ಭುವನೇಶ್ವರ: ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ 26 ವರ್ಷದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ಅರ್ಚನಾ ನಾಗ್ (Archana Nag) ಎಂದು ಗುರುತಿಸಲಾಗಿದೆ. ಈಕೆ ಒಡಿಶಾದ ಕಲಹಂಡಿ ಜಿಲ್ಲೆಯ ನಿವಾಸಿಯಾಗಿದ್ದು, ಅಕ್ಟೋಬರ್ 6 ರಂದು ಬಂಧಿಸಲಾಯಿತು.
Advertisement
Advertisement
ರಾಜಕಾರಣಿಗಳು, ಉದ್ಯಮಿಗಳು ಮತ್ತು ಚಲನಚಿತ್ರ ನಿರ್ಮಾಪಕರು ಸೇರಿದಂತೆ ರಾಜ್ಯದ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಂದ ತಮ್ಮ ಆತ್ಮೀಯ ಕ್ಷಣಗಳ ಫೋಟೋ (Photo) ಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಸುತ್ತಾಳೆ. ಅಲ್ಲದೆ ಹಣ ಕೂಡ ವಸೂಲಿ ಮಾಡಿರುವ ಆರೋಪ ಎದುರಿಸುತ್ತಿದ್ದಾಳೆ.
Advertisement
ಮೂಲತಃ ಒಡಿಶಾದ ಲಂಜಿಘರ್ ನಿವಾಸಿಯಾಗಿರುವ ಈಕೆ 2015ರಲ್ಲಿ ಭುವನೇಶ್ವರಕ್ಕೆ ಬಂದು ನೆಲೆಸಿದ್ದಾಳೆ. ಮೊದಲು ಖಾಸಗಿ ಭದ್ರತಾ ಸಂಸ್ಥೆಯೊಂದರಲ್ಲಿ ಕೆಲ ಮಾಡುತ್ತಿದ್ದ ಈಕೆ ನಂತರ ಬ್ಯೂಟಿಪಾರ್ಲರ್ ಒಂದಕ್ಕೆ ಸೇರಿಕೊಳ್ಳುತ್ತಾಳೆ. ಇಲ್ಲಿ ಈಕೆ ಜಗಬಂಧು ಚಂದ್ ಎಂಬಾತನನ್ನು ಭೇಟಿಯಾಗುತ್ತಾಳೆ. ಅಲ್ಲದೆ 2018ರಲ್ಲಿ ಆತನ ಜೊತೆ ದಾಂಪತ್ಯ ಜೀವನಕ್ಕೂ ಕಾಲಿಡುತ್ತಾಳೆ. ಇದೇ ವೇಳೆ ಬ್ಯೂಟಿ ಪಾರ್ಲರ್ ಜೊತೆ ಸೆಕ್ಸ್ ರಾಕೆಟ್ ಕೂಡ ನಡೆಸುತ್ತಿದ್ದಳು ಎಂಬ ಆರೋಪ ಕೂಡ ಈಕೆಯ ಮೇಲಿದೆ.
Advertisement
ಜಗಬಂಧು, ಕಾರ್ ಶೋರೂಂ (Car Showroom) ನಡೆಸುತ್ತಿದ್ದರು. ಇವರಿಗೆ ಶ್ರೀಮಂತ ವ್ಯಕ್ತಿಗಳ ಪರಿಚಯವಿತ್ತು. ಕೆಲವು ಶಾಸಕರು ಸೇರಿದಂತೆ ಪ್ರಭಾವಿ ವ್ಯಕ್ತಿಗಳೊಂದಿಗೆ ದಂಪತಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಳಿಕ ಅವುಗಳು ವಿವಾದಕ್ಕೆ ಕಾರಣವಾಗಿವೆ. ಇತ್ತ ಅರ್ಚನಾ ಅವರು ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಸ್ನೇಹ ಬೆಳೆಸಿದರು. ಈ ಮಧ್ಯೆ ಅವರಿಗೆ ಕೆಲ ಸ್ತ್ರೀಯರ ಪರಿಚಯ ಮಾಡಿಕೊಟ್ಟಿದ್ದಾಳೆ. ಅಂತೆಯೇ ಅವರು ಮಹಿಳೆಯರ ಜೊತೆ ತೆಗೆಸಿಕೊಂಡ ಫೋಟೋಗಳನ್ನಿಟ್ಟುಕೊಂಡು ಅವರಿಗೆ ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿನಿಮಾ ನಿರ್ಮಾಪಕರೊಬ್ಬರು ನಯಾಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಾನು ಕೆಲವು ಹುಡುಗಿಯರೊಂದಿಗೆ ಇರುವ ಫೋಟೋವನ್ನು ತೋರಿಸಿ ಅರ್ಚನಾ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅರ್ಚನಾ ನನ್ನನ್ನು ಆಕೆಯ ದಂಧೆಗೆ ಬಳಸಿಕೊಂಡಿದ್ದಾಳೆ ಎಂದು ವಿವರಿಸಿದ್ದಾರೆ. ಈ ದೂರು ಸ್ವೀಕರಿಸಿದ ಪೊಲೀಸರಿಗೆ ತನಿಖೆ ನಡೆಸಿದ ವೇಳೆ ಸತ್ಯ ಬಯಲಾಗಿದೆ.
2018 ರಿಂದ 2022 ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ದಂಪತಿ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅರ್ಚನಾ ನಾಗ್ ಆಮದು ಮಾಡಿದ ಮನೆಯ ಒಳಾಂಗಣ ಅಲಂಕಾರಗಳು, ಐಷಾರಾಮಿ ಕಾರುಗಳು, ನಾಲ್ಕು ಉನ್ನತ ತಳಿ ನಾಯಿಗಳು ಮತ್ತು ಬಿಳಿ ಕುದುರೆಗಳು ತನ್ನ ಆಸ್ತಿಯಲ್ಲಿ ಹೊಂದಿದ್ದಾಳೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಸೊಸೆಯಿಂದಲೇ ಅತ್ತೆಯ ಕೊಲೆ
ಪ್ರಕರಣದ ಕುರಿತು ಭುವನೇಶ್ವರ್ ಡಿಸಿಪಿ ಪ್ರತೀಕ್ ಸಿಂಗ್ ಪ್ರತಿಕ್ರಿಯಿಸಿ, ಈ ಸಂಬಂಧ ಅರ್ಚನಾ ವಿರುದ್ಧ ಕೇವಲ ಎರಡು ಪ್ರಕರಣಗಳನ್ನು ಮಾತ್ರ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇತರ ಸಂತ್ರಸ್ತರು ಆಕೆಯ ವಿರುದ್ಧ ದೂರು ನೀಡಿದರೆ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಅರ್ಚನಾ ಅವರ ಬ್ಯಾಂಕ್ ಸ್ಟೇಟ್‍ಮೆಂಟ್‍ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಬ್ಲಾಕ್‍ಮೇಲ್ ಪ್ರಕರಣವು ರಾಜಕೀಯ ಕೋನವನ್ನು ಸಹ ಹೊಂದಿದೆ ಎಂದು ಬಿಜೆಪಿ ಭುವನೇಶ್ವರ ಘಟಕದ ಅಧ್ಯಕ್ಷ ಬಾಬು ಸಿಂಗ್ ಹೇಳಿದ್ದಾರೆ. 18 ಮಂದಿ ಶಾಸಕರು ಮತ್ತು ಸಚಿವರು ಸೇರಿದಂತೆ 25 ರಾಜಕೀಯ ನಾಯಕರು, ಬಿಜೆಡಿ (BJD)ಗೆ ಸೇರಿದ ಹೆಚ್ಚಿನವರು ಅರ್ಚನಾ ಜಾಲದಲ್ಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಕೇಸ್ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ
ಆಡಳಿತಾರೂಢ ಬಿಜೆಡಿ ಶಾಸಕರು ಮತ್ತು ಸಚಿವರೊಂದಿಗಿನ ಆಕೆಯ ಸಂಪರ್ಕವನ್ನು ಬಹಿರಂಗಪಡಿಸಿದರೆ, ಒಡಿಶಾದಲ್ಲಿ 22 ವರ್ಷದ ನವೀನ್ ಪಟ್ನಾಯಕ್ (Naveen Patnaik) ಸರ್ಕಾರ ಪತನಕ್ಕೆ ಕಾರಣವಾಗಬಹುದು ಎಂದು ಕಾಂಗ್ರೆಸ್ ಶಾಸಕಿ ಎಸ್ ಎಸ್ ಸಲೂಜಾ ಹೇಳಿದ್ದಾರೆ. ಈ ಮಧ್ಯೆ ಆಡಳಿತಾರೂಢ ಬಿಜೆಡಿ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಈ ವಿಷಯದಲ್ಲಿ ತನ್ನ ನಾಯಕರು ಭಾಗಿಯಾಗಿದ್ದಾರೆ ಎಂಬುದಕ್ಕೆ ಪುರಾವೆಗಳನ್ನು ನೀಡುವಂತೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಕೇಳಿದೆ.