-830 ಭಾರತೀಯರು, 336 ವಿದೇಶಿ ಆಟಗಾರರು ಹರಾಜಿಗೆ ನೋಂದಣಿ
ಅಬುಧಾಬಿ: ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆಟಗಾರರ ಮಿನಿ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ನವೆಂಬರ್ 30ರ ವರೆಗೂ ಹರಾಜಿನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು (Auction Players Registration) ಆಟಗಾರರಿಗೆ ಅವಕಾಶವಿತ್ತು. ಶುಕ್ರವಾರ ಐಪಿಎಲ್ ಫ್ರಾಂಚೈಸಿಗಳೊಂದಿಗೆ ಹಂಚಿಕೊಂಡ ಪಟ್ಟಿಯಲ್ಲಿ ಒಟ್ಟು 1,166 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
Advertisement
2023ರ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅನೇಕ ಆಟಗಾರರು ಐಪಿಎಲ್ ಹರಾಜಿಗೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಕಿವೀಸ್ ಆಟಗಾರ ರಚಿನ್ ರವೀಂದ್ರ (Rachin Ravindra), ಡೇರಿಲ್ ಮಿಚೆಲ್, ವಿಶ್ವಕಪ್ ವಿಜೇತ ಆಸೀಸ್ ತಂಡದಿಂದ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc), ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್ (Travis Head) ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಚಿನ್ ರವಿಂದ್ರ ಅವರ ಮೂಲ ಬೆಲೆ 50 ಲಕ್ಷ ರೂ.ಗೆ ನಿಗದಿಯಾಗಿದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ
Advertisement
Advertisement
ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ 2015ರಲ್ಲಿ ಐಪಿಎಲ್‌ನಲ್ಲಿ ಆಡಿದ್ದರು. ಆರ್‌ಸಿಬಿ ತಂಡದಲ್ಲಿ ಮಿಂಚಿದ್ದರು. ಆ ನಂತರ ಐಪಿಎಲ್‌ನಿಂದ ದೂರ ಉಳಿದಿದ್ದರು. 2023ರಲ್ಲಿ ಆಶಸ್ ಟೂರ್ನಿಯಿಂದಾಗಿ ಐಪಿಎಲ್‌ನಿಂದ ಹೊರಗುಳಿದ್ದರು. ಇನ್ನೂ ಜೋಶ್ ಹೇಝಲ್ವುಡ್, ಲೀಗ್ ಸುತ್ತಿನ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವುದು ಅನುಮಾನವಿದೆ. ಹೀಗಿದ್ದೂ ಅವರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದನ್ನೂ ಓದಿ: 2009ರಿಂದ ಸ್ಟೇಡಿಯಂ ಕರೆಂಟ್ ಬಿಲ್ ಕಟ್ಟಿಲ್ಲ – ಭಾರತ-ಆಸೀಸ್ 4ನೇ T20 ಪಂದ್ಯಕ್ಕೆ ಹೊಸ ತಲೆನೋವು!
Advertisement
ಈ ಬಾರಿ ಐಪಿಎಲ್ ಮಿನಿ ಹರಾಜಿಗೆ ನೋಂದಣೆ ಮಾಡಿಕೊಂಡಿರುವ ಒಟ್ಟು 1,166 ಆಟಗಾರರ ಪೈಕಿ 830 ಭಾರತೀಯ ಆಟಗಾರರಿದ್ದರೆ, 336 ವಿದೇಶಿ ಆಟಗಾರರು ಇದ್ದಾರೆ. ಈ ಪಟ್ಟಿಯಲ್ಲಿ 212 ಕ್ಯಾಪ್ಡ್, 909 ಅನ್‌ಕ್ಯಾಪ್ಡ್ ಮತ್ತು 45 ಅಸೋಸಿಯೇಟ್ ದೇಶದ ಆಟಗಾರರು ಸೇರಿದ್ದಾರೆ. 830 ಭಾರತೀಯರ ಪೈಕಿ ವರುಣ್ ಆರೋನ್, ಕೆ.ಎಸ್ ಭರತ್, ಕೇದಾರ್ ಜಾಧವ್, ಸಿದ್ಧಾರ್ಥ್ ಕೌಲ್, ಧವಳ್ ಕುಲಕರ್ಣಿ, ಶಿವಂ ಮಾವಿ, ಶಹಬಾಜ್ ನದೀಮ್, ಕರುಣ್ ನಾಯರ್, ಮನೀಶ್ ಪಾಂಡೆ, ಚೇತನ್ ಸಕಾರಿಯ, ಮನ್‌ದೀಪ್ ಸಿಂಗ್, ಬರೀಂದರ್ ಸ್ರಾನ್ ಸೇರಿದಂತೆ 18 ಆಟಗಾರರಿದ್ದಾರೆ. ಇದನ್ನೂ ಓದಿ: ಮಗನ ಆಟ ಕಣ್ತುಂಬಿಕೊಳ್ಳಲು ಪತ್ನಿಯೊಂದಿಗೆ ಮೈಸೂರಿಗೆ ಆಗಮಿಸಿದ ರಾಹುಲ್ ದ್ರಾವಿಡ್