– ನಿತ್ರಾಣಗೊಂಡಿದ್ದ ಮಗುವನ್ನ ಆಸ್ಪತ್ರೆಗೆ ಹೊತ್ತು ತಂದಿದ್ದ ತಂದೆ; ಮಗು ಶವ ಹಿಡಿದು ಗೋಳಾಡಿದ ತಾಯಿ
– ಸಾವಿನ ಸಂಖ್ಯೆ 40ಕ್ಕೆ ಏರಿಕೆ
ಚೆನ್ನೈ: ಕಾಲ್ತುಳಿತದಲ್ಲಿ (Vijay Rally Stampede) ನಿತ್ರಾಣಗೊಂಡಿದ್ದ ಮಗುವನ್ನು ತಂದೆಯೊಬ್ಬರು ಬಿಗಿದಪ್ಪಿಕೊಂಡು ಆಸ್ಪತ್ರೆಗೆ ಓಡೋಡಿ ಬಂದಿದ್ದಾರೆ. ತನ್ನ ಉಸಿರು ಕೊಟ್ಟಾದ್ರೂ ಮಗುವನ್ನು ಉಳಿಸಿಕೊಳ್ಳಬೇಕೆಂಬ ಹಂಬಲದಲ್ಲಿದ್ದ ಮಗುವಿನ ಉಸಿರು ನಿಂತುಹೋಗಿದ್ದನ್ನು ಕಂಡು ಗೋಳಾಡಿದ್ದಾರೆ. ಇತ್ತ ಮಗುವಿನ ಸಾವು ಅರಗಿಸಿಕೊಳ್ಳಲಾದ ತಾಯಿ ಮಗುವಿನ ಮೃತದೇಹ ಅಪ್ಪಿ ಗೋಳಾಡಿದ್ದಾರೆ… ಈ ದೃಶ್ಯ ಕಂಡುಬಂದದ್ದು ತಮಿಳುನಾಡಿನ (TamilNadu) ಕರೂರಿನಲ್ಲಿ.
ಹೌದು. ತಮಿಳುನಾಡಿನ ಕರೂರಿನಲ್ಲಿ (Karur) ನಡೆದ ಕಾಲ್ತುಳಿತ ಘೋರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ. ಆದ್ರೆ ಈ ದುರಂತದಲ್ಲಿ 2 ವರ್ಷದ ಪುಟ್ಟ ಕಂದಮ್ಮ ಬಲಿಯಾಗಿರುವುದು ಕಟುಕರ ಕರುಳು ಸಹ ಹಿಂಡುವಂತಿತ್ತು. ಇದನ್ನೂ ಓದಿ: ಕರೂರು ಕಾಲ್ತುಳಿತ ದುರಂತ – ಮೃತರ ಕುಟುಂಬಕ್ಕೆ ತಲಾ 20 ಲಕ್ಷ ಪರಿಹಾರ ಘೋಷಿಸಿದ ವಿಜಯ್
ದುರಂತರದಲ್ಲಿ ಮೃತಪಟ್ಟ 40 ಜನರಲ್ಲಿ 10 ಮಂದಿ ಅಪ್ರಾಪ್ತರಿದ್ದಾರೆ. ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇನ್ನೂ ಕೆಲವರು 20-30 ವಯಸ್ಸಿನವರಿದ್ದಾರೆ ಎಂದು ತಿಳಿದುಬಂದಿದೆ. ಕಾಲ್ತುಳಿದ ದೃಶ್ಯಗಳು ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಒಂದೆಡೆ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ. ಮತ್ತೊಂದೆಡೆ ಮೃತದೇಹ ಪಡೆಯಲು ಶವಾಗಾರದ ಬಳಿ ಸಾಲುಗಟ್ಟಿ ನಿಂತಿದ್ದ ದೃಶ್ಯಗಳೂ ಕಂಡುಬಂದಿದೆ. ಇದನ್ನೂ ಓದಿ: Explainer | ಕುಂಭಮೇಳದಿಂದ ತಮಿಳುನಾಡು ದುರಂತದವರೆಗೆ – ದೇಶದ ಪ್ರಮುಖ ಕಾಲ್ತುಳಿತ ದುರಂತಗಳ ಪಟ್ಟಿ ಇಲ್ಲಿದೆ
ಮೃತಪಟ್ಟವರು ಯಾರು? ಯಾವ ವಯಸ್ಸಿನವರು?
ಹೇಮಲತಾ (8), ಸೈಲೆತ್ಸನಾ (8), ಸಾಯಿ ಜೀವ (4), ಧುರು ವಿಷ್ಣು (2), ಸನೂಜ್ (13), ಧರಣಿಕಾ (14), ಪಝನಿಯಮ್ಮಾಳ್ (11), ಕೋಕಿಲಾ (14), ಕೃತಿಕ್ (7) ಮತ್ತು ಕಿಶೋರ್ (17), ತಾಮರೈಕಣ್ಣನ್ (25), ಸುಕನ್ಯಾ (33), ಆಕಾಶ್ (23), ಧನುಷ್‌ಕುಮಾರ್ (24), ವಡಿವಳಗನ್ (54), ರೇವತಿ (52), ಚಂದ್ರ (40), ರಮೇಶ್ (32), ರವಿಕೃಷ್ಣನ್ (32), ಪ್ರಿಯದರ್ಶಿನಿ (35), ಮಹೇಶ್ವರಿ (45), ಮಾಲತಿ (36), ಸುಮತಿ (53), ಸಮತಿಕುಮಾರ್ (53), ಸಮತಿಕುಮಾರ್ (53) (26), ಶಂಕರ ಗಣೇಶ್ (45), ವಿಜಯರಾಣಿ (42), ಗೋಕುಲಪ್ರಿಯ (28), ಫಾತಿಮಾ ಬಾನು (29), ಜಯ (55), ಅರುಕ್ಕಣಿ (60) ಮತ್ತು ಜಯಂತಿ (43).
ಕಾಲ್ತುಳಿತ ಸಂಭವಿಸಿದ್ದು ಏಕೆ?
ಕಾಲಿವುಡ್ ಸೂಪರ್ ಸ್ಟಾರ್ ಕಮ್ ರಾಜಕಾರಣಿ ದಳಪತಿ ವಿಜಯ್ ತಮಿಳುನಾಡಿನ ರಾಜಕೀಯದಲ್ಲಿ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದಾರೆ. ಅದಕ್ಕಾಗಿ 2026ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರೂರಿನಲ್ಲಿ ತಮ್ಮ ತಮಿಳಿಗ ವೆಟ್ರಿ ಕಳಗಂ ಪಕ್ಷದ ರ‍್ಯಾಲಿ ಹಮ್ಮಿಕೊಂಡಿದ್ದರು. ವಿಜಯ್ ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿನಮಾನಿಗಳು, ಬೆಂಬಲಿಗರು ಸೇರಿದ್ದರು. ತಮ್ಮ ನಾಯಕನಿಗಾಗಿ ಸುಮಾರು 7 ಗಂಟೆಗಳಿಗೂ ಹೆಚ್ಚು ಕಾಲ ಕಾದು ಕುಳಿತಿದ್ದರು. ಆದ್ರೆ, ದಳಪತಿ ವಿಜಯ್ ಕಾರ್ಯಕ್ರಮದ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರು.
ಮಧ್ಯಾಹ್ನದ ಸುಡು ಬಿಸಿಲಿನಲ್ಲಿ ವಿಜಯ್ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು ಸುಸ್ತಿನಿಂದ ಬಳಲುತ್ತಿದ್ದರು. ಇನ್ನು ಇದೇ ವೇಳೆ 9 ವರ್ಷದ ಬಾಲಕಿ ಕಳೆದು ಹೋಗಿರ್ತಾಳೆ. ಆಗ ವಿಜಯ್ ಮೈಕ್ ಮೂಲಕ ಪೊಲೀಸರಿಗೆ ಮನವಿ ಮಾಡ್ತಾರೆ. ಮೈಕ್‌ನಲ್ಲಿ ಅನೌನ್ಸ್ ಮಾಡುತ್ತಲೇ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಉಸಿರಾಟದ ತೊಂದ್ರೆ ಅನುಭವಿಸಿದ ಜನರು ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಂದ್ಹಾಗೆ ರ‍್ಯಾಲಿ ತಡವಾಗಿ ಸಂಜೆ ಆರಂಭವಾಗಿತ್ತು. ಹೀಗಾಗಿ ವಿಜಯ್ ನೋಡಲು ಫ್ಯಾನ್ಸ್ ಮುಗಿ ಬಿದ್ದಿದ್ರು. ಅಲ್ದೆ ರ‍್ಯಾಲಿ ವೇಳೆ ಕರೆಂಟ್ ತೆಗೆದಿದ್ದರಿಂದ ದುರಂತ ಸಂಭವಿಸಿದೆ. ಇದನ್ನೂ ಓದಿ: Vijay Rally Stampede | 10 ವರ್ಷದ ಬಾಲಕಿ ಸಾವನ್ನ ಕಣ್ಣಾರೆ ಕಂಡೆ – ಕಾಲ್ತುಳಿತ ದುರಂತದ ಭೀಕರತೆ ಬಿಚ್ಚಿಟ್ಟ ಬೆಂಗ್ಳೂರಿನ ಪ್ರತ್ಯಕ್ಷದರ್ಶಿ
ಭಾಷಣ ಅರ್ಧಕ್ಕೆ ಮೊಟಕುಗೊಳಿಸಿದ ವಿಜಯ್
ಒಂದು ಹಂತದಲ್ಲಿ ಪರಿಸ್ಥಿತಿ ಕೈಮೀರುತ್ತಿದ್ದಂತೆ, ನಟ ವಿಜಯ್ ತಮ್ಮ ಭಾಷಣವನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ನೂಕಾಟ, ತಳ್ಳಾಟ ಹೆಚ್ಚಾಗಿ ಉಸಿರುಗಟ್ಟಲು ಶುರುವಾಗಿದ್ದಂತೆ ನೀರಿನ ಬಾಟಲಿಗಳನ್ನು ಎಸೆದಿದ್ದಾರೆ. ಕೂಡಲೇ ಸ್ಥಳದಿಂದ ಕಾಲ್ತಿತ್ತರು. ಮೊದಲೇ ತಡವಾಗಿ ಆಗಮಿಸಿದ್ದ ವಿಜಯ್, ಸ್ಥಳಕ್ಕೆ ಬರುತ್ತಿದ್ದಂತೆ ತಳ್ಳಾಟ, ನೂಕಾಟ ಹೆಚ್ಚಾಗಿದೆ. ದುರಂತ ಬಳಿಕ ಬ್ಲಾಕ್ ಕಾರ್‌ನಲ್ಲಿ ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ವಿಜಯ್ ಅಲ್ಲಿಂದ ಚೆನ್ನೈಗೆ ಎಸ್ಕೇಪ್ ಆಗಿದ್ರು.
ಘಟನೆ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಟಿವಿಕೆ ಕರೂರು ಜಿಲ್ಲಾ ಕಾರ್ಯದರ್ಶಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಈ ನಟುವೆ ನಟ ವಿಜಯ್ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: Vijay Rally Stampede | ಮೃತಪಟ್ಟ 39 ಜನರಲ್ಲಿ 35 ಮಂದಿ ಮೃತದೇಹಗಳ ಗುರುತು ಪತ್ತೆ