ಚಾಲಕನಿಲ್ಲದೇ 13 ಕಿಮೀ ಸಂಚರಿಸಿದ ರೈಲ್ವೆ ಎಂಜಿನ್-ತಪ್ಪಿದ ಭಾರೀ ದುರಂತ

Public TV
1 Min Read
GLB TRIN AV 3

ಕಲಬುರಗಿ: ರೈಲ್ವೇ ಎಂಜಿನ್‍ ವೊಂದು ಚಾಲಕನಿಲ್ಲದೇ ಸುಮಾರು 13 ಕಿಮೀ ಸಂಚರಿಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್‍ನಲ್ಲಿ ನಡೆದಿದೆ.

ಚಿತ್ತಾಪುರದ ವಾಡಿ ಜಂಕ್ಷನ್‍ನ ಪ್ಲಾಟ್‍ ಫಾರಂ 4 ರಲ್ಲಿ ಚೆನ್ನೈ-ಮುಂಬೈ ರೈಲಿಗೆ ಜೋಡಣೆಯಾಗಬೇಕಿದ್ದ ಎಂಜಿನ್ ನಿಲ್ಲಿಸಲಾಗಿತ್ತು. ಆದರೆ ಚಾಲಕ ಎಂಜಿನ್ ಆಫ್ ಮಾಡದೇ ಕೆಳಗಿಳಿದಿದ್ದ ಕಾರಣ ವಾಡಿ ಜಂಕ್ಷನ್ ನಿಂದ ನಾಲವಾರ ವರೆಗೆ ಸಂಚರಿಸಿದೆ.

GLB TRIN AV 1

ರೈಲ್ವೆ ಎಂಜಿನ್ ಪ್ಲ್ಯಾಟ್‍ ಫಾರಂನಲ್ಲಿ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದ ತಕ್ಷಣ ರೈಲ್ವೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ. ನಂತರ ಎಂಜಿನ್ ಅನ್ನು ಸುಮಾರು 13 ಕಿ.ಮೀ ದೂರ ಬೈಕ್‍ನಲ್ಲಿ ಹಿಂಬಾಲಿಸಿ ನಾಲವಾರ ಪ್ರದೇಶದಲ್ಲಿ ತಡೆದಿದ್ದಾರೆ. ಅದೃಷ್ಟವಶತ್ ಈ ಸಂದರ್ಭದಲ್ಲಿ ರೈಲ್ವೇ ಎಂಜಿನ್ ಸಂಚರಿಸಿದ ಮಾರ್ಗದಲ್ಲಿ ಯಾವುದೇ ರೈಲು ಎದುರುಬಾರದ ಕಾರಣ ಭಾರೀ ಅನಾಹುತ ತಪ್ಪಿದೆ.

ಇದನ್ನೂ ಓದಿ: ರೈಲು ನಿಲ್ಲಿಸಿ ಗಾರ್ಡ್ ನನ್ನು ಹುಡುಕಾಡಿದ ಲೋಕೋಪೈಲಟ್ : ವಿಡಿಯೋ ವೈರಲ್

ರೈಲ್ವೆ ಸಿಬ್ಬಂದಿಗಳ ನಿರ್ಲಕ್ಷ್ಯ ಕುರಿತು ತನಿಖೆ ನಡೆಸುವುದಾಗಿ ಪ್ರಭಾರಿ ಸ್ಟೇಷನ್ ಮಾಸ್ಟರ್ ಜೆ.ಎನ್ ಪರಿಡಾ ಮಾಹಿತಿ ನೀಡಿದ್ದಾರೆ. ಘಟನೆಯ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

GLB TRIN AV 2

GLB TRIN AV 6

wadi 2

wadi 3

Share This Article
Leave a Comment

Leave a Reply

Your email address will not be published. Required fields are marked *