ಲಕ್ನೋ: ಸಾರ್ವಜನಿಕರ ಕೈಯಲ್ಲಿ ಹೊಡೆತ ತಪ್ಪಿಸಿಕೊಳ್ಳಲು ಪ್ರೇಮಿಗಳಿಬ್ಬರು ಹೆದ್ದಾರಿಯಲ್ಲಿಯೇ ತಬ್ಬಿಕೊಂಡಿರುವ ಘಟನೆ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ.
ಆಗ್ರಾ-ಅಲೀಗಡ ಹೆದ್ದಾರಿಯ ಖಂಡೌಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಆದ್ದರಿಂದ ಅವರಿಬ್ಬರು ಹೆದ್ದಾರಿಯಲ್ಲಿ ಸಿಕ್ಕಿದ ತಕ್ಷಣ ಆಕೆಯ ಪತಿ ಹಾಗೂ ಸಂಬಂಧಿಕರು ಇಬ್ಬರು ಹಿಡಿದು ಥಳಿಸಿದ್ದಾರೆ.
Advertisement
ಮೇ 15 ರಂದು ವಿವಾಹಿತೆ ಸಾಯಾರ ಬೇಗಂ ಪಕ್ಕದ ಮನೆಯ ಯುವಕ ಮೌಸಮ್ ಜೊತೆ ಓಡಿ ಹೋಗಿದ್ದಾಳೆ. ಮೌಸಮ್ ಜೊತೆ ಓಡಿ ಹೋಗುವಾಗ 27 ಸಾವಿರ ರೂಪಾಯಿ ನಗದು ಹಣ, ಎರಡು ಬಂಗಾರದ ಉಂಗುರಗಳನ್ನು ತೆಗೆದು ಕೊಂಡು ಹೋಗಿದ್ದಳು. ನಂತರ ಪತಿ ಸಂಬಂಧಿಕರು, ಸ್ನೇಹಿತರನ್ನು ವಿಚಾರಿಸಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪತಿ ಪೊಲಿಸರಿಗೆ ದೂರು ನೀಡಿದ್ದರು. ಮೌಸಮ್ ಖಂಡೌಲಿಯಲ್ಲಿ ಜನರೇಟರ್ ಕೆಲಸ ಮಾಡಿಕೊಂಡಿದ್ದು, ಸಾಯಾರ ಮನೆಯ ಪಕ್ಕದಲ್ಲಿಯೇ ವಾಸಿಸುತ್ತಿದ್ದನು.
Advertisement
ಶುಕ್ರವಾರ ಬೆಳಗ್ಗೆ ಪತಿಗೆ ಪತ್ನಿ ತನ್ನ ಪ್ರಿಯಕರನ ಜೊತೆ ಆಗ್ರಾಗೆ ಬರುತ್ತಿದ್ದಾಳೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಲಿಗೆ ಬಂದ ಇಬ್ಬರನ್ನು ಪತಿ ಹಿಡಿದಿದ್ದಾನೆ. ನಂತರ ಹೆದ್ದಾರಿಯಲ್ಲಿಯೇ ಜಗಳ ಶುರುವಾಗಿದೆ. ಕೋಪಗೊಂಡ ಪತಿ ಮತ್ತು ಆತನ ಸಂಬಂಧಿಕರು ಇಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಅವರಿಂದ ಹೊಡೆತ ತಪ್ಪಿಸಿಕೊಳ್ಳಲು ಇಬ್ಬರು ಗಟ್ಟಿಯಾಗಿ ತಬ್ಬಿಕೊಂಡಿದ್ದಾರೆ. ಎಷ್ಟೆ ಬಿಡಿಸಲು ಪ್ರಯತ್ನ ಮಾಡಿದರೂ ಅವರಿಬ್ಬರು ಅಪ್ಪಿಕೊಂಡೆ ಹೊಡೆತ ತಿಂದಿದ್ದಾರೆ.
Advertisement
ಇಬ್ಬರಿಗೂ ಮಹಿಳೆಯ ಕುಟುಂಬಸ್ಥರು ಥಳಿಸುತ್ತಿದ್ರೂ, ಸಾರ್ವಜನಿಕರು ಸುಮ್ಮನೆ ನಿಂತು ನೋಡುತ್ತಿದ್ದರೆ ಹೊರತೂ, ಯಾರೊಬ್ಬರು ಅವರನ್ನು ಕಾಪಾಡಲು ಮುಂದೆ ಬರಲಿಲ್ಲ. ಬಳಿಕ ಅಲ್ಲಿದ್ದವರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
Advertisement
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ಹೊಡೆತದಿಂದ ರಕ್ಷಿಸಿದ್ದಾರೆ. ಬಳಿಕ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆಯನ್ನು ನಡೆಸಿದ್ದಾರೆ.