DistrictsKarnatakaLatestMain PostMandya

ಮಂಡ್ಯ ಹನಿಟ್ರ್ಯಾಪ್ ಕೇಸ್‍ಗೆ ಟ್ವಿಸ್ಟ್ – ದೂರು ಕೊಟ್ಟಿರೋದೇ ಬೇರೆ, ರೂಮ್ ಒಳಗಡೆ ನಡೆದಿದ್ದೇ ಬೇರೆ

ಬೆಂಗಳೂರು: ಕೆಲವು ದಿನಗಳ ಹಿಂದೆ ಹನಿಟ್ರ್ಯಾಪ್(HoneyTrap) ಸುಳಿಗೆ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು 50 ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡಿದ್ದರು. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮಂಡ್ಯದ ಚಿನ್ನದ ವ್ಯಾಪಾರಿ ಹಾಗೂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ(Jagananath Shetty) ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆಗೆ ಕಿಡ್ನಾಪ್(Kidnap) ಮತ್ತು ಹನಿಟ್ರ್ಯಾಪ್ ಕುರಿತಂತೆ ದೂರು ನೀಡಿದ್ದ. ಈ ಪ್ರಕರಣ ಸಂಬಂಧ ನಾಲ್ವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದರು. ತನಿಖೆ ನಡೆಯುತ್ತಿರುವಾಗಲೇ ಆಡಿಯೋ ಹಾಗೂ ವೀಡಿಯೋ ದೊರೆತಿದ್ದು, ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದನ್ನೂ ಓದಿ: ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗದಿದ್ರೆ ಆ್ಯಸಿಡ್ ಹಾಕ್ತಿನಿ- ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

ವಿದ್ಯಾರ್ಥಿಯೊಬ್ಬಳನ್ನು ಲಾಡ್ಜ್‌ಗೆ ಕರೆಸಿಕೊಳ್ಳಲು ತಾನು ಲೆಕ್ಚರ್ ಎಂದು ಚಿನ್ನದ ವ್ಯಾಪಾರಿ ಜಗದೀಶ್ ಶೆಟ್ಟಿ ಪುಸಲಾಯಿಸಿದ್ದನು. ಮೈಸೂರಿನ ಲಾಡ್ಜ್‌ಗೆ ವಿದ್ಯಾರ್ಥಿನಿ ಕರೆಸಿಕೊಂಡ ವೇಳೆ ಅಲ್ಲಿಗೆ ಎಂಟ್ರಿಕೊಟ್ಟ ಆರೋಪಿ ಸಲ್ಮಾಭಾನು ಆಂಡ್ ಟೀಂ ಪಂಚೆ, ಬನಿಯನ್‌ನಲ್ಲಿದ್ದ ಜಗನಾಥ್ ಶೆಟ್ಟಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಜಗದೀಶ್ ಶೆಟ್ಟಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಎಳೆದಾಡಿ ಹೆದರಿಸಿದ್ದಾರೆ. ಈ ವೇಳೆ ತನ್ನದು ತಪ್ಪಾಯ್ತು ಎಂದು ಬಿಟ್ಟುಬಿಡಿ ಎಂದು ಜಗನ್ನಾಥ್ ಶೆಟ್ಟಿ ಕಾಲಿಗೆ ಬಿದ್ದಿದ್ದಾನೆ. ಇದೀಗ ಈ ವೀಡಿಯೋ ವೈರಲ್ ಆಗುತ್ತಿದೆ.

ಫೆಬ್ರವರಿ 26ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದ್ದು, ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದೆ. ಈ ವೇಳೆ ಮೈಸೂರಿಗೆ ಡ್ರಾಪ್ ಕೊಡುವುದಾಗಿ ತಿಳಿಸಿ ನಾಲ್ವರು ಕಾರಿನಲ್ಲಿ ಅವರನ್ನು ಕರೆದೊಯ್ದು ನಂತರ ಚಿನ್ನದ ಪರೀಕ್ಷೆಗೆಂದು ಅವರನ್ನು ಅಪಹರಿಸಿ ಲಾಡ್ಜ್ ರೂಮ್‍ಗೆ ಕರೆದೊಯ್ದಿದ್ದಾರೆ. ರೂಮ್‍ನಲ್ಲಿ ಯುವತಿ ಜೊತೆ ವೀಡಿಯೋ ಚಿತ್ರೀಕರಿಸಿಕೊಂಡು ಬಳಿಕ 4 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು ಎಂದು ಜಗನ್ನಾಥ್ ಶೆಟ್ಟಿ ಆರೋಪಿಸಿದ್ದನು. ಇದನ್ನೂ ಓದಿ: ಹನಿಟ್ರ್ಯಾಪ್ ಸುಳಿಗೆ ಸಿಲುಕಿ 50 ಲಕ್ಷ ರೂ. ಕಳೆದುಕೊಂಡ ಚಿನ್ನದ ವ್ಯಾಪಾರಿ

ಕೊನೆಗೆ 50 ಲಕ್ಷ ಕೊಟ್ಟು ಅಲ್ಲಿಂದ ತೆರಳಿದೆ. ಆದರೆ ಮತ್ತೆ ಹಣಕ್ಕಾಗಿ ಗ್ಯಾಂಗ್ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ ಎಂದು ಜಗನ್ನಾಥ್ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕೆಯನ್ನು ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದರು.

Live Tv

Leave a Reply

Your email address will not be published.

Back to top button