಲ್ ರೈಡಿಂಗ್ ಬಂದ ಮಹಿಳಾ ಪೊಲೀಸ್ ಪೇದೆಗಳಿಗೆ ಮಹಿಳೆಯೊಬ್ಬರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೂವರು ಮಹಿಳಾ ಪೊಲೀಸ್ ಪೇದೆಗಳು ಹೆಲ್ಮೆಟ್ ಇಲ್ಲದೇ ಸ್ಕೂಟಿಯಲ್ಲಿ ತ್ರಿಬಲ್ ರೈಡಿಂಗ್ ಬಂದಿದ್ದಾರೆ. ಮತ್ತೊಂದು ಸ್ಕೂಟಿಯಲ್ಲಿ ಇನ್ನಿಬ್ಬರು ಮಹಿಳಾ ಕಾನ್‌ಸ್ಟೇಬಲ್‌ಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿರಲಿಲ್ಲ. ಇದನ್ನು ಗಮನಿಸಿದ ಮಹಿಳೆಯೊಬ್ಬರು, “ರೂಲ್ಸ್ ಮಾಡೊರೂ ನೀವೇ.. ಬ್ರೇಕ್ ಮಾಡೊರೂ ನೀವೇ..ʼ ಅಂತಾ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೇ ಈ ದೃಶ್ಯವನ್ನು ವೀಡಿಯೋ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಗಾಳಿಯಲ್ಲಿ ಗುಂಡುಹಾರಿಸಿ ಹಿಡಿಯಲು ಮುಂದಾದ ಅರಣ್ಯಾಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ ಗಂಧಚೋರರು
Advertisement
Advertisement
ಮಹಿಳೆ ರೇಗುತ್ತಿದ್ದಂತೆಯೇ ಹಿಂಬದಿ ಸವಾರರು ಸ್ಕೂಟಿಯಿಂದ ಇಳಿದಿದ್ದಾರೆ. “ತುರ್ತು ಕೆಲಸ ಇತ್ತು. ಅದಕ್ಕಾಗಿ ಹೆಲ್ಮೆಟ್ ಇಲ್ಲದೇ ಬಂದಿದ್ದೇವೆ” ಎಂದು ಉಡಾಫೆ ಉತ್ತರ ಕೂಡ ಮಹಿಳಾ ಪೊಲೀಸರು ನೀಡಿದ್ದಾರೆ.
Advertisement
Advertisement
“ನೀವು ಏನ್ ಏನ್ ರೂಲ್ಸ್ ಬ್ರೇಕ್ ಮಾಡಿದೀರಾ ನೋಡಿಕೊಳ್ಳಿ. ದಯವಿಟ್ಟು ಗಾಡಿಯಿಂದ ಇಳಿಯಿರಿ, ಹೆಲ್ಮೆಟ್ ಹಾಕಿಕೊಳ್ಳಿ. ಇವರೇ ರೂಲ್ಸ್ ಮಾಡ್ತಾರೇ ಅಂತ ಹೇಳಲ್ವಾ ಎಂದು ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಮಹಿಳೆ ಈ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ನಾವು ಯಾವುದೇ ರೌಡಿಗಳನ್ನು ಸೇರಿಸಿಕೊಂಡಿಲ್ಲ, ಪ್ರೋತ್ಸಾಹ ನೀಡಿಲ್ಲ: ಬೊಮ್ಮಾಯಿ