LatestLeading NewsMain PostNational

ಇಸ್ಲಾಂಗೆ ಮತಾಂತರವಾಗಿ ನನ್ನನ್ನು ಮದ್ವೆಯಾಗದಿದ್ರೆ ಆ್ಯಸಿಡ್ ಹಾಕ್ತಿನಿ- ವಿದ್ಯಾರ್ಥಿನಿಗೆ ಯುವಕನಿಂದ ಬೆದರಿಕೆ

ಭೋಪಾಲ್: ಮುಸ್ಲಿಂ(Muslim) ವ್ಯಕ್ತಿಯೊಬ್ಬ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು(Nursing Student) ಹಿಂಬಾಲಿಸಿ ಆಕೆಗೆ ಇಸ್ಲಾಂಗೆ ಮತಾಂತರಗೊಂಡು(convert) ಮದುವೆಯಾಗದಿದ್ದರೆ ಆ್ಯಸಿಡ್ ಹಾಕುವುದಾಗಿ ಬೆದರಿಕೆ ಹಾಕಿದ ಘಟನೆ ಮಧ್ಯಪ್ರದೇಶದಲ್ಲಿ(madhya pradesh) ನಡೆದಿದೆ.

ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 22 ವರ್ಷದ ಮೋನು ಮನ್ಸೂರಿ 19 ವರ್ಷದ ವಿದ್ಯಾರ್ಥಿನಿಗೆ ಈ ರೀತಿ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತೆ ಹಾಗೂ ಆರೋಪಿ ಇಬ್ಬರೂ ಒಂದೇ ಗ್ರಾಮದವರಾಗಿದ್ದಾರೆ. ಮನ್ಸೂರಿ ಆಕೆಯ ನಂಬರ್‍ನ್ನು ಹೇಗೋ ಪಡೆದುಕೊಂಡಿದ್ದ. ಅದಾದ ಬಳಿಕ ವಾಟ್ಸಪ್‍ನಲ್ಲಿ ಮೆಸೇಜ್ ಮಾಡಿ, ಮದುವೆ ಪ್ರಸ್ತಾಪವನ್ನು ಇಟ್ಟಿದ್ದ. ಅಷ್ಟೇ ಅಲ್ಲದೇ ಇಸ್ಲಾಂ ಧರ್ಮಕ್ಕೆ ಮತಾಂತರವಾಗಬೇಕು. ಅದನ್ನು ನಿರಾಕರಿಸಿದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ವಿದ್ಯಾರ್ಥಿನಿ ಹಿಂದೂ ಸಂಘಟನೆಗಳ ಸಹಾಯ ಪಡೆದು ಪೊಲೀಸರಿಗೆ ದೂರು ನೀಡಿದ್ದಾಳೆ.

ದೂರಿನಲ್ಲಿ ಆಕೆ, ಮೋನು ಮನ್ಸೂರಿ ಮುಸ್ಲಿಂ ವ್ಯಕ್ತಿ. ಆತ ನಾನು ಕಾಲೇಜಿಗೆ ಹೋಗುವಾಗ ಪ್ರತಿನಿತ್ಯ ನಮ್ಮ ಊರಿನಿಂದ ನನ್ನನ್ನು ಹಿಂಬಾಲಿಸುತ್ತಿದ್ದನು. ಒಂದು ದಿನ ನನ್ನನ್ನ ಕೈಹಿಡಿದು ನನ್ನ ಮೇಲೆ ಹೂ ಎಸೆದಿದ್ದ. ಇದರಿಂದ ಭಯಗೊಂಡು ನಾನು ಕೂಗಿದ್ದೆ. ಆದರೆ ಆತ ಕೋಪಗೊಂಡು ಮದುವೆಗೆ(Marriage) ನಿರಾಕರಿಸಿದರೆ ನಿನ್ನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದ. ಅಷ್ಟೇ ಅಲ್ಲದೇ ಮನ್ಸೂರ್ ಸಾಮಾಜಿಕ ಜಾಲತಾಣದಲ್ಲಿ ಬಂದೂಕು ಹಿಡಿದಿರುವ ಅವನ ಫೋಟೋವನ್ನು ನನಗೆ ಕಳುಹಿಸಿದ್ದನು ಎಂದು ತಿಳಿಸಿದ್ದಾಳೆ. ಘಟನೆಗೆ ಸಂಬಂಧಿಸಿ ಪೊಲೀಸರು(Police) ಪ್ರಕರಣ ದಾಖಲಿಸಿಕೊಂಡು ಮೋನು ಮನ್ಸೂರಿಯನ್ನು ಬಂಧಿಸಿದ್ದಾರೆ(Arrest). ಇದನ್ನೂ ಓದಿ: ಉಗ್ರರಿಗೆ ಆಶ್ರಯ ನೀಡಿದ್ದ ಮದರಸಾವನ್ನು ಧ್ವಂಸಗೊಳಿಸಿದ ಮುಸ್ಲಿಮರು

ಮನ್ಸೂರಿ ಈ ರೀತಿ ಈ ಹಿಂದೆ ಜನವರಿ ತಿಂಗಳಲ್ಲಿ ಮತ್ತೊಬ್ಬ ಮಹಿಳೆಗೆ ಬೆದರಿಕೆ ಹಾಕಿದ್ದ. ಇದಾದ ಬಳಿಕ ಮನ್ಸೂರಿಯನ್ನು ಬಂಧಿಸಲಾಗಿತ್ತು. ಆನಂತರ ಆತ ಜಾಮೀನಿಂದ ಹೊರಬಂದಿದ್ದ. ಇದನ್ನೂ ಓದಿ: ಮಿಸ್ಸಿಂಗ್ ಮಿನಿಸ್ಟರ್ಸ್ – ಬೆಂಗಳೂರು ಮಂತ್ರಿ, ಸಂಸದರ ವಿರುದ್ಧ ಕಾಂಗ್ರೆಸ್ ಕಿಡಿ

Live Tv

Leave a Reply

Your email address will not be published.

Back to top button