ಕನ್ನಡದ ಹೆಸರಾಂತ ನಟ ಡಾಲಿ ಧನಂಜಯ್ (Dolly Dhananjay) ಇಂದು ತಮ್ಮ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ವಿಶೇಷ ಗೌರವವೊಂದು ದೊರಕಿದ್ದು, ಯುಎಸ್‍ನ (America) ನ್ಯೂಯರ್ಕ್ ಸಿಟಿಯ ಪ್ರತಿಷ್ಠಿತ ಕಟ್ಟಡದಲ್ಲಿ ಡಾಲಿ ಹುಟ್ಟುಹಬ್ಬದ ಶುಭಾಶಯ ಬೋರ್ಡ್ ಅನಾವರಣಗೊಂಡಿದೆ.
ಈ ಹಿಂದೆ ಸೂಪರ್ ಸ್ಟಾರ್ ರಜಿನಿಗೆ (Rajinikanth) ಇಂಥದ್ದೊಂದು ಗೌರವ ಸಿಕ್ಕಿತ್ತು. ನಂತರ ಇದೀಗ ಡಾಲಿ ಕೂಡ ಆ ಗೌರವನ್ನು ಪಾತ್ರರಾಗಿದ್ದು, ಇಂಥದ್ದೊಂದು ಗೌರವ ಪಡೆದ ಭಾರತದ ಎರಡನೇ ನಟ ಇವರಾಗಿದ್ದಾರೆ. ಮೊದಲ ಕನ್ನಡ ನಟನ ಹುಟ್ಟುಹಬ್ಬದ ವಿಡಿಯೋ ಪ್ರಸಾರ ಮಾಡಿದ ಹೆಗ್ಗಳಿಕೆ ಇವರದ್ದು. 15 ಸೆಕೆಂಡ್‍ನ ವಿಡಿಯೋವನ್ನು ಟೈಂ ಸ್ವ್ಕೇರ್ ಪ್ರಸಾರ ಮಾಡಿದೆ. ಇದನ್ನೂ ಓದಿ:ಚಂದ್ರಯಾನ ವ್ಯಂಗ್ಯ: ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು
ಜೈಲರ್ ಬಿಡುಗಡೆಗೂ ಮುನ್ನ ರಜಿನಿಯ ವಿಡಿಯೋ ಪ್ರಸಾರ ಮಾಡಿತ್ತು ಟೈಂ ಸ್ವ್ಕೇರ್ (Times Square), ಕರ್ನಾಟಕದ ಪಿಂಕ್ ಟಿಕೆಟ್ಸ್ ಪಿಆರ್‍ಓ ತಂಡದಿಂದ ಡಾಲಿಯ ಶುಭಾಶಯ ಇದೀಗ ಬಿತ್ತರಗೊಂಡಿದೆ. ಡಾಲಿಯ ಹುಟ್ಟುಹಬ್ಬ ಹಿನ್ನಲೆಯಲ್ಲಿ ಹುಟ್ಟು ಹಬ್ಬಕ್ಕೂ ಒಂದು ದಿನ ಮುಂಚಿತವಾಗಿ ಅಮೆರಿಕಾದ ಟೈಂ ಸ್ವ್ಕೇರ್ ನಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ನಿನ್ನೆ ರಾತ್ರಿಯಿಂದಲೇ ಡಾಲಿ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳಿಗಾಗಿಯೇ ಡಾಲಿ ವಿಶೇಷ ಕಾರ್ಯಕ್ರವೊಂದನ್ನು ಆಯೋಜನೆ ಮಾಡಿದ್ದಾರೆ. ಇಂದು ಮಧ್ಯಾಹ್ನದವರೆಗೂ ಧನಂಜಯ್ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ ನಲ್ಲಿ ಅಭಿಮಾನಿಗಳ ಜೊತೆ ಇರಲಿದ್ದಾರೆ.
Web Stories