ರಾಂಚಿ: ಮದುವೆಯಾದ ಬಳಿಕ ಜೀನ್ಸ್ ಧರಿಸಲು ಬಿಡದೇ ಇರುವ ಕಾರಣಕ್ಕೆ ತಾಳಿ ಕಟ್ಟಿದ ಪತಿಯನ್ನೇ ಚಾಕುವಿಂದ ಇರಿದು ಪತ್ನಿ ಹತ್ಯೆಗೈದಿರುವ ಘಟನೆ ಜಾರ್ಖಂಡ್‍ನ ಜಮ್ತಾರಾದಲ್ಲಿ ನಡೆದಿದೆ.
Advertisement
ಜಮ್ತಾರಾ ಪೊಲೀಸ್ ಠಾಣಾ ವ್ಯಾಪ್ತಿಯ ಜೋರ್ಭಿತ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಮಹಿಳೆಯನ್ನು ಪುಷ್ಪಾ ಹೆಂಬ್ರೋಮ್ ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಪುಷ್ಪಾ ಹೆಂಬ್ರೋಮ್ ಜೀನ್ಸ್ ಧರಿಸಿ ಗೋಪಾಲಪುರ ಗ್ರಾಮದಲ್ಲಿ ಜಾತ್ರೆಯನ್ನು ನೋಡಲು ಹೋಗಿದ್ದಳು. ನಂತರ ಮನೆಗೆ ಹಿಂದಿರುಗಿದ ಪುಷ್ಪಾಳನ್ನು ಜೀನ್ಸ್ ಧರಿಸಿದ್ದ ಬಗ್ಗೆ ಪತಿ ಪ್ರಶ್ನಿದ್ದಾರೆ ಹಾಗೂ ಇಬ್ಬರ ನಡುವೆ ಇದೇ ವಿಚಾರವಾಗಿ ವಾಗ್ವಾದ ನಡೆದಿದೆ.
Advertisement
Advertisement
ನಂತರ ಜಗಳ ವಿಕೋಪಕ್ಕೆ ತಿರುಗಿ ಪುಷ್ಪಾ ತನ್ನ ಗಂಡನಿಗೆ ಚಾಕುವಿನಿಂದ ಇರಿದಿದ್ದಾಳೆ. ಇದರಿಂದ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಕುಟುಂಬಸ್ಥರು ಧನ್‍ಬಾದ್‍ನಲ್ಲಿರು ಶಾಹಿದ್ ನಿರ್ಮಲ್ ಮಹತೋ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ತಮಿಳುನಾಡು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಪ್ರಾಂಶುಪಾಲರು, ಶಿಕ್ಷಕರು ಸೇರಿ ಐವರು ಅರೆಸ್ಟ್
Advertisement
ಈ ಬಗ್ಗೆ ಮಾಧ್ಯಮದವರೊಂದೊಗೆ ಮಾತನಾಡಿದ ಮೃತರ ತಂದೆ ಕರ್ಣೇಶ್ವರ ತುಡು ಅವರು, ಜೀನ್ಸ್ ಪ್ಯಾಂಟ್ ಹಾಕಿಕೊಂಡಿದ್ದ ವಿಚಾರವಾಗಿ ಮಗ ಮತ್ತು ಸೊಸೆ ನಡುವೆ ಜಗಳ ನಡೆದಿತ್ತು. ಜಗಳದ ವೇಳೆ ಪತ್ನಿಯೇ ಪತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾಳೆ. ಸದ್ಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ ಮತ್ತು ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ – ವ್ಯಕ್ತಿ ವಿರುದ್ಧ ದೂರು