ಬ್ರೆಸಿಲಿಯಾ: ಬ್ರೆಜಿಲ್‌ನ ದಟ್ಟ ಅಮೆಜಾನ್ ಕಾಡಿನಲ್ಲಿ 26 ವರ್ಷಗಳ ಕಾಲ ಒಂಟಿಯಾಗಿ ಜೀವನ ಸಾಗಿಸಿದ್ದ ಬುಡಕಟ್ಟು ಜನಾಂಗವೊಂದರ ಕಟ್ಟ ಕಡೆಯ ವ್ಯಕ್ತಿ ಸಾವನ್ನಪ್ಪಿದ್ದಾನೆ.
ವಿಶ್ವದ ಏಕಾಂಗಿ ಮನುಷ್ಯ ಎಂದು ಕರೆಯಲಾಗುತ್ತಿದ್ದ ವ್ಯಕ್ತಿ, ಕಾಡಿನಲ್ಲಿ ಪ್ರಾಣಿಗಳನ್ನು ಹಿಡಿಯಲು ದೊಡ್ಡ ದೊಡ್ಡ ಗುಂಡಿಗಳನ್ನು ತೋಡುತ್ತಿದ್ದ. ಇದಕ್ಕಾಗಿ ಆತನನ್ನು ಮ್ಯಾನ್ ಆಫ್ ದಿ ಹೋಲ್ ಎಂದೂ ಕರೆಯಲಾಗುತ್ತಿತ್ತು. ಈತ ತನ್ನ ಗುಡಿಸಲಿನಲ್ಲಿ ಶನಿವಾರ ಶವವಾಗಿ ಪತ್ತೆಯಾಗಿದ್ದಾನೆ. ತನ್ನ 60ರ ವಯಸ್ಸಿನಲ್ಲಿ ಸ್ವಾಭಾವಿಕವಾಗಿಯೇ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.
Advertisement
ಈ ಬುಡಕಟ್ಟು ವ್ಯಕ್ತಿಯ ಹೆಸರು, ಭಾಷೆ ಎಲ್ಲವೂ ಭಿನ್ನವಾಗಿದ್ದು, ಆತನ ಬಳಿ ಮನುಷ್ಯರು ಸುಳಿದಾಡಿದರೆ ಆತ ಅಲ್ಲಿಂದ ಓಡಿ ಹೋಗುತ್ತಿದ್ದ. ಆತನನ್ನು ಹಲವು ಬಾರಿ ಕಾಡಿನಿಂದ ಬಿಡಿಸಿ ನಗರಕ್ಕೆ ಕರೆದುಕೊಂಡು ಬರಲು ಪ್ರಯತ್ನಿಸಲಾಗಿದ್ದು, ವಿಫಲವಾಗಿತ್ತು. ಬಳಿಕ ಆತನನ್ನು ಸ್ವತಂತ್ರನಾಗಿ ಇರಲು ಬಿಡಲಾಗಿತ್ತು. ಇದನ್ನೂ ಓದಿ: ಇರಾಕ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ – ಗುಂಡಿನ ದಾಳಿಗೆ 23 ಮಂದಿ ಸಾವು, 300 ಜನರಿಗೆ ಗಾಯ
Advertisement
Advertisement
ವರದಿಗಳ ಪ್ರಕಾರ ಈ ವ್ಯಕ್ತಿಯ ಜನಾಂಗದ ಬಹುಪಾಲು ಜನರು 1970 ರಿಂದ 1980ರ ವೇಳೆ ಸಾವನ್ನಪ್ಪಿದ್ದರು. ಬಳಿಕ ಉಳಿದುಕೊಂಡಿದ್ದ 6 ಸದಸ್ಯರ ಕುಟುಂಬ 1995ರಲ್ಲಿ ಅಕ್ರಮ ಗಣಿಗಾರರ ದಾಳಿಗೆ ಬಲಿಯಾಗಿದ್ದರು. ಆ ದಾಳಿಯಲ್ಲಿ ಉಳಿದುಕೊಡ ಏಕೈಕ ವ್ಯಕ್ತಿ ಈತನಾಗಿದ್ದ. ಇದನ್ನೂ ಓದಿ: ಡ್ರಗ್ಸ್ ಖರೀದಿಗೆ ಫೇಕ್ ಐಡಿ ಬಳಸುತ್ತಿದ್ದ ಮೈಕಲ್ ಜಾಕ್ಸನ್
Advertisement
ಈ ಬುಡಕಟ್ಟು ವ್ಯಕ್ತಿಯ ನಿಧನಕ್ಕೆ ಬುಡಕಟ್ಟು ಜನರ ಬಗ್ಗೆ ಅಧ್ಯಯನ ಮಾಡುವ ಸರ್ವೈವಲ್ ಇಂಟರ್‌ನ್ಯಾಷನಲ್ ಸಂಸ್ಥೆ ಕಂಬನಿ ಮಿಡಿದಿದೆ.