ವಾಷಿಂಗ್ಟನ್: ಯುಎಸ್ (US) ಮೂಲದ ನಿರಾಶ್ರಿತ ವ್ಯಕ್ತಿಗೆ ಆಶ್ರಯ (Shelter) ನೀಡಿದ ಭಾರತದ ವಿದ್ಯಾರ್ಥಿಯನ್ನು (Indian Student) ಕೊಲೆ ಮಾಡಿರುವ ಘಟನೆ ಯುಎಸ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಿವೇಕ್ ಸೈನಿ (25) ಮೃತ ಭಾರತೀಯ ವಿದ್ಯಾರ್ಥಿ. ತಾನು ಮನೆಗೆ ಹೋಗುವ ಹಿನ್ನೆಲೆ ಬೇರೆ ಕಡೆ ಹೋಗು ಎಂದಿದ್ದಕ್ಕೆ ನಿರಾಶ್ರಿತ ವ್ಯಕ್ತಿ ಅಮೆರಿಕದ ಜಾರ್ಜಿಯಾದಲ್ಲಿನ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಸುತ್ತಿಗೆಯಿಂದ ಹೊಡೆದು ದಾರುಣವಾಗಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ವೇಣೂರಿನಲ್ಲಿ ಪಟಾಕಿ ಗೋಡೌನ್ ಸ್ಫೋಟ – ಮೂವರು ಕಾರ್ಮಿಕರ ದಾರುಣ ಸಾವು
ನಡೆದಿದ್ದೇನು?: ವಿವೇಕ್ ಯುಎಸ್‌ನಲ್ಲಿ ವಿದ್ಯಾರ್ಥಿಯಾಗಿದ್ದು, ಜಾರ್ಜಿಯಾದ ಕನ್ವೀನಿಯನ್ಸ್ ಸ್ಟೋರ್‌ನಲ್ಲಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಈ ವೇಳೆ ಸೈನಿ ಸೇರಿದಂತೆ ಫುಡ್ ಮಾರ್ಟ್ನಲ್ಲಿನ ಉದ್ಯೋಗಿಗಳು ಜೂಲಿಯನ್ ಫಾಕ್ನರ್ ಎಂಬ ನಿರಾಶ್ರಿತ ವ್ಯಕ್ತಿಗೆ ಆಹಾರ ಮತ್ತು ಅಶ್ರಯ ನೀಡುತ್ತಿದ್ದರು. ಇದನ್ನೂ ಓದಿ: ಸೆಕ್ಸ್‌ಗೆ ಒತ್ತಾಯಿಸಿದ ಪತಿಯ ಮರ್ಮಾಂಗವನ್ನೇ ಕಚ್ಚಿ ಗಾಯಗೊಳಿಸಿದಳು!
ಆರೋಪಿ ಮೊದಲು ಚಿಪ್ಸ್ ಮತ್ತು ಕೋಕ್‌ನ್ನು ಕೇಳಿದ್ದು, ಅದನ್ನು ನೀಡಿದ್ದಾರೆ. ನಂತರ ಹೊದಿಕೆ ಕೇಳಿದ್ದಾನೆ. ಅವರ ಬಳಿ ಹೊದಿಕೆ ಇಲ್ಲ ಎಂದು ಹೇಳಿ ಜಾಕೆಟ್ ನೀಡಿದ್ದರು. ಹಾಗೆಯೇ ಸಿಗರೇಟ್, ನೀರು ಮತ್ತು ಎಲ್ಲವನ್ನು ಕೇಳುತ್ತಾ ಒಳಗೆ, ಹೊರಗೆ ನಡೆಯುತ್ತಿದ್ದನು. ನಿತ್ಯವೂ ಅಲ್ಲಿಯೇ ಕುಳಿತಿರುತ್ತಿದ್ದನು. ಚಳಿ ಇದ್ದ ಪರಿಣಾಮ ಆರೋಪಿಯನ್ನು ಹೊರಗೆ ಹೋಗುವಂತೆ ಹೇಳಿರಲಿಲ್ಲ ಎನ್ನಲಾಗಿದೆ. ಇದನ್ನೂ ಓದಿ: ʻJEE ಮಾಡೋಕಾಗಲ್ಲ, ನಾನು ಕೆಟ್ಟ ಮಗಳು, ಇದೇ ನನ್ನ ಕೊನೇ ಆಯ್ಕೆʼ – ಡೆತ್‌ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ!
ರಾತ್ರಿ ಸೈನಿ ಮನೆಗೆ ಹೋಗುವ ಹಿನ್ನೆಲೆಯಲ್ಲಿ ಆರೋಪಿಗೆ ಅಲ್ಲಿಂದ ಹೋಗುವಂತೆ ಹೇಳಿದ್ದಾನೆ. ಅವನ್ನು ಹೋಗದೆ ಇದಲ್ಲಿ ಪೊಲೀಸರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದಕ್ಕೆ ಕೋಪಗೊಂಡ ಆರೋಪಿ, ಸೈನಿ ಅವರಿಗೆ ಸುತ್ತಿಗೆಯಿಂದ ಸುಮಾರು 5ಂ ಬಾರಿ ತಲೆ ಹಾಗೂ ಮುಖದ ಮೇಲೆ ಹೊಡೆದು ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಸಿಲಿಂಡರ್ ಸ್ಫೋಟ – ಇಬ್ಬರ ದಾರುಣ ಸಾವು, ಮೂವರ ಸ್ಥಿತಿ ಗಂಭೀರ
ಸೈನಿಗೆ ತೀವ್ರ ಗಾಯಗಳಾದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಂತರ ಘಟನೆ ಕುರಿತು ಪೊಲೀಸರಿಗೆ ರಾತ್ರಿ 12:30 ಡೆಕಾಲ್ಬ್ ಕೌಂಟಿ ಪೊಲೀಸರಿಗೆ ಮಾಹಿತಿ ತಿಳಿದಿದೆ. ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪಕ್ಕದ ಸ್ಟೋರ್ ಗುಮಾಸ್ತನಿಂದ ಘಟನೆ ಬಗ್ಗೆ ತಿಳಿದು ಅಲ್ಲೇ ಸುತ್ತಿಗೆ ಹಿಡಿದು ನಿಂತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಸುತ್ತಿಗೆ ಮತ್ತು ಎರಡು ಚಾಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಟೆಕ್ಕಿ ಯುವತಿಯನ್ನ ಗುಂಡಿಕ್ಕಿ ಹತ್ಯೆಗೈದ ಪ್ರಿಯತಮ – ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?