ಕೋಲಾರ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ಪ್ರಿಯಕರನಿಂದಲೇ ಪತಿಯನ್ನ ಕೊಲೆ ಮಾಡಿಸಿರುವ ಘಟನೆ ನಡೆದಿದ್ದು, ಪತ್ನಿ ಹಾಗೂ ಪ್ರಿಯಕರನನ್ನ (Lover) ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನಂದಗುಡಿ ಪೊಲೀಸರು (Nandagudi Police) ಬಂಧಿಸಿದ್ದಾರೆ.
ಕೋಲಾರ (Kolar) ಜಿಲ್ಲೆಯ ಮಾಲೂರು ತಾಲ್ಲೂಕು ಚಂಬೆ ಗ್ರಾಮದ ಆನಂದ್ ಕೊಲೆಯಾದ ವ್ಯಕ್ತಿ. ಆನಂದ್ ಕಳೆದ ನವೆಂಬರ್ 21 ರಂದು ಕಾಣೆಯಾಗಿದ್ದರು. ಈ ಸಂಬಂಧ ಕೋಲಾರದ ಮಾಸ್ತಿ ಪೊಲೀಸ್ ಠಾಣೆಯಲ್ಲಿ (Police Station) ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ಇದನ್ನೂ ಓದಿ: ಗ್ಯಾಂಗ್ ರೇಪ್ – ಮಹಿಳೆಯ ಖಾಸಗಿ ಭಾಗಕ್ಕೆ ಸಿಗರೇಟ್‌ನಿಂದ ಸುಟ್ಟು ವಿಕೃತಿ
ನಂತರ ಆನಂದ್‌ನನ್ನು ಕೊಲೆ ಮಾಡಿ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಹೊಸಕೋಟೆ ತಾಲ್ಲೂಕು ಬಿ.ಮಾಕನಹಳ್ಳಿ ವ್ಯಾಪ್ತಿಯಲ್ಲಿ ಬಿಸಾಡಿರುವುದು ಗೊತ್ತಾಗಿದೆ. ಈ ಸಂಬಂಧ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದ ನಂದಗುಡಿ ಪೊಲೀಸರು ಕೊಲೆ ಆರೋಪಿಗಳನ್ನ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆ ಆರೋಪಿ ಪೃಥ್ವಿರಾಜ್, ಚಲಪತಿ ಹಾಗೂ ಪತ್ನಿ ಚೈತ್ರಾಳನ್ನ ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ನವೀನ್‌ಗಾಗಿ ಶೋಧಕಾರ್ಯ ಮುಂದುವರಿದಿದೆ.
ಅಕ್ರಮ ಸಂಬಂಧ: ಪತ್ನಿ ಚೈತ್ರಾ ಹಾಗೂ ಚಲಪತಿ ನಡುವೆ ಅಕ್ರಮ ಸಂಬಂಧವಿತ್ತು. ಈ ವಿಚಾರ ಆನಂದನಿಗೆ ಗೊತ್ತಾಗಿದ್ದರಿಂದ ಪ್ರಿಯಕರನೊಂದಿಗೆ ಸೇರಿ ಪತಿಯನ್ನ ಮುಗಿಸಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಸತತ 1 ವರ್ಷ ಡ್ರಮ್‌ನಲ್ಲಿತ್ತು ಮಹಿಳೆ ದೇಹದ ಪೀಸ್‌ಗಳು – ಮನೆ ಬಾಡಿಗೆಗೆ ಕೊಟ್ಟಿದ್ದ ಮಾಲೀಕ ಶಾಕ್!
ಘಟನೆ ಸಂಬಂಧ ಮಾಸ್ತಿ ಹಾಗೂ ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂದಗುಡಿ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.