ಒಡಿಸ್ಸಾದ ಹೆಸರಾಂತ ನಟಿ, ರಾಷ್ಟ್ರ ಪ್ರಶಸ್ತಿ ವಿಜೇತೆ ಪ್ರಕೃತಿ ಮಿಶ್ರಾ ಮೇಲೆ ನಡುರಸ್ತೆಯಲ್ಲೇ ಹಲ್ಲೆ ಮಾಡಿದ ಘಟನೆ ನಡೆದಿದೆ. ತನ್ನ ಗಂಡನೊಂದಿಗೆ ಪ್ರಕೃತಿ ಸಲುಗೆಯಿಂದ ಇದ್ದಾರೆ ಮತ್ತು ಒಟ್ಟೊಟ್ಟಿಗೆ ಓಡಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದ್ದ ಆ ವ್ಯಕ್ತಿಯ ಪತ್ನಿಯು ಕಾರಿನಲ್ಲಿ ಪ್ರಕೃತಿ ಜೊತೆ ಹೊರಟಿದ್ದ ಗಂಡನನ್ನು ತಡೆದು ನಟಿಯ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲಿ ನೆರೆದಿದ್ದವರು ಹಲ್ಲೆ ಮಾಡುತ್ತಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ವಿಡಿಯೋ ವೈರಲ್ ಆಗಿದೆ.
ಪ್ರಕೃತಿ ಮಿಶ್ರಾ ಮತ್ತು ಒಡಿಸ್ಸಾದ ನಟ ಬಾಬುಶಾಜ್ ಮೊಹಂತಿ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವುದು ಮೊಹಂತಿ ಪತ್ನಿಯ ಆರೋಪ. ಹಾಗಾಗಿ ಗಂಡನನ್ನು ಯಾವಾಗಲೂ ಹಿಂಬಾಲಿಸಿಕೊಂಡು ಹೋಗುತ್ತಿದ್ದರಂತೆ. ತಾವು ಅಂದುಕೊಂಡಂತೆ ನಟಿಯೊಂದಿಗೆ ಪತಿ ಕಾರಿನಲ್ಲಿ ಹೋಗುತ್ತಿರುವುದು ಗೊತ್ತಾಗಿ, ಕಾರು ಅಡ್ಡಗಟ್ಟಿದ್ದಾರೆ ಮೊಹಂತಿ ಪತ್ನಿ. ಕಾರಿನಲ್ಲಿ ತನ್ನ ಗಂಡನೊಂದಿಗೆ ಕೂತಿದ್ದ ನಟಿ ಪ್ರಕೃತಿಯನ್ನು ತಲೆಗೂದಲು ಕಿತ್ತು ಬರುವಂತೆ ಎಳೆದಾಡಿದ್ದಾರೆ. ಇವರಿಂದ ತಪ್ಪಿಸಿಕೊಂಡು ಹೋಗಲು ನಟಿ ಓಡುತ್ತಾರೆ. ಅವರನ್ನು ಹಿಂಬಾಲಿಸುವ ನಟನ ಪತ್ನಿಯು ಅಲ್ಲಿಯೂ ಅಲ್ಲೇ ಮಾಡಿದ್ದಾರೆ. ಇದನ್ನೂ ಓದಿ:ಸಿನಿಮಾರಂಗಕ್ಕೆ ಗುಡ್ ಬೈ: ರಾಜಕೀಯ ಅಖಾಡಕ್ಕೆ ರಶ್ಮಿಕಾ ಮಂದಣ್ಣ
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಘಟನೆಯನ್ನು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ನಟಿ ಪ್ರಕೃತಿ, ಈ ಘಟನೆಯ ಕುರಿತು ಹಲವರು ನನ್ನ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ಆದರೂ, ನನ್ನ ಮೇಲೆ ಹಲ್ಲೆಯಾಗಿದೆ. ನಾವು ಎಂತಹ ಸಮಾಜದಲ್ಲಿ ಇದ್ದೇವೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ಘಟನೆಯನ್ನು ನಾನು ಸಮರ್ಥವಾಗಿ ಎದುರಿಸುತ್ತೇನೆ. ಕಾನೂನು ಮೂಲಕವೇ ಉತ್ತರಿಸುತ್ತೇನೆ. ಮಾಡಲು ನನಗೆ ಸಾಕಷ್ಟು ಕೆಲಸಗಳಿಗೆ. ಅವುಗಳಲ್ಲಿ ತೊಡಗಿಕೊಳ್ಳುವೆ ಎಂದು ಬರೆದುಕೊಂಡಿದ್ದಾರೆ.
ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರಕೃತಿ ಮತ್ತು ನಟ ಬಾಬುಶಾನ್ ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರಂತೆ. ಹಾಗಾಗಿ ಸ್ನೇಹ ಬೆಳೆದಿದೆ ಎನ್ನಲಾಗುತ್ತಿದೆ. ಅಂದಹಾಗೆ ಪ್ರಕೃತಿ ಒಡಿಸ್ಸಾ ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಲೋ ಅರ್ಸಿ ಸಿನಿಮಾದ ನಟನೆಗಾಗಿ ಅವರಿಗೆ ಸ್ಪೆಷಲ್ ಜ್ಯೂರಿ ರಾಷ್ಟ್ರಪ್ರಶಸ್ತಿ ಕೂಡ ಬಂದಿದೆ.