ಬೀದರ್: ಮೈಕೊರೆವ ಚಳಿಯಲ್ಲಿ ಹಸುಗೂಸನ್ನು ಬಿಟ್ಟು ಹೋದ ಅಮಾನವೀಯ ಘಟನೆ ಜಿಲ್ಲೆಯ ಜಿಲ್ಲೆಯ ಭಾಲ್ಕಿ ತಾಲೂಕಿನ ರುದನೂರ್ (Rudnoor) ಗ್ರಾಮದಲ್ಲಿ ನಡೆದಿದೆ.
ಬೆಳ್ಳಂಬೆಳಗ್ಗೆ ಗ್ರಾಮದ ಅಂಬೇಡ್ಕರ್ ವೃತ್ತದ ಹತ್ತಿರ ಇರುವ ಮಸೀದಿ ಕಾಂಪೌಂಡ್ ಪಕ್ಕದಲ್ಲಿ ಹಸುಗೂಸು ಪ್ರತ್ಯಕ್ಷವಾಗಿದ್ದು, ಗಂಡು ಮಗು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಮಾತು ತೊದಲಿದೆ, ಕೈ ನಡುಗುತ್ತಿದೆ: ವಿಶಾಲ್ ಸ್ಥಿತಿ ನೋಡಿ ಫ್ಯಾನ್ಸ್ ಶಾಕ್
Advertisement
Advertisement
ಮಗುವನ್ನು ಬಿಟ್ಟು ಹೋದ ದೃಶ್ಯಾವಳಿಗಳು ಅಲ್ಲಿಯೇ ಹತ್ತಿರದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಒಂದು ಚೀಲದಲ್ಲಿ ಮಗುವನ್ನು ತಂದಿದ್ದಾಳೆ. ಸುತ್ತಲೂ ಯಾರಾದರೂ ಇದ್ದಾರಾ ಎಂಬುವುದನ್ನು ಗಮನಿಸಿ. ಮಗುವನ್ನು ಕಾಂಪೌಂಡ್ ಪಕ್ಕದಲ್ಲಿ ಬಿಟ್ಟು ಹೋಗಿರುವುದು ಕಂಡುಬಂದಿದೆ.
Advertisement
ಬೆಳಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ಜಮಾವಣೆಯಾಗಿ, ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದೆ. ಸ್ಥಳಕ್ಕೆ ಧನ್ನೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಸದ್ಯ ಪೊಲೀಸರು ಹಸುಗೂಸು ಬಿಟ್ಟು ಹೋದ ಮಹಿಳೆಯನ್ನು ಪತ್ತೆ ಹಚ್ಚಲು ನಿರತರಾಗಿದ್ದಾರೆ.ಇದನ್ನೂ ಓದಿ:ವೈದ್ಯೆಯಿಂದ 2.52 ಕೋಟಿ ರೂ., 2.350 ಕೆಜಿ ಚಿನ್ನ ಪಡೆದು ವಂಚನೆ – ಐಶ್ವರ್ಯಗೌಡ ಮೇಲೆ ಮತ್ತೊಂದು ಎಫ್‌ಐಆರ್