ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲ್ಲಿನ ಕೃಷ್ಣಾ ಬಡಾವಣೆಯಲ್ಲಿ ಭಾನುವಾರ ರಾತ್ರಿ ಚಿರತೆಯ ಮರಿಯನ್ನು ಹೋಲುವಂತ ಪ್ರಾಣಿಯೊಂದು ಕಾಣಿಸಿಕೊಂಡಿದೆ.
Advertisement
ಸ್ಥಳೀಯರು ಚಿರತೆ ಮರಿ ಎಂದು ಆತಂಕ ವ್ಯಕ್ತಪಡಿಸುತ್ತಿದ್ದಂತೆ. ಸ್ಥಳಕ್ಕೆ ಅಥಣಿ ವಲಯ ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದಾಗ ಇದೊಂದು ಪುನುಗು ಬೆಕ್ಕು(ಸಿವೆಟ್ ಕ್ಯಾಟ್) ತಿಳಿಸಿದಾಗ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಗಣಿ ಸ್ಫೋಟ- ಹುತಾತ್ಮರಾದ ಇಬ್ಬರು ಯೋಧರು
Advertisement
Advertisement
ನಮ್ಮ ದೇಶದಲ್ಲಿ ಬಹಳ ವಿರಳವಾಗಿ ಈ ಪುನುಗು ಬೆಕ್ಕು ಕಾಣಿಸುತ್ತದೆ. ಭಾನುವಾರ ರಾತ್ರಿ ರೈತ ಮಹಾದೇವ ಹೊನ್ನೊಳ್ಳಿ ಅವರ ಹೊಲದಲ್ಲಿ ಹಿಡಿದು ಕೋಳಿಯ ಬೋನಿನಲ್ಲಿ ಇರಿಸಲಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಈ ಪ್ರಾಣಿಯನ್ನು ವಶಪಡಿಸಿಕೊಂಡು ಮತ್ತೆ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಒಟ್ಟಾರೆ ಅಪರೂಪವಾಗಿರುವ ಈ ಬೆಕ್ಕನ್ನು ನೋಡಲು ಅಪಾರ ಜನ ಸೇರಿದ್ದು ಎಲ್ಲರನ್ನೂ ಒಂದು ಕ್ಷಣ ಚಕಿತಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಮದುವೆ ನಂತ್ರ ಜೀನ್ಸ್ ಧರಿಸಲು ಬಿಟ್ಟಿಲ್ಲ ಅಂತ ಗಂಡನ್ನೇ ಸಾಯಿಸಿದ್ಲು