ಬೆಳಗಾವಿ: ಯುವತಿಯ ಕೈಗೆ ಹಗ್ಗ ಕಟ್ಟಿ ಸಂಬಂಧಿಕರೇ ದೈಹಿಕವಾಗಿ ಹಿಂಸೆ ನೀಡಿದ ಅಮಾನವಿಯ ಘಟನೆ ಅಥಣಿಯಲ್ಲಿ ನಡೆದಿದೆ.
ಮೌಢ್ಯ ಮಸೂದೆ ಅಂಗೀಕಾರ ಮಾಡಿದ್ದರೂ ರಾಜ್ಯದಲ್ಲಿ ವಾಮಾಚಾರ, ಭೂತ ಬಿಡಿಸೋ ಕಾರ್ಯ ನಡಯುತ್ತಿದೆ. ಇದಕ್ಕೆ ಉದಾಹರಣೆಯೆಂಬಂತೆ ಭೂತ ಹಿಡಿದಿದೆ ಎಂದು ಯುವತಿಯ ಸಂಬಂಧಿಕರೇ ಆಕೆಯ ಕೈಗೆ ಹಗ್ಗ ಕಟ್ಟಿ ಎಳೆದಾಡಿದ್ದಾರೆ. ಯುವತಿಯ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ಸಂಬಂಧಿಕರು ಭೂತ ಬಿಡಿಸಲು ಹಗ್ಗ ಕಟ್ಟಿ ಮಾಂತ್ರಿಕನ ಬಳಿ ಎಳೆದೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ.
ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.